ಹೊನ್ನಾಳಿ,23: ಪಟ್ಟಣದ ಪುರಸಭೆಯ ಅಧ್ಯಕ್ಷರಾಗಿ ಟಿ.ಹೆಚ್.ರಂಗನಾಥ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ,ತಹಶೀಲ್ದಾರ ಹೆಚ್.ಜೆ.ರಶ್ಮೀಯವರು ಘೋಶಿಸಿದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಬಾಬೂ ಹೋಬಳದರ ಅವರು ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಟಿ.ಹೆಚ್.ರಂಗನಾಥ ಅವರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣೆ ಅಧಿಕಾರಿ ತಹಶೀಲ್ದಾರ ಹೆಚ್.ಜೆ.ರಶ್ಮೀಯವರು ಪುರಸಭೆಯ 2ನೇ ವಾರ್ಡಿನ ಟಿ.ಹೆಚ್.ರಂಗನಾಥ ಅವರನ್ನು ಆಯ್ಕೆ ಎಂದು ಘೋಶಿಸಿದರು.
ಈ ಸಂದರ್ಭದಲ್ಲಿ ಸಿ.ಎಂ.ರಾಜಕೀಯ ಕಾರ್ಯಧರ್ಶಿ,ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಟಿ.ಹೆಚ್.ರಂಗನಾಥರವನ್ನು ಅಬಿನಂದಸಿ ಅಧ್ಯಕ್ಷರ ಆಯ್ಕೆ ಪ್ರಕ್ರೀಯೆ ಪಕ್ಷಾತೀತವಾಗಿ ಆಯ್ಕೆ ಮಾಡಲಾಗಿದೆ ಪಟ್ಟಣದ ವ್ಯಾಪ್ತಿಯ ಅಭಿವೃದ್ದಿಗೆ ವಿರೋಧ ಪಕ್ಷದವನ್ನು ಸಲಹೆ ಸಹಕಾರ ತೆದುಕೊಂಡು ಸರಕಾರದ ಯೋಜನೆಗಳನ್ನು ತುಲುಪುವಂತೆ ಮತ್ತು ಪಟ್ಟಣದ ಅಭಿವೃದ್ದಿಗೆ ಕಂಕಣಬದ್ದರಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ರಂಜಿತಚನ್ನಪ್ಪ, ಮಾಜಿ ಅಧ್ಯಕ್ಷರಾದ ಕೆ.ವಿ.ಶ್ರೀಧರ,ಬಾಬೂ ಹೋಬಳಧರ,ಸದಸ್ಯರಾದ ಧರ್ಮಪ್ಪ,ಮೈಲಪ್ಪ,ರಾಜಪ್ಪ, ಮಹಿಳಾ ಸದಸ್ಯರಾದ ಸುಮಮಂಜುನಾಥ್,ಸವಿತಮಹೇಶ್ಹುಡೆದ್,ಅನುಶಂಕರಚಂದ್ರಪ್ಪ,ಪದ್ಮಾವತಿಪ್ರಶಾಂತ,ಸುಮಸತೀಶ್,ನಾಮ ನಿದೇರ್ಶಕರಾದ ಕೃಷ್ಣಪ್ಪ,ಕುಮಾರಸ್ವಾಮಿ ಸೌಮ್ಯ ಬಿಜೆಪಿ ಮುಖಂಡ ಎ.ಬಿ.ಹನುಮಂತಪ್ಪ,ಮಾಜಿ ಜಿಪಂ ಸದಸ್ಯರಾದ ಎಂ.ಆರ್.ಮಹೇಶ್,ಸುರೇಂದ್ರನಾಯ್ಕ,ಕೆ.ಎಲ್.ರಂಗಪ್ಪ ಇತರೆ ಮುಖಂಡರು ಇದ್ದರು.