ನ್ಯಾಮತಿ MAY 16 ತಾಲ್ಲೂಕು ಸಂತ ಸೇವಾಲಾಲ್ ಅವರ ಜನ್ಮಸ್ಥಾನ ಸೂರಗೊಂಡನಕೊಪ್ಪ ಭಾಯಾಗಡ್ನಲ್ಲಿ ಸೋಮವಾರ ಸಂತ ಸೇವಾಲಾಲ್ ಮತ್ತು ಮರಿಯಮ್ಮದೇವಿ ದೇಗುಲ ಪ್ರತಿಷ್ಠಾಪನಾ ರಜತ ಮಹೋತ್ಸವ ಸಮಾರಂಭವನ್ನು ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಉದ್ಘಾಟಿಸಿದರು.
ಬಂಜಾರ ಸಮುದಾಯದ ಮುಖಂಡರುಯಾವುದೇ ಪಕ್ಷದಲ್ಲಿದ್ದರೂ ಪಕ್ಷಾತೀತವಾಗಿ ಸಮುದಾಯದಅಭಿವೃದ್ಧಿಗೆ ಸಮಯ ಮೀಸಲಿಡಬೇಕುಎಂದು ಹೂವಿನಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಹೇಳಿದರು.
ನ್ಯಾಮತಿತಾಲ್ಲೂಕು ಸಂತ ಸೇವಾಲಾಲ್ಅವರ ಜನ್ಮಸ್ಥಾನ ಸೂರಗೊಂಡನಕೊಪ್ಪ ಭಾಯಾಗಡ್ನಲ್ಲಿ ಸೋಮವಾರ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಆಯೋಜಿಸಿದ್ದ ಸಂತ ಸೇವಾಲಾಲ್ ಮತ್ತು ಮರಿಯಮ್ಮದೇವಿ ದೇಗುಲ ಪ್ರತಿಷ್ಠಾಪನಾ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರುಎರಡುವರೆ ದಶಕಗಳ ಹಿಂದೆ ಸೇವಾಲಾಲ್ ಮತ್ತು ಮರಿಯಮ್ಮದೇಗುಲ ಸಣ್ಣಗುಡಿಯಲ್ಲಿ ಪೂಜಿಸಲ್ಪಡುತ್ತಿದ್ದು, ಇಂದುದೊಡ್ಡಯಾತ್ರ ಸ್ಥಳವಾಗಿದೆ. ಬಂಜಾರ ಸಮುದಾಯಕ್ಕೆ 9 ಸಾವಿರ ವರ್ಷದಇತಿಹಾಸವಿದೆ. ಸಮುದಾಯ ಶೈಕ್ಷಣಿಕವಾಗಿ ಬೆಳೆಯಬೇಕಿದೆ ಎಂದರು.
ತಾವು ಹಾಗೂ ಶಾಸಕ ಕುಡಚಿರಾಜೀವಅವರು ಎಸ್ಸಿ:ಎಸ್ಟಿ ಸಮಿತಿ ಸದಸ್ಯರಿದ್ದು, ಮೀಸಲಾತಿ ಮತ್ತು ಸದಾಶಿವ ಆಯೋಗ ವರದಿ ಜಾರಿ ಮಾಡುವ ಬಗ್ಗೆ ಸರ್ಕಾರದಲ್ಲಿಚರ್ಚಿಸುವುದಾಗಿ ತಿಳಿಸಿದರು.
ಸಂತ ಸೇವಾಲಾಲ್ಜನ್ಮಸ್ಥಾನ ಮಹಾಮಠ ಸಮಿತಿಉಪಾಧ್ಯಕ್ಷಡಾ.ಎಲ್. ಈಶ್ವರನಾಯ್ಕ ಮಾತನಾಡಿ, 25 ವರ್ಷಗಳಿಂದ ದೇಗುಲ ಅಭಿವೃದ್ದಿಗೆ ಶ್ರಮಿಸಿದ ಹಾಗೂ ಶ್ರಮಿಸುತ್ತಿರುವಗಣ್ಯರನ್ನು ಸನ್ಮಾನಿಸುತ್ತಿರುವುದಾಗಿ ತಿಳಿಸಿದರು.
ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕನಾಯ್ಕ ಮಾತನಾಡಿ, ಬಂಜಾರ ಸಮುದಾಯಉಡಿಗೆತೊಡಿಗೆ ಸೀಮಿತವಾಗದೆ, ಸಂಸ್ಕøತಿ ಕಲೆ ವಿಚಾರಗಳಲ್ಲಿ ರಾಷ್ಟ್ರಮಟ್ಟದಲ್ಲಿ ಬೆಳೆಯುವಂತೆ ಮಾಡಬೇಕುಎಂದರು.
ಮುಖ್ಯಮಂತ್ರಿರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಬಂಜಾರ ಸಮುದಾಯದಲ್ಲಿಯವಕರು ಮತಾಂತರವಾಗುತ್ತಿರುವ ಬಗ್ಗೆ ವದಂತಿಇದ್ದು, ಅಂತಹವರನ್ನು ಮರಳಿ ಕರೆತರುವ ಬಗ್ಗೆ ಸಮಾಜದ ಮುಖಂಡರು ಚಿಂತನೆ ಮಾಡಬೇಕಿದೆಎಂದು ಸಲಹೆ ನೀಡಿದರು.
ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಮುಖಂಡರಾದ ಶಿವಮೂರ್ತಿನಾಯ್ಕ ಮಾತನಾಡಿದರು.
ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮತಿ ಅಧ್ಯಕ್ಷ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿತಾಂಡಅಭಿವೃದ್ದಿ ನಿಗಮ ಅಧ್ಯಕ್ಷ ಪಿ.ರಾಜೀವ, ಬಿ. ಬಾಲರಾಜ, ರಾಮನಾಯ್ಕ,ಆರ್.ವಿನಾಯ್ಕ, ಚೂಡನಾಯ್ಕ, ಎಸ್.ಎನ್. ಗೋಪಾಲನಾಯ್ಕ, ಸವಿತಾಬಾಯಿ, ಮಾರುತಿನಾಯ್ಕ, ಶಿವರಾಮನಾಯ್ಕ, ಓಂಕಾರನಾಯ್ಕ, ಸುರೇಂದ್ರನಾಯ್ಕ, ಜಯದೇವನಾಯ್ಕ, ಜಲಜಾನಾಯ್ಕ, ಅನಸೂಯಾ, ಆರ್ಚಕ ಸೇವ್ಯಾನಾಯ್ಕ, ಓಂಕಾರನಾಯ್ಕಇದ್ದರು.
ಕರ್ನಾಟಕ ಬೌದ್ಧ ಸಮಾಜದರಾಜ್ಯಾಧ್ಯಕ್ಷ ಪ್ರೋ. ಹ.ರಾ. ಮಹೇಶಬೌದ್ಧಅವರು ಸೇವಾಲಾಲ್, ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳು ಹಾಗೂ ಭಾರತದ ಸಂವಿಧಾನಕುರಿತುಉಪನ್ಯಾಸ ನೀಡಿದರು.
ಮಹಾಮಠ ಸಮತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರನಾಯ್ಕ ಸ್ವಾಗತಿಸಿದರು.