ಹೊನ್ನಾಳಿ,16: ಸಾಮನ್ಯ ರೈತರು ಸಹ ಪ್ರಗತಿಯತ್ತ ಹೆಜ್ಜೆ ಹಾಕಲಿಕ್ಕೆ ಹಾಗೂ ಸ್ವಾಭಿಮಾನಿಯಾಗಿ ಜೀವನ ಸಾಗಿಸಲು ಸಹಕಾರ ಬ್ಯಾಂಕ್‍ಗಳು ನಿರಂತರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ ಪಟ್ಟಣದಲ್ಲಿ ಡಿಸಿಸಿ ಬ್ಯಾಂಕಿನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಉತ್ಕøಷ್ಟ ಸೇವೆ ನೀಡುವಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳು ಸೇರಿದಂತೆ ಎಲ್ಲಾ ಸಹಕಾರ ಬ್ಯಾಂಕ್‍ಗಳ ರೈತರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಅರ್ಹತೆ ಆಧಾರದ ಮೇಲೆ ವಿತರಿಸಿ ಯಾವ ರೈತರಿಗೂ ಅನ್ಯಾಯ ಆಗಲಿಕ್ಕೆ ಅಧಿಕಾರಿಗಳು ಬಿಡಬಾರದು ಎಂದು ಸೂಚಿಸಿದರು.
ರೈತರು ಸಹ ಕೃಷಿ ಸಾಲ ಪಡೆಯುವಾಗ ಇರುವ ಹುಮ್ಮಸ್ಸಿನಲ್ಲಿಯೇ ಸಾಲವನ್ನು ಮರುಪಾವತಿ ಮಾಡುವಾಗಲೂ ಇರಬೇಕು ಆಗ ನಿಮ್ಮಂತಹ ರೈತರಿಗೆ ಅನುಕೂಲವಾಗುತ್ತದೆ, ಈ ನಿಟ್ಟಿನಲ್ಲಿ ರೈತರು ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಿ ಎಂದು ರೈತರಲ್ಲಿ ಅವರು ಮನವಿ ಮಾಡಿದರು.
ರೈತರಲ್ಲಿ ಪರಸ್ಪರ ಸಹಕಾರದ ಮನೋಭಾವವಿರದ್ದರೆ ಎಂತಹ ಆರ್ಥಿಕ ಸಂಕಷ್ಟದ ನಡುವೆಯೂ ಸಹಕಾರ ಸಂಘ ಅಥವಾ ಬ್ಯಾಂಕ್‍ಗಳು ಯಶಸ್ವಿಯತ್ತ ದಾಪುಗಾಲು ಹಾಕುತ್ತವೆ ,ಸಂಘದಲ್ಲಿ ಸಹಕಾರದ ಮೇಲಿನ ನಂಬಿಕೆ ಹಾಗೂ ಛಲದಿಂದ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ನಮ್ಮ ಸರ್ಕಾರ ಸಹಕಾರ ರಂಗಕ್ಕೆ ಹೆಚ್ಚು ಬಲ ತುಂಬುತ್ತಿದೆ ಅದರ ಮುಖಾಂತರ ರೈತರಿಗೆ ಅನುಕೂಲವಾಗುತ್ತದೆ ಎಂದರು.
ಸಹಕಾರ ತತ್ವ ಬೆಳೆಯಲು ಸಹಕಾರ ರಂಗದ ಪಿತಮಹಾ ಎಂದೇ ಖ್ಯಾತರಾಗಿದ್ದ ಸಿದ್ದನಗೌಡರನ್ನು ಈ ಸಮಯದಲ್ಲಿ ಸ್ಮರಿಸಲೇ ಬೇಕು ಅವರು ಹಾಕಿದ ಹಾಲದ ಮರ ಪ್ರಸ್ತು ದಿನಗಳಲ್ಲಿ ಎಮ್ಮರವಾಗಿ ಬೆಳೆದಿದೆ ಸಹಕಾರ ತತ್ವವನ್ನು ಎಲ್ಲರೂ ಪಾಲಿಸಿ ಬೇಳಸಬೇಕು ಎಂದರು.
ಡಿಸಿಸಿ ಬ್ಯಾಂಕಿನ ಅಧ್ಯಕ್ಷ ವೇಣುಗೋಪಾಲರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ 1450 ಕೋಟಿ ವಹಿವಾಟು ನಡೆಯುತ್ತಿದೆ ಎಂದ ಅವರು ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳು ಹಾಗೂ ರೈತರು ನಮ್ಮ ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇಡಬೇಕು ಎಂದ ಅವರು ನಮ್ಮ ಬ್ಯಾಂಕಿನಲ್ಲಿ ಬಡ್ಡಿ ದರ ಹೆಚ್ಚು ಇದೆ ಎಂದರು.
ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಸಣ್ಣ ರೈತರಿಗೂ ಸಾಲ ಸಿಗುವಂತಾಗಬೇಕು ಹಾಗೂ ಸಾಲ ತೆಗೆದುಕೊಳ್ಳುವುದಕ್ಕೆ ನಿಯಮವನ್ನು ಸರಳಿಕರಣ ಮಾಡಿ ಎಂದು ಹೇಳಿದರು.
ಸಹಕಾರ ಸಂಘಗಳಿಗೆ ದಯವಿಟ್ಟು ರಾಜಕೀಯವನ್ನು ತರಬೇಡಿ,ಇದರಿಂದ ಸಹಕಾರ ಸಂಘಗಳಿಗೆ ಇರುವ ಗೌರವವೂ ಹಾಳಾಗುತ್ತದೆ,ಇತ್ತೀಚಿಗೆ ಹಾಲು ಉತ್ಪಾದಕರ ಸಂಘದಲ್ಲೂ ಗುಂಪು ಗುಂಪುಗಳ ನಡುವೆ ಚುನಾವಣೆಗಳು ನಡೆಯುತ್ತಿರುವುದು ಬೇಸರದ ಸಂಗತಿ ಎಂದರು.
ನಿರ್ದೇಶಕರಾದ ಕೆಂಗಲಹಳ್ಳಿ ಷಣ್ಮುಖಪ್ಪ, ಶಿಮೂಲ್ ನಿರ್ದೇಶಕ ಹನುಮನಹಳ್ಳಿ ಬಸವರಾಜಪ್ಪ ಮಾತನಾಡಿದರು.
ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಬಿ.ಶೇಖರಪ್ಪ,ಪುರಸಭಾ ಅಧ್ಯಕ್ಷ ಹೋಬಳದಾರ್,ನಿರ್ದೇಶಕರಾದ ಬಿ,ಹಾಲೇಶಪ್ಪ,ಪಾಲಕ್ಷಪ್ಪ,ಜೀವನಪ್ರಕಾಶ್,,ಸಿಇಒ ತಾವರ್ಯಾನಾಯ್ಕ್,ಮರಿಗೇಂದ್ರಪ್ಪ,
ಹೊನ್ನಾಳಿ ಡಿಸಿಸಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ನಾಗರಾಜ್,ಲೋಕೇಶ್,ವಿಜಯಕುಮಾರ್,ನ್ಯಾಮತಿ ಶಾಖಾ ವ್ಯಸ್ಥಾಪಕ ನಾಗರಾಜ್,ಕ್ಷೇತ್ರಾಧಿಕಾರಿ ಸುರೇಶ್,ಸಾಸ್ವೇಹಳ್ಳಿ ಶಾಖಾ ವ್ಯವಸ್ಥಾಪಕ ಗಣೇಶ್,ಕುಂದೂರು ಶಾಕಾ ವ್ಯಸ್ಥಾಪಕ ಮಧುಸೂಧನ್ ಹಾಗೂ ಇತರರು ಇದ್ದರು.