ಹೊನ್ನಾಳಿ,14: ಸಂತ ಸೇವಲಾಲ್‍ರ ಜನ್ಮಸ್ಥಳ ಸಂತಸೇವಾಲಾಲ್‍ರ ಮತ್ತು ಮರಿಯಮ್ಮ ದೇವಿ ದೇಗುಲ ಪ್ರತಿಷ್ಠಾನ ರಜತ ಮಹೋತ್ಸವ ಸಮಾರಂಭದಲ್ಲಿ ಬಂಜಾರ ಸಂಸ್ಕøತಿಯ ಸನಾತನ ಧರ್ಮದ ಹಾಗೂ ಮೂಲ ಪೀಠದ ಪರಂಪರೆಯ ಗುರುಗಳನ್ನು ಭಕ್ತಿ,ಗೌರವದಿಂದ ಕಾಣುವ ಸ್ಥಿತಿ ನಿರ್ಮಾಣವಾಗಬೇಕಿದೆ ಎಂದು ನೆಲಹೊನ್ನೆ ತಾಂಡದ ಶ್ರೀಬಾಲಕೃಷೃ ಮಹರಾಜರು ಹೇಳಿದರು.
ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾವು ಡಾ.ಜಗದ್ಗುರು ರಾಮರಾವ್ ಮಹಾರಾಜರು ಮಹಾರಾಷ್ಟ್ರ ಇವರ ಶಿಷ್ಯರಾಗಿದ್ದು. ಈ ಪರಂಪರೆಯಿಂದಲೇ ಸಂಸ್ಕøತಿ ಹಾಗೂ ಸಂಸ್ಕಾರ ಭೋದನೆಯನ್ನು ಪಡೆದವರಾಗಿದ್ದೇವೆ ಹಾಗಾಗಿ ಈ ಕಾರಣ ಈ ಪೀಠದ ಬಗ್ಗೆ ಗೌರವ,ಪ್ರೀತಿ ನಿರ್ಮಾಣವಾಗುವ ಸ್ಥಿತಿಯನ್ನು ಎರಡು ದಿನ ನಡೆಯುವ ಕಾರ್ಯಕ್ರನಮದ ಆಯೋಜಕರಾದ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಈ ಬಗ್ಗೆ ತಿಳಿದು ನಡೆದಿದ್ದೆ ಆದರೆ ಸೌಹದಯುತ ಪರಿಸ್ಥಿತಿ ನಿರ್ಮಾಣವಾಗಲು ಸಾಧ್ಯವಾಗಲಿದೆ ಎಂದರು.
1985 ರ ಹಿಂದಿನಿಂದಿನಲೂ ಸಂತ ಸೇವಾಲಾಲ್ ಜನ್ಮಸ್ಥಳದಲ್ಲಿ ಬಂಜಾರ ಸಮೂದಾಯ ಕುಲ ಬಾಂಧವರ, ವಂಶದ ಪರಂಪರೆ ಇದ್ದು ಅಂತವರನ್ನು ಗುರುತಿಸಿದ್ದೆ ಆದಲ್ಲಿ ರಜತ ಮಹೋತ್ಸವಕ್ಕೆ ಒಂದು ಮೆರುಗು ಬರಲು ಸಾಧ್ಯವಾಗಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇತ್ತಿಚಿನ ದಿನಗಳಲ್ಲಿ ಬಂಜಾರ ಸಂಸ್ಕøತಿಯನ್ನು ಪ್ರತಿನಿದಿಸಲು ಹಾಗೂ ಸಮಾಜಕ್ಕೆ ಪರಂಪರೆಯನ್ನು ಪರಿಚಯಿಸಲು ಮಹಾಮಠ ಸಮಿತಿ ರಚನೆಗೊಂಡಿದ್ದು.ಈ ಸಭೆಯಲ್ಲಿ ಯಾವುದೆ ರಾಜಕಾರಣದ ನೆರಳು ಬಿಳದ ರೀತಿಯಲ್ಲಿ ಅರ್ಥ ಪೂರ್ಣ ಆಚರಣೆ ನಡೆದರೆ ನಿಜವಾದ ಅರ್ಥ ದೊರೆಯಲಿದೆ ಎಂದರು.
ಕಳೆದ ಕೆಲ ವರ್ಷಗಳಿಂದ ರಾಜ್ಯದಲ್ಲಿ ಆಳುವ ಎಲ್ಲಾ ಪಕ್ಷಗಳು ಸಂತಸೇವಾಲಾಲ್‍ರ ಜನ್ಮಸ್ಥಳದ ಅಭಿವೃದ್ದಿಗೆ ಮುಂದಾಗಿರುವುದರಲ್ಲಿ ಎರಡು ಮಾತಿಲ್ಲ.ಆದರೆ ಎರಡು ದಿನಗಳ ನಡೆಯುವ ಈ ಸಭೆ ಹಾಗೂ ಮತ್ತಿತರೆ ಮಹತ್ವದ ಸಭೆ ಸಮಾರಂಭಗಳು ರಾಜಕೀಯ ಬೇರೆಯದಂತೆ ನೋಡಿಕೋಳ್ಳುವ ಜಾಗೃತಿ ಮಹಾಮಠ ಸಮಿತಿ ಹೊಂದಬೇಕಿದೆ ಎಂದರು.
ಈ ಸಂದರ್ಭದಲ್ಲಿ ನೆಲಹೊನ್ನೆ ತಾಂಡದ ಪಿ.ಮುರಳಿಧರನಾಯ್ಕ,ಕರ್ನಾಟಕ ಹಿತ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಶಶಿಕುಮಾರ,ನೆಲಹೊನ್ನೆ ಅನಂತನಾಯ್ಕ ಇತರರು ಇದ್ದರು.