ಹೊನ್ನಾಳಿ; ಹಿರೇಕಲ್ಮಠದಲ್ಲಿ ಕಾರ್ಟಿವಾ ಅಗ್ರಿಸೈನ್ಸ್ ಕಂಪನಿ ವತಿಯಿಂದ ಪಯೋನಿಯರ ಮೆಕ್ಕೆಜೋಳ ಬೆಳೆ ವಿಜಯದಿನವನ್ನು ಆಚರಿಸಲಾಯಿತು.
ಕಂಪನಿಯ ಜನರಲ್ ಮ್ಯೆನೇಜರ್ ರಾಜಿಬ್ ಚಟರ್ಜಿಯವರು ರೈತರನ್ನು ಉದ್ದೇಶಿಸಿ ಮಾತನಾಡಿ ಕಂಪನಿಯ ದ್ಯೇಯ, ಉದ್ದೇಶಗಳ ಮಾಹಿತಿಯನ್ನು ರೈತರಿಗೆ ವಿವರಿಸಿದರು.
ಕಂಪನಿಯ ಜೊನಲ್ ಮ್ಯೆನೇಜರ್ ಮಲ್ಲಿಕಾರ್ಜುನ ಕಣ್ಣೂರು ಮಾತನಾಡಿ ಕಂಪನಿಯ ಪಿ3304 ತಳಿಯ ಮೆಕ್ಕೆಜೋಳ ಬೆಳೆಯು,ಉದ್ದನೆಯ ತೆನೆ ಹಾಗು ಕಿರಿದಾದ ಬೆಂಡು ಹೆಚ್ಚು ರೋಗ ನಿರೋದಕ ಶಕ್ತಿಯೊಂದಿಗೆ ಅಧಿಕ ಒಕ್ಕಣಿಯ ಪ್ರಮಾಣದ ಬಗ್ಗೆ ಮಾಹಿತಿ ನೀಡಿದರು.
ಮಾರ್ಕೆಟಿಂಗ್ ಮ್ಯೆನೇಜರ್ ಅವಿನಾಶ್ ಮಾತನಾಡಿ ಹೊನ್ನಾಳಿ,ನ್ಯಾಮತಿ,ಚನ್ನಗಿರಿ ತಾಲ್ಲೂಕುಗಳ ರೈತರು ಸಭೆಯಲ್ಲಿ ಭಾಗವಹಿಸಿ ಕಂಪನಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದು ಮುಂದಿನ ದಿನಗಳಲ್ಲಿ ರೈತರು ಹೆಚ್ಚು ಬೆಳೆಯುವ ಆಸಕ್ತಿ ವ್ಯಕ್ತ ಪಡಿಸಿದ್ದಾರೆಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಪಯೋನಿಯರ ಪಿ3304 ಮೆಕ್ಕೆಜೋಳ ಬೆಳೆದ ರೈತರುಗಳಾದ ಸಿಂಗಟಗೆರೆ ರಮೇಶ,ನ್ಯಾಮತಿ ಮಲ್ಲಿಕಾರ್ಜುನ,ಬೆಳಗುತ್ತಿ ತೀರ್ಥಪ್ಪ ಇವರುಗಳು ಮಾತನಾಡಿ 120 ದಿನಗಳಲ್ಲಿ ಕಟಾವಿಗೆ ಬರುವ ಈ ಕಂಪನಿಯ ಮೆಕ್ಕೆಜೋಳ ಬೆಳೆಯು 16 ರಿಂದ 18 ಸಾಲು ಸುತ್ತು ಅಳತೆ ಇದ್ದು 9 ಇಂಚು ಉದ್ದವಿರು ಹಾಗು ಈ ತಳಿಯು ಭೂಮಿಗೆ ಅನುಗುಣವಾಗಿ 22 ರಿಂದ 44 ಕ್ವಿಂಟಲ್ವರೆಗೆ ಪ್ರತಿ ಎಕರೆಗೆ ಇಳುವರಿ ಬರುತ್ತಿದ್ದು ದಾಸ್ಥಾನು ಪ್ರಮಾಣವು ಹೆಚ್ಚಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಈ ಸಂದರ್ಭದಲ್ಲಿ ಭಾಗವಹಿಸಿದ ರೈತರು ಕೇಳಿದ ಪ್ರಶ್ನೆಗಳಿಗೆ ಕಂಪನಿಯ ಸಿಬ್ಬಂದಿಗಳಾದ ರಾಜೀಬ್ ಚಟರ್ಜಿ,ಮಲ್ಲಿಕಾರ್ಜುನ ಕಣ್ಣೂರು,ಅವಿನಾಶ್,ನಂಜುಡಪ್ಪ,ಶಾಮ್ ಪಾಟೀಲ್,ಶಶಿಕಾಂತ್ ಬಿದಿರುಗಡ್ಡೆ, ಕಾರ್ಟಿವಾ ಕಂಪನಿಯ ಸಿಬ್ಬಂದಿ,ಪ್ರಗತಿಪರ ರೈತರು ಇದ್ದರು.