ಹುಣಸಘಟ್ಟ: ಹೋಬಳಿ ಸಾಸ್ವೆ ಹಳ್ಳಿಯ ಗ್ರಾ ಪಂ ತೆರವುಗೊಂಡ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆಸಿದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸವಿತಾ ಉಮೇಶ್ ಅವಿರೋಧವಾಗಿ ಆಯ್ಕೆಗೊಂಡರು.
ಈ ಹಿಂದೆ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿ ತಿರುವುಗೊಂಡ ಅಧ್ಯಕ್ಷಸ್ಥಾನಕ್ಕೆ ಸವಿತಾ ಉಮೇಶ್ ರವರ ಒಂದು ನಾಮಪತ್ರವನ್ನು ಹೊರತುಪಡಿಸಿ ಬೇರೆ ಯಾವ ನಾಮಪತ್ರ ಬಾರದೆ ಇರುವುದರಿಂದ ಚುನಾವಣಾ ಅಧಿಕಾರಿ ಸುರೇಶ್ ಅಧ್ಯಕ್ಷರ ಅವಿರೋಧ ಆಯ್ಕೆ ಪ್ರಕ್ರಿಯೆಯನ್ನು ಘೋಷಿಸಿದರು.
ನೂತವಾಗಿ ಅವಿರೋಧ ಆಯ್ಕೆಗೊಂಡ ಅಧ್ಯಕ್ಷರನ್ನು ಕೈ ಬೆಂಬಲಿತ ಕಾರ್ಯಕರ್ತರು ಕೇಸರಿ ಶಾಲು ಹೊದಿಸುವುದರ ಮೂಲಕ ವಿನೂತನವಾಗಿ ಅಭಿನಂದಿಸಿದರು. ನೂತನ ಅಧ್ಯಕ್ಷ ಸವಿತಾ ಉಮೇಶ್ ಮಾತನಾಡಿ ಗ್ರಾಮ ಪಂ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದರ ಜೊತೆಗೆ ಅತಿ ಶೀಘ್ರದಲ್ಲಿ ಮನೆಮನೆಗೆ ಶುದ್ಧ ಕುಡಿಯುವ ನೀರನ್ನು ಟ್ಯಾಂಕರ್ ಆಟೋ ಮೂಲಕ ಒದಗಿಸಲಾಗುವುದು ಎಂದರು ಬಿಜೆಪಿ ಯುವ ಮುಖಂಡ ಎಚ್ ಎ ಗದ್ದಿಗೇಶ್ ಮಾತನಾಡಿ ಕೇಸರಿ ಶಾಲು ಯಾವುದೇ ಪಕ್ಷಕ್ಕೆ ಮೀಸಲು ಅಲ್ಲ. ನಾವು ಹಿಂದುಗಳೇ ರಾಮ ಆಂಜನೇಯ ಬಸವ ಬುದ್ಧ ಅಂಬೇಡ್ಕರ್ ಅವರನ್ನು ಆರಾಧಿಸುತ್ತೇವೆ ಎಂದರು.
ಅಧ್ಯಕ್ಷರ ಆಯ್ಕೆಯಲ್ಲಿ ಗ್ರಾಮ ಪಂ ಪಿಡಿಓ ಪರಮೇಶ್ವರ್ ಉಪಾಧ್ಯಕ್ಷೆ ಶಾಂತ ಕೃಷ್ಣಮೂರ್ತಿ, ಗ್ರಾ ಪಂ ಸದಸ್ಯ ರುಗಳಾದ ಜಬ್ಬರ್ ಅಲಿಖಾನ್, ಸುಲೇಮಾನ್ ಖಾನ್, ಅಮ್ಜಾದ್ ಖಾನ್, ಮಂಜಪ್ಪ, ಸುಧಾಮ, ಶಾಂತಮ್ಮ ಸುರೇಶ್, ರೇಣುಕಾ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.