ಹುಣಸಘಟ್ಟ: ಇಂದು ಪೋಷಕರು ಬಹಳಷ್ಟು ಬದಲಾಗಿದ್ದಾರೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿಲ್ಲ. ಕಾನ್ವೆಂಟಿನಲ್ಲಿ ಓದಿದರೆ ಮಾತ್ರ ಮಕ್ಕಳು ಬುದ್ಧಿವಂತರಾಗುತ್ತಾರೆ ಉದ್ಯೋಗ ಸಿಗುತ್ತದೆ ಎಂಬುದು ತಪ್ಪು ತಿಳುವಳಿಕೆ ಸರ್ಕಾರಿ ಶಾಲೆಯಲ್ಲಿ ಓದಿದವರೇ ಹೆಚ್ಚಾಗಿ ಸರ್ಕಾರಿ ದೊಡ್ಡ ದೊಡ್ಡ ಉದ್ಯೋಗದಲ್ಲಿದ್ದಾರೆ. ಎಂದು ಜಿಲ್ಲಾ ಪಂಚಾಯಿತಿ ಸಿ ಈ ಓ ಡಾ. ಚನ್ನಪ್ಪ ಹೇಳಿದರು.
ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉನ್ನತಿಕರಣ ಮಾಡುವ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಶಿಕ್ಷಣಾಧಿಕಾರಿಗಳೊಂದಿಗೆ ಆಗಮಿಸಿ ಶಾಲೆ ಸ್ಥಿತಿ ಗತಿಗಳನ್ನು ಪರಿಶೀಲಿಸಿ ಪೋಷಕರ ಸಮಾಲೋಚನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನೂರಾರು ವರ್ಷಗಳ ಹಿಂದೆ ಒಬ್ಬ ಶಿಕ್ಷಕರು ಇರುತ್ತಿದ್ದರು ಊರು ತುಂಬಾ ಇರುವ ಮಕ್ಕಳೆಲ್ಲರೂ ಸರ್ಕಾರಿ ಶಾಲೆಗೆ ಬರುತ್ತಿದ್ದರು. ಊರಿನ ಯಜಮಾನರು ಬಂದು ಶಾಲೆಯಲ್ಲಿ ಏನು ಕಾರ್ಯಕ್ರಮ ಮಾಡಬೇಕು ಎಂದು ಶಿಕ್ಷಕರನ್ನು ಕೇಳುತ್ತಿದ್ದರು. ಇಂದು ಸೌಲಭ್ಯಗಳು ಹೆಚ್ಚಾದಂತೆ ಸೇವಾ ಮನೋಭಾವ ಜನರಲ್ಲಿ ಕಡಿಮೆಯಾಗಿದೆ. 113 ವರ್ಷಗಳ ಇತಿಹಾಸವಿರುವ ಶಾಲೆಯಲ್ಲಿ ಇಂದು 130 ವಿದ್ಯಾರ್ಥಿಗಳು ಇದ್ದಾರೆ. ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವ ಬಗ್ಗೆ ಪೋಷಕರ ಮನಸ್ಥಿತಿಗಳು ಬದಲಾಗಬೇಕು ಎಂದ ಅವರು ಸರ್ಕಾರದ ವಿಶೇಷ ಅನುದಾನ ಏನಾರು ಬಂದರೆ ಈ ಶಾಲೆಗೆಹೆಚ್ಚಿನ ಅನುದಾನ ನೀಡುವುದಾಗಿ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಇ ರಾಜೀವ್ ಮಾತನಾಡಿ ಶಾಲೆಯ ಕೆಲವು ಕೊಠಡಿಗಳ ಕಿಡಿಕಿ ಬಾಗಿಲು ಜಯಂತಿಗಳು ಗೆದ್ದಲು ಹಿಡಿದು ಕೊಠಡಿಗಳು ದುರಸ್ತಿ ಆಗಬೇಕಾಗಿದೆ. ಶಾಲಾ ಕಾಂಪೌಂಡ್, ಮಕ್ಕಳ ಆಟದ ಅಂಕಣ, ಹೈಟೆಕ್ ಶೌಚಾಲಯ ನಿರ್ಮಾಣವಾಗಬೇಕು. ಶಾಸಕರು ಎರಡು ಕೊಠಡಿಗಳನ್ನು ನೀಡಿದ್ದಾರೆ, ಕೆ ಎಸ್ ಆರ್ ಡಿ ಎಲ್ ನಿರ್ದೇಶಕ ಶಿವಣ್ಣನವರು ರಂಗಮಂದಿರ ನಿರ್ಮಾಣಕ್ಕೆ18 ಲಕ್ಷ ರೂ ಗುದ್ದಲಿ ಪೂಜೆ ನೆರವೇರಿಸಿದ್ದಾರೆ ಎಂದರು.
ಕೋಲಾರ ಜಿಲ್ಲಾ ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ ಬಾ ಹಾ ಶೇಖರಪ್ಪ ಪ್ರಾಸ್ತವಿಕವಾಗಿ ಮಾತನಾಡಿ ಸಾಸ್ವೆಹಳ್ಳಿ ಹೋಬಳಿಯಲ್ಲಿ ಹೊಸಹಳ್ಳಿ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡುವಂತೆ ಮನವಿ ಮಾಡಿಕೊಂಡರು.
ಸಭೆಯಲ್ಲಿ ತಾಲೂಕು ಇ ಓ ರಾಮ ಬೋವಿ, ಎಸ್ ಡಿ ಎಂ ಸಿ ಅಧ್ಯಕ್ಷ ವೈ ಎಂ ಹರೀಶ, ಗ್ರಾಪಂ ಅಧ್ಯಕ್ಷ ಗೌರಮ್ಮ, ಪಿಡಿಒ ಭಾರತಿ, ಕೆ ಎಸ್ ಡಿ ಎಲ್ ನಿರ್ದೇಶಕ ಶಿವು ಹುಡೇದ್, ಸಿ ಆರ್ ಪಿ ಕುಮಾರ್, ಮುಖ್ಯಶಿಕ್ಷಕ ರಾಜಶೇಖರಯ್ಯ, ಗ್ರಾಮದ ಮುಖಂಡರಾದ ಇಲ್ಲ ಮನೆ ಮಲ್ಲೇಶಪ್ಪ, ಬಾಗವಾಡಿ ನರಸಿಂಹಪ್ಪ ಎಸ್ಡಿಎಂಸಿ ಪದಾಧಿಕಾರಿಗಳು ಪೋಷಕರು ಉಪಸ್ಥಿತರಿದ್ದರು.