ನ್ಯಾಮತಿ : ತಾಲೂಕಿನಾಧ್ಯಂತ ವ್ಯಾಪಕ ಮಳೆಯಾಗಿದ್ದು ಮೂರು ದಿನಗಳ ಕಾಲ ಅಧಿಕಾರಿಗಳು ರಜೆ ಹಾಕದೇ ಹಾನಿಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುವಂತೆ ಸೂಚಿಸಿದ್ದೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಕಳೆದ ಕೆಲ ದಿನಗಳಿಂದ ಎಡೆ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಕೊಡತಾಳು, ಗುಡ್ಡೇಹಳ್ಳಿ,ನರಗಿನಕೆರೆ,ಹೊಸಕೊಪ್ಪ,ಬೆಳಗುತ್ತಿ,ರಾಮೇಶ್ವರ,ಮಾದಾಪುರ,ಚಿನ್ನಿಕಟ್ಟೆ.ಹಳೇಜೋಗ,ಹೊಸಜೋಗ,ಸೂರಗೊಂಡನಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಾಕಷ್ಟು ಹಾನಿಯಾಗಿದ್ದು ಶನಿವಾರ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಅಧಿಕಾರಿಗಳು ಭೇಟಿ ನೀಡಿ, ಮಳೆ ಹಾನಿಯ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಹೇಳಿದ್ದೇನೆ ಎಂದ ರೇಣುಕಾಚಾರ್ಯ ಅಧಿಕಾರಿಗಳು ಮೂರು ದಿನ ರಜೆ ಹಾಕುವಂತಿಲ್ಲಾ ಎಂದು ಸೂಚನೆ ನೀಡಿದ್ದೇನೆ ಎಂದರು.
ನಾಳೆಯೂ ಕೂಡ ಮಳೆಹಾನಿಯಾದ ಗ್ರಾಮಗಳಿಗೆ ಭೇಟಿ ನೀಡಲಿದ್ದು ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಧಿಕಾರಿಗಳಿಂದ ಹಾನಿಯ ಬಗ್ಗೆ ನಿಕರ ಮಾಹಿತಿ ಪಡೆದು ಬೆಳೆ ಕಳೆದುಕೊಂಡವರಿಗೆ, ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ಹೇಳಿದರು.
ಮಳೆ ಹಾನಿಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಬೆಂಗಳೂರಿನಿಂದ ನೇರವಾಗಿ ಹೊನ್ನಾಳಿಗೆ ಬಂದು ಅಧಿಕಾರಿಗಳೊಂದಿಗೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಖುದ್ದು ಮಾಹಿತಿ ಕಲೆ ಹಾಕುವ ಕೆಲಸ ಮಾಡಿದ್ದೇನೆ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಕರೆಗಳನ್ನು ತುಂಬಿಸುವ 518 ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು, ಕೆರೆಗಳ ಅಭಿವೃದ್ದಿಗೆ ಹಾಗೂ ಹೂಳು ತೆಗೆಯಲು 126 ಕೋಟಿ ಹಣವನ್ನು ಮೀಸಲಿಟ್ಟಿದ್ದು ಸದ್ಯ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ನ್ಯಾಮತಿ ತಾಲೂಕಿನಾದ್ಯಂತ 40 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು ಸಾಕಷ್ಟು ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿನ ಸಾಮಾಗ್ರಿಳು ನೀರು ಪಾಲಾಗಿವೇ ಅಲ್ಲದೇ ಕೈಗೆ ಬಂದ ಬೆಳೆಗಳು ನೀರು ಪಾಲಾಗಿದ್ದು, ರಸ್ತೆ,ಕೆರೆ ಕಟ್ಟೆಗಳು ಒಡೆದಿದ್ದ ಅವಳಿ ತಾಲೂಕಿನಲ್ಲಿ ಸಾಕಷ್ಟು ಹಾನಿಯಾಗಿದೆ ಎಂದ ರೇಣುಕಾಚಾರ್ಯ ಹಾನಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಅವಳಿ ತಾಲೂಕಿಗೆ ಸೂಕ್ತ ಪರಿಹಾರ ಕೊಡಿಸುವ ಬರಬಸೆ ನೀಡಿದರು.
ತುಂಗಭದ್ರಾನದಿಯಲ್ಲಿ ದಿನೇ ದಿನೇ ನೀರಿನ ಒಳ ಹರಿವು ಹೆಚ್ಚುತ್ತಿದ್ದ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ ರೇಣುಕಾಚಾರ್ಯ, ಅಧಿಕಾರಿಗಳು ನದಿ ಪಾತ್ರದ ಜನರಿಗೆ ಸೂಕ್ತ ಸೂಚನೆ ನೀಡುವಂತೆ ತಿಳಿಸಿರುವುದಾಗಿ ಹೇಳಿದರು.
ಕಾಲಿಚಕ್ರಕಟ್ಟಿಕೊಂಡು ಸುತ್ತಿದ ರೇಣುಕಾಚಾರ್ಯ : ಮಳೆಯಿಂದ ಹಾನಿಯಾದ 50 ಕ್ಕೂ ಹೆಚ್ಚು ಗ್ರಾಮಗಳಿಗಳಿಗೆ ಕಳೆದ ಎರಡು ದಿನಗಳಿಂದ ಕಾಲಿಗೆ ಚಕ್ರಕಟ್ಟಿಕೊಂಡು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಓಡಾಟ ನಡೆಸಿದರು. ಅಧಿಕಾರಿಗಳೊಂದಿಗೆ ಹಾನಿಯಾದ ಪ್ರದೇಶಗಳನ್ನು ಸುತ್ತಿದ ರೇಣುಕಾಚಾರ್ಯ ಇತಿಹಾಸ ಬರೆದರು. ಬಂದಪುಟ್ಟ ಹೋದ ಪುಟ್ಟ ಎಂಬುವವರ ನಡುವೆ ಜನಪ್ರತಿನಿಧಿ ಎನಿಸಿಕೊಂಡವರು ಈ ರೀತಿ ಇರ ಬೇಕು ಎಂಬುದಕ್ಕೆ ರೇಣುಕಾಚಾರ್ಯ ಸ್ಪಷ್ಟ ಉದಾಹರಣ ಎಂದರೆ ತಪ್ಪಾಗಲಾರದು.
ವೈಯಕ್ತಿಕ ಧನಸಹಾಯ ಮಾಡಿದ ರೇಣುಕಾಚಾರ್ಯ : ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ಮನೆಗೆ ನೀರು ನುಗ್ಗಿ ಮನೆಯ ಧವನ ಧಾನ್ಯಗಳು ನೀರು ಪಾಲದ ಎರಡು ಕುಟುಂಬಗಳಿಗೆ ವೈಯಕ್ತಿಕ ಹತ್ತು ಸಾವಿರ ನೀಡಿದ ರೇಣುಕಾಚಾರ್ಯ, ಗಂಜಿಕೇಂದ್ರದಲ್ಲಿರುವ ಕುಟುಂಬಗಳಿಗೆ ಹೊದಿಕೆಗಳನ್ನು ಕೊಡಿಸುವಂತೆ 15 ಸಾವಿರ ವೈಯಕ್ತಿಕ ಧನ ಸಹಾಯ ಮಾಡಿದರು. ಅದೇ ರೀತಿ ಕೊಡತಾಳು ತಾಂಡದಲ್ಲಿ ಮನೆಯಾನಿಯಾದವರಿಗೆ ಐದು ಸಾವಿರ ಪರಿಹಾರ ನೀಡಿದರು.
ಬೆಳೆ ಕಳೆದುಕೊಂಡವರಿಗೆ ಧನ ಸಹಾಯ : ಹೊಸಜೋಗ ಗ್ರಾಮದಲ್ಲಿ ಮೂರು ಜನ ರೈತರು ಮೆಕ್ಕೆಜೋಳ ಕಟಾವು ಮಾಡಿದ್ದು 120 ಕ್ವಿಂಟಾಲ್ ಮೆಕ್ಕೆಜೋಳ ನೀರು ಪಾಲಾಗಿದೆ. ಈ ಹಿನ್ನೆಲೆಯಲ್ಲಿಂದು ಸ್ಥಳಕ್ಕೆ ಭೇಟಿ ನೀಡಿದ ರೇಣುಕಾಚಾರ್ಯ ಮೂರು ಜನ ರೈತರಿಗೆ ವೈಯಕ್ತಿಕ ಧನ ಸಹಾಯ ಮಾಡಿದರಲ್ಲದೇ, ಕ್ಯಾನ್ಸರ್ ಪೀಡಿತ ವೈಕ್ತಿಯ ಚಿಕಿತ್ಸೆಗೆ ಐದು ಸಾವಿರ ಧನ ಸಹಾಯ ಮಾಡಿದರು.
ಅವಳಿ ತಾಲೂಕಿನ ಮನೆ ಮಗ : ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅವಳಿ ತಾಲೂಕಿನಲ್ಲಿ ಸಾಕಷ್ಟು ಹಾನಿಯಾಗಿರುವುದರ ಬಗ್ಗೆ ಬೇಸರ ವ್ಯಕ್ತ ಪಡಿಸಿದ ರೇಣುಕಾಚಾರ್ಯ ಇದು ಯಾರು ಬಯಸದೇ ಬಂದ ಮಳೆಯಾಗಿದ್ದು ನಾನು ನಿಮ್ಮ ಮನೆ ಮಗನಾಗಿದ್ದು ನಿಮ್ಮಗಳ ಬಳಿ ಬಂದು ನಿಮ್ಮಗಳ ಕಷ್ಟ ಆಲಿಸುವ ಮೂಲಕ ನಿಮ್ಮ ಸೇವೆಗೆ ನಾನು ಸನ್ನದ್ದವಾಗಿದ್ದೇನೆ ಎಂದರು.
ಈ ವೇಳೆ ತಹಶೀಲ್ದಾರ್ ರೇಣುಕಾ, ಉಪತಹಶೀಲ್ದಾರ್ ನಾಗರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.