ನ್ಯಾಮತಿ : ಕಳೆದ ಕೆಲ ದಿನಗಳಿಂದ ಸುರಿದ ಬಾರೀ ಮಳೆಯಿಂದಾಗಿ ಒಡೆಯರಹತ್ತೂರು ಹಾಗೂ ಗಂಗನಕೋಟೆ ಸಂಪರ್ಕ ಸೇತುವೆ ಕೊಚ್ಚಿಹೋಗಿದ್ದು ತಕ್ಷಣ ಸೇತುವೆ ದುರಸ್ಥಿ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಗುರುವಾರ ಒಡೆಯರಹತ್ತೂರು-ಗಂಗನಕೋಟೆ ಸಂಪರ್ಕ ಸೇತುವೆ ಕೊಚ್ಚಿಹೋದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಒಡೆಯರಹತ್ತೂರು ಹಾಗೂ ಗಂಗನಕೋಟೆ ಸಂಪರ್ಕ ಸೇತುವೆ ಕೊಚ್ಚಿ ಹೋಗಿದ್ದು ಎರಡು ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದ್ದು, ಕೂಡಲೇ ಅಧಿಕಾರಿಗಳಿಗೆ ಸೇತುವೆ ದುರಸ್ಥಿ ಮಾಡಲು ಸೂಚನೆ ನೀಡಿದ್ದೇನೆ ಎಂದರು.
ಈಗಾಗಲೇ ಸೇತುವೆ ಮೇಲ್ದರ್ಜೆಗೇರಿಸಲು ನಾಲ್ಕು ಕೋಟಿ ಅನುದಾನ ಕೇಳಿದ್ದು ಸದ್ಯದರಲ್ಲದೇ ಅನುದಾನ ಬಿಡುಗಡೆಯಾಗಲಿದ್ದು ಸೇತುವೆ ಮೇಲ್ದರ್ಜೆಗೇರಿಸಲಾಗುವುದು ಎಂದ ರೇಣುಕಾಚಾರ್ಯ, ಸದ್ಯ ತಾತ್ಕಾಲಿಕವಾಗಿ ಸೇತುವೆ ದುರಸ್ಥಿ ಮಾಡಿಲಾಗುವುದು ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ವಾಡಿಕೆಗಿಂತ ಶೇ288 ಮಿಮಿ ನಷ್ಟು ಹೆಚ್ಚು ಮಳೆಯಾಗಿದೆ ಎಂದ ರೇಣುಕಾಚಾರ್ಯ, ಅತಿಯಾದ ಮಳೆಯಿಂದಾಗಿ 2343.85 ಎಕರೆ ಭತ್ತ,163.37 ಎಕರೆ ಮೆಕ್ಕೆಜೋಳ,47,5 ಎಕರೆ ಶೇಂಗಾ, 23.5 ಎಕರೆ ಹತ್ತಿ,18.25 ಎಕರೆ ಸೋಯಾಬಿನ, 26.75 ಎಕರೆ ರಾಗಿ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗಿದೆ ಅಷ್ಟೇ ಅಲ್ಲದೇ 150 ಕ್ಕೂ ಹೆಚ್ಚು ಮನೆಗಳು, 90 ಕ್ಕೂ ಹೆಚ್ಚು ಶಾಲಾ ಕೊಠಡಿಗಳು, 15 ಕ್ಕೂ ಹೆಚ್ಚು ಅಂಗನವಾಡಿಗಳಿಗೆ ಹಾನಿಯಾಗಿದೆ ಎಂದರು.
ಮಳೆಯಿಂದಾಗಿ ಕೆರೆಗಳು ಕೋಡಿ ಬಿದ್ದುಹಾಳಾದರೆ, ರಸ್ತೆಗಳು, ಚೆಕ್ ಡ್ಯಾಂಗಳು, ಸೇತುವೆಗಳಿಗೂ ಹಾನಿಯಾಗಿದ್ದು, ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದ್ದು, ಈ ಬಗ್ಗೆ ಮಂಗಳವಾರ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಭೇಟಿ ಮಾಡಿ ಅವಳಿ ತಾಲೂಕಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ ಅಲ್ಲದೇ ಅವಳಿ ತಾಲೂಕನ್ನು ಅತಿವೃಷ್ಟಿ ಪೀಡಿತ ತಾಲೂಕು ಎಂದು ಘೋಷಣೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದರು.
ಮೂರು ದಿನಗಳ ಕಾಲ ಅವಳಿ ತಾಲೂಕಿನಾದ್ಯಂತ ಸಚರಿಸಿ ಹಾನಿಯಾದ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದು, ಅವಳಿ ತಾಲೂಕಿನಾಧ್ಯಂತ ಎಷ್ಟು ನಷ್ಟವಾಗಿದಿಯೋ ಅಷ್ಟು ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ ಎಂದರು.
ಇದೇ ವೇಳೆ ಮಾತನಾಡಿದ ಗಂಗನಕೋಟೆ ಗ್ರಾಮದ ಎಂ.ಜಿ.ಚಂದ್ರಪ್ಪ, ಇಂತಹ ಶಾಸಕರು ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿಗೆ ಸಿಕ್ಕಿದ್ದು ನಮ್ಮಪುಣ್ಯ ಎಂದರು. ಮೂರು ದಿನಗಳ ಕಾಲ ಅವಳಿ ತಾಲೂಕಿನಲ್ಲಿ ಓಡಾಟ ನಡೆಸಿ ಜನರ ಕಷ್ಟಕ್ಕೆ ಸ್ಪಂಧಿಸುವ ಕೆಲಸವನ್ನು ಶಾಸಕರು ಮಾಡಿದ್ದಾರೆ ಎಂದರು.
ಅವಳಿ ತಾಲೂಕಿನಲ್ಲಿ ರೇಣುಕಾಚಾರ್ಯ ಅವರು ಮಾಡಿರುವಂತಹ ಅಭಿವೃದ್ದಿ ಕೆಲಸವನ್ನು ಯಾರು ಮಾಡಲು ಸಾಧ್ಯವಿಲ್ಲಾ ಇನ್ನು ಹತ್ತು ವರ್ಷಗಳ ಕಾಲ ಇವರೇ ಶಾಸಕರಾಗಿರ ಬೇಕೆಂದರು.
ಅವಳಿ ತಾಲೂಕಿನ ಅಭಿವೃದ್ದಿಗೆ ಹಣ ತರುವಂತಹ ಗುಂಡಿಗೆ ಇರುವುದು ರೇಣುಕಾಚಾರ್ಯ ಅವರಿಗೆ ಮಾತ್ರ, ಈಗಾಗಲೇ ಸಾವಿರಾರು ಕೋಟಿ ಅನುದಾನ ತಂದು ಅವಳಿ ತಾಲೂಕನ್ನು ಅಭಿವೃದ್ದಿ ಮಾಡಿದ್ದಾರೆ, ಇಂತಹ ಅಭಿವೃದ್ದಿ ಹರಿಕಾರರನ್ನು ನಾವು ಗೆಲ್ಲಿಸ ಬೇಕೆಂದರು.
ಈ ಸಂದರ್ಭ ಗ್ರಾಮದ ಮುಖಂಡರಾದ ಮಹೇಶ್ವರಪ್ಪ, ರವಿಕುಮಾರ್, ಚಂದ್ರಪ್ಪ, ಬಸಪ್ಪ, ನಾಗರಾಜ್ ಸೇರಿದಂತೆ ಮತ್ತೀತರರಿದ್ದರು.