ಹೊನ್ನಾಳಿ ಮೇ 20 ತಾಲೂಕಿನ ಸೊರಟೂರ ಗ್ರಾಮ ಪಂಚಾಯಿತಿಯ ರಾಧಮ್ಮ ಹನುಮಂತಪ್ಪ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಅಧ್ಯಕ್ಷರ ಚುನಾವಣೆಗೆ ಶ್ರೀಮತಿ ಸುಮಾ ಟಿ ಎಸ್ ರವರು ಅರ್ಜಿಯನ್ನು ಸಲ್ಲಿಸಿದ್ದರು. ಬೇರೆ ಯಾರೂ ಕೂಡ ಅರ್ಜಿಯನ್ನು ಸಲ್ಲಿಸದೆ ಇರುವುದರಿಂದ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಒಮ್ಮತದ ಮೇರೆಗೆ ಚುನಾವಣಾ ಅಧಿಕಾರಿಯಾದ ಬಾಬುರಾವ್ ರತ್ನ ರವರು ಅಧ್ಯಕ್ಷರನ್ನಾಗಿ ಶ್ರೀಮತಿ ಸುಮಾ ಟಿ ಎಸ್ ಕುಮಾರ್ ಅವರನ್ನು ಘೋಷಣೆ ಮಾಡಿದರು.
ನೂತನ ಅಧ್ಯಕ್ಷರಾದ ಶ್ರೀಮತಿ ಸುಮಾ ಕುಮಾರ್ ರವರು ಅಧ್ಯಕ್ಷರಾಗಿದ್ದಾರೆ ಎಂದು ತಿಳಿದ ತಕ್ಷಣ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನ ಗೌಡ್ರು ರವರು ಸೊರಟೂರು ಗ್ರಾಮ ಪಂಚಾಯಿತಿಗೆ ಬಂದು ನೂತನ ಅಧ್ಯಕ್ಷರಿಗೆ ಸನ್ಮಾನವನ್ನು ಮಾಡಿ ಶುಭಕೋರಿ ನಂತರ ಮಾತನಾಡಿದ ಅವರು ತಮ್ಮ ಅಧ್ಯಕ್ಷರ ಅವಧಿಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಹಳ್ಳಿಗಳಲ್ಲಿ ಏನೇ ಸಮಸ್ಯೆ ಇದ್ದರೂ ಕುಡಿಯುವ ನೀರಿನ ಯೋಜನೆ, ಚರಂಡಿ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ವಿದ್ಯುತ್ ದೀಪದ ಸಮಸ್ಯೆ, ಇನ್ನು ಮುಂತಾದ ಹಲವಾರು ಸಮಸ್ಯೆಗಳನ್ನು ತಾವು ಜವಾಬ್ದಾರಿಯುತವಾಗಿ ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ಮಾಡಿ ಕೊಟ್ಟಾಗ ತಮ್ಮ ಅಧ್ಯಕ್ಷರುಗಾದಿಗೆ ಗೌರವ ಬರುವಂತಾಗುತ್ತದೆ ಎಂದು ನೂತನ ಅಧ್ಯಕ್ಷರಿಗೆ ತಿಳಿಸಿದರು.
ಉಪಸ್ಥಿತಿಯಲ್ಲಿ;- ಮಾಜಿ ಶಾಸಕರಾದ ಡಿ ಜಿ ಶಾಂತನ ಗೌಡ್ರು .ಎಚ್ ಬಿ ಮಂಜಪ್ಪ. ನೂತನ ಅಧ್ಯಕ್ಷರಾದ ಸುಮಾ ಕುಮಾರ್. ಉಪಾಧ್ಯಕ್ಷರಾದ ನಾಗರತ್ನ ಬಾಯಿ. ಸದಸ್ಯರುಗಳಾದ ಬಸನಗೌಡ ಪಾಟೀಲ್ ಜಿ. ಎಂ ಎಚ್ ಪರಶುರಾಮ್. ಮರಿಯಪ್ಪ .ಹನುಮಂತಪ್ಪ .ಕೆಂಚಮ್ಮ ಎ ಕೆ .ರಂಜಿತಾ ಟಿ .ವಿರೂಪಾಕ್ಷಪ್ಪ ಕೆ .ಪಿಡಿಓ ನಾಗರಾಜ್ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.