2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶವು ಮೇ.19
ರಂದು ಪ್ರಕಟಗೊಂಡಿರುವ ಹಿನ್ನಲೆಯಲ್ಲಿ ಕಟ್ಟಡ ಮತ್ತು
ಇತರೆ ನಿರ್ಮಾಣ ಕೆಲಸ ಮಾಡುವ ಕಾರ್ಮಿಕರ ಮಕ್ಕಳು
ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿರುವ ಬಗ್ಗೆ
ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಗೊಂಡಿರುತ್ತದೆ.
ಈ ಮಕ್ಕಳಿಗೆ ಅಗತ್ಯ ಪ್ರೋತ್ಸಾಹ ನೀಡಲು
ಅನುಕೂಲವಾಗುವಂತೆ ಪ್ರಸ್ತುತ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 600
ಅಂಕಗಳಿಗಿಂತ ಹೆಚ್ಚು ಅಂಕ ಪಡೆದಿರುವ ನೋಂದಾಯಿತ
ಕಾರ್ಮಿಕ ಮಕ್ಕಳ ಹೆಸರು, ಫಲಾನುಭವಿಗಳ ಹೆಸರು,
ನೋಂದಾಣಿ ಸಂಖ್ಯೆ, ದೂರವಾಣಿ ಸಂಖ್ಯೆ ಪಡೆದ ಅಂಕಗಳು,
ವ್ಯಾಸಂಗ ಮಾಡಿದ ಶಾಲೆಯ ಹೆಸರು ಮತ್ತು ವಿಳಾಸ, ವಾಸವಿರುವ
ಜಿಲ್ಲೆಯ ಹೆಸರುಗಳುಳ್ಳ ಮಾಹಿತಿಯು ಕರ್ನಾಟಕ ಕಟ್ಟಡ
ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ
ನೀಡಬೇಕಾಗಿರುವ ಹಿನ್ನಲೆಯಲ್ಲಿ ಮೇ.26 ರೊಳಗಾಗಿ ಹತ್ತಿರದ
ಕಾರ್ಮಿಕ ನಿರೀಕ್ಷಕರ ಕಚೇರಿ/ಕಾರ್ಮಿಕ ಅಧಿಕಾರಿಗಳ ಕಚೇರಿಗೆ
ಮಾಹಿತಿ ನೀಡಬೇಕೆಂದು ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.