ಹೊನ್ನಾಳಿ; ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ನೂತನ ಕಲ್ಲಿನ ಕಟ್ಟಡದ ಕಾರ್ಯಾರಂಭಕ್ಕೆ ಗುರುವಾರ ಚಾಲನೆ.
ಸುಮಾರು 85 ಲಕ್ಷ ರೂಗಳ ವೆಚ್ಚದ ಕಲ್ಲಿನ ಕಟ್ಟಡದ ಕಾಮಗಾರಿಗೆ ಇಂದು ಬೆಳಗ್ಗೆ ಮುತೈದೆಯರು ತುಂಗಭದ್ರ ನದಿಯಲ್ಲಿ ಗಂಗಾ ಪೂಜೆ ನೆರವೆರಿಸಿ ಕುಂಭ ಮೆಳ ಮೆರವಣಿಗೆ ಯೊಂದಿಗೆ ದೇವಸ್ಥಾನ ಕಟ್ಟಡದ ಶುಭಕಾರ್ಯಕ್ಕೆ ಚಾಲನೆ ನಿಡಲಾಯಿತು.
ಕೆಲ ದಿನಗಳ ಹಿಂದೆ ಸ್ವಾಮಿಜಿಗಳ ಸಾನಿಧ್ಯದಲ್ಲಿ ದೇವಸ್ಥಾನ ಕಟ್ಟಡದ ಶಂಕು ಸ್ಥಾಪನೆ ಕಾರ್ಯ ನೆರವೇರಿಸಲಾಗಿತ್ತು.
ಈ ಸಂದರ್ಭದಲ್ಲಿ ದೇವಸ್ಥಾನ ಸಮೀತಿಯ ಪದಾಧಿಕಾರಿಗಳಾದ ಪರಮೇಶ ಪಟ್ಟಣಶೆಟ್ಟಿ,ಹೆಚ್ ಪಿ ರುದ್ರಪ್ಪ,ಕುಂಬಾರ ಮುರುಗೇಂದ್ರಣ್ಣ,ಬಸವರಾಜ್,ಹೆಚ್ ಪಿ ಗಂಗಾದರ,ವಿಜಯಕುಮಾರ, ಬೆನಕನಹಳ್ಳಿ ವೀರಣ್ಣ,ಹೆಚ್ ಆರ್ ಶಿವಣ್ಣ,ಜಿ ದೊಡ್ಡಪ್ಪ,ಹೆಚ್ ಆರ್ ಬಸವರಾಜಪ್ಪ, ಬೆನಕನಹಳ್ಳಿ ಜಯಣ್ಣ, ಬಸವರಾಜಯ್ಯ,ಕುರುಬ ಸಮಾಜದ ಮುಖಂಡರಾದ ಅರಕ್ ಸಿದ್ಧಪ್ಪ,ಅಪ್ಪನ ಕಟ್ಟಿ ರಾಜಪ್ಪ,ಮಾತೆಯರು ಭಾಗವಹಿಸಿದ್ದರು.