ಹೊನ್ನಾಳಿ ಮೇ 25-05-2022. ದಿನಾಂಕ:23/05/2022 ರಂದು ಪಿರಾದುದಾರರಾದ ಶ್ರೀಮತಿ ಶಾರದಮ್ಮ ಕೋಂ ಲೇ ಕೆಂಚಪ್ಪ, 60 ವರ್ಷ, ಗೃಹಿಣಿ, ವಾಸ 03 ನೇ ಕ್ರಾಸ್, ದುರ್ಗಿಗುಡಿ ಹೊನ್ನಾಳಿ ಟೌನ್ ರವರು ನೀಡಿದ ದೂರಿನ ಸಾರಾಂಶ ದಿನಾಂಕ: 22/05/2022 ರಂದು ಮದ್ಯಾಹ್ನ 12-30 ಗಂಟೆಗೆ ನನ್ನ ಮಗನಾದ ಕುಮಾರ ಹೆಚ್ ಕೆ ಇವನು ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದು, ತನ್ನ ವ್ಯವಹಾರಕ್ಕೆ ಮನೆಯಿಂದ ಹೋಗಿದ್ದು ನನ್ನ ಮಗ ಕುಮಾರನನ್ನು ದಿನಾಂಕ 22,05/2022 ರ ಮಧ್ಯಾಹ್ನ 12-30 ಗಂಟೆಯಿಂದ ದಿನಾಂಕ 23/05/2022 ರ ಬೆಳಿಗ್ಗೆ 9-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶಕ್ಕೆ ನನ್ನ ಮಗನನ್ನು ಅವನ ಕಾರಿನಲ್ಲಿ ಹೆಚ್ ಕಡದಕಟ್ಟಿ ಗ್ರಾಮದ ತಿಮ್ಮಪ್ಪ ಎಂಬುವರ ಜಮೀನಿನ ಬಳಿ ಕರೆದುಕೊಂಡು ಹೋಗಿ ಜಮೀನಿನಲ್ಲಿ ಯಾವುದೋ ಆಯುಧದಿಂದ ಗಾಯಗೊಳಿಸಿ ಕೊಲೆ ಮಾಡಿರುತ್ತಾರೆ ಅಂತ ನೀಡಿದ ದೂರಿನ…
ಮುಂಚಿತವಾಗಿ ಕರೆಸಿಕೊಂಡು ಒಳ ಸಂಚು ರೂಪಿಸಿ ಮೃತ ಕುಮಾರನಿಗೆ ಮೋಹನನು ನೀಡಬೇಕಾದ ಹಣವನ್ನು ಕೊಡುತ್ತೇವೆ. ಅಂತಾ ನಂಬಿಸಿ ಮೋಹನನು ಕುಮಾರನನ್ನು ಕಾರಿನಲ್ಲಿ ಹೆಚ್.ಕಡದಕಟ್ಟೆ ಬಳಿ ಜಮೀನಿಗೆ ಕರೆದುಕೊಂಡು ಹೋಗಿದ್ದು, ಅಲ್ಲೇ ಹೊಂಚು ಹಾಕಿ ಕುಳಿತುಕೊಂಡಿದ್ದ 3 ಜನರು ಕುಮಾರನನ್ನು ಚಾಕು ಮತ್ತು ಕಂದ್ಲಿಯಿಂದ ಹಲ್ಲೆ ಮಾಡಿ ಕೊಲೆ ಮಾಡಿರುವುದು ಇಲ್ಲಿವರೆಗಿನ ವಿಚಾರಣೆಯಿಂದ ಕಂಡು ಬಂದಿರುತ್ತದೆ. ಹಣಕಾಸಿನ ವ್ಯವಹಾರ ಹಾಗೂ ಇತರೆ ಆಯಾಮಗಳಲ್ಲಿ ಸಿ.ಪಿ.ಐ. ದೇವರಾಜ ರವರ ನೇತೃತ್ವದಲ್ಲಿ ತನಿಖೆ ಮುಂದುವರೆದಿರುತ್ತದೆ.
ಸದರಿ ಕೊಲೆ ಪ್ರಕರಣ ವರದಿಯಾದ 48 ಗಂಟೆಗಳಲ್ಲಿ ತಾಂತ್ರಿಕ ಕೌಶಲ್ಯದಿಂದ ಹಾಗೂ ಇತರೆ ಸಾಕ್ಷಿದಾರರ ತ್ವರಿತ ವಿಚಾರಣೆಯಿಂದ ಪತ್ತೆ ಹಚ್ಚಿ ಆರೋಪಿತರನ್ನು ಹಿಡಿಯುವಲ್ಲಿ ಯಶಸ್ವಿಯಾದ ಮಾನ್ಯ ಚನ್ನರಿ ಉಪವಿಭಾಗ ಪೊಲೀಸ್ ಉಪಾಧೀಕ್ಷಕರಾದ ಡಾ| ಸಂತೋಷ್, ಹೊನ್ನಾಳಿ ವೃತ್ತ ನಿರೀಕ್ಷಕರಾದ ಶ್ರೀ ದೇವರಾಜ ಟಿ ವಿ ಮತ್ತು ಹೊನ್ನಾಳಿ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ರವರಾದ ಬಸವರಾಜ ಬಿರಾದರ್, ಎ.ಎಸ್.ಐ ಗಳಾದ ಹರಿಶ್, ಪರಶುರಾಮಪ್ಪ, ಮಾಲತೇಶಪ್ಪ ಮತ್ತು ಸಿಬ್ಬಂದಿಯವರಾದ ರಂಗನಾಥ, ಧರ್ಮಪ, ರಾಜು, ಮಂಜುನಾಥ, ಮೌನೇಶ, ಗಣೇಶ, ಜಗದೀಶ್.ಜೆ.ಪಿ, ಸುನೀಲ್ ಕುಮಾರ್, ಯೋಗೀಶ್, ಪ್ರಸನ್ನಕುಮಾರ್, ರಂಗನಾಥ್, ಜಗದೀಶ್, ಹನುಮಂತ, ಶಾಂತಕುಮಾರ್, ಗಣಕಯಂತ್ರ ವಿಭಾಗದ ರಾಘವೇಂದ್ರ ಇವರುಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಸಿ.ಬಿ ರಿಷ್ಯಂತ್, ಐ.ಪಿ.ಎಸ್ ರವರು ಬಹುಮಾನ ಘೋಷಣೆ ಮಾಡಿ ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ.