ಹೊನ್ನಾಳಿ ಮೇ 18 ತಾಲೂಕಿನ ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಬೀರಗೊಂಡನಹಳ್ಳಿ ಗ್ರಾ ಪಂ, ಯ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆಸಿದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎಚ್ ಎಸ್ ಕವಿತಾ ರಮೇಶ್ ಆಯ್ಕೆಗೊಂಡರು.
ಈ ಹಿಂದೆ ಎಂ ಜಿ ಶ್ವೇತಾ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿ ತೆರವುಗೊಂಡ ಅಧ್ಯಕ್ಷ ಸ್ಥಾನಕ್ಕೆ ಎಚ್ ಎಸ್ ಕವಿತ ರಮೇಶ್, ಪಾರ್ವತಮ್ಮ 2 ನಾಮಪತ್ರಗಳು ಸಲ್ಲಿಕೆಯಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 9 ಸದಸ್ಯರು ಮತದಾನ ಮಾಡಿದರು. ಪಾರ್ವತಮ್ಮನವರಿಗೆ 3 ಮತ, ಎಚ್ ಎಸ್ ಕವಿತಾ ರಮೇಶ್ ರವರು 6 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಗೊಂಡರು. ಚುನಾವಣಾಧಿಕಾರಿಯಾಗಿ ತಾಲೂಕು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಮಹಾಂತಸ್ವಾಮಿ ಪೂಜಾರ್ ಕರ್ತವ್ಯ ನಿರ್ವಹಿಸಿದರು.


ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಗ್ರಾ ಪಂ ಕಾರ್ಯದರ್ಶಿ ರಾಮನಗೌಡ, ಉಪಾಧ್ಯಕ್ಷ ಲೋಹಿತ, ಸದಸ್ಯರುಗಳಾದ ಎಚ್ ಕೆ ಹಾಲಪ್ಪ,ಬಿವೈ ರಾಜು, ಎಸ್ ಮಹೇಂದ್ರ, ಪಾರ್ವತಮ್ಮ, ಎಚ್ ಕವಿತಾ, ಶೋಭಾ, ಎಂ ಜಿ
ಶ್ವೇತಾ, ತಾಲೂಕು ಕಾಂಗ್ರೆಸ್ ಯುವ ಮುಖಂಡರುಗಳಾದ ಸುರೇಂದ್ರ ಗೌಡ, ಎಚ್ ಎ ಗದ್ದಿಗೇಶ್ ಹುಣಸಘಟ್ಟ, ಗ್ರಾಮ ಪಂಚಾಯಿತಿ ಸದಸ್ಯರಾದ TG ರಮೇಶ್ ತರಗನಹಳ್ಳಿ ಮಧು ಅರಕೆರೆ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
ಬೀರಗೊಂಡನಹಳ್ಳಿ ಗ್ರಾ ಪಂ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಎಚ್ಎಸ್ ಗೀತಾ ರಮೇಶ್ ರವರನ್ನು ಆಡಳಿತ ಮಂಡಳಿಯವರು ಅಭಿನಂದಿಸಿದರು .

Leave a Reply

Your email address will not be published. Required fields are marked *