ಹೊನ್ನಾಳಿ ಮೇ 26 ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಹೊನ್ನಾಳಿ ತಾಲೂಕು ಲಿಂಗಾಯತ ಸಮಾಜದ ಒಳ ಪಂಗಡಗಳ ಒಕ್ಕೂಟದ ವತಿಯಿಂದ ಇಂದು ಸಮಾಲೋಚನಾ ಸಭೆಯನ್ನು ಡಿಕೆ ಬರಮಪ್ಪ ಗೌಡ್ರು ಮತ್ತು ಕೇ ಕರೆಗೌಡಪ್ಪ ನೇತೃತ್ವದಲ್ಲಿ ಸಭೆಯನ್ನು ನಡೆಸಲಾಯಿತು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಿಕೆ ಬರಮಪ್ಪ ಗೌಡ ನಂತರ ಮಾತನಾಡಿ ಸಾಧು ಲಿಂಗಾಯಿತ ಪಂಚಮಸಾಲಿ ಲಿಂಗಾಯತ ನೊಳಂಬ ಲಿಂಗಾಯತ ಹಾಗೂ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ಸಣ್ಣಪುಟ್ಟ ಒಳಪಂಗಡ ಲಿಂಗಾಯಿತ ಸಮುದಾಯಕ್ಕೆ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಮೇಲ್ಪಂಕ್ತಿ ಮಟ್ಟಕ್ಕೆ ಬರಬೇಕಾದರೆ ಎಲ್ಲಾ ಲಿಂಗಾಯಿತ ಪಂಗಡಗಳು ಒಂದಾಗಿ ಹೋರಾಟ ಮಾಡಿದಾಗ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಬಲರಾಗ ಬಹುದು ಎಂದು ಉದ್ದೇಶವನ್ನಿಟ್ಟುಕೊಂಡು ಈ ಸಭೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.
ಉಪಸ್ಥಿತಿಯಲ್ಲಿ ಡಿಕೆ ಬರಮಪ್ಪ ಗೌಡ್ರು ಬಿದರಗಡ್ಡೆ, ಕೆ ಕರೆ ಗೌಡಪ್ಪ ಸಾಧು ವೀರಶೈವ ಸಮಾಜದ ತಾಲೂಕ ಅಧ್ಯಕ್ಷರು, ಪಟ್ಟಣಶೆಟ್ಟಿ ವೀರಣ್ಣ ಬೆನಕನಹಳ್ಳಿ, ನಂದಿ ಗೌಡ್ರು ಹಿರೇಗೋಣಿಗೆರೆ, ರುದ್ರೇಶ್ ಣ್ಣ ಹೆಂಡರ್, ಚೆನ್ನ ವೀರಪ್ಪಗೌಡ, ಚನ್ನಬಸವಣ್ಣ ಅರಬಗಟ್ಟೆ, ಸಾಯಿ ಹಾಲೇಶ್, ತಿಮ್ಮಣ್ಣ ಕಡದಕಟ್ಟೆ ,ಅಂದಾನಿ ಗಂಗಣ್ಣ ,ಪಟ್ಟಣಶೆಟ್ಟಿ ಗಂಗಣ್ಣ ಗಿರೀಶ್ ಕುಂಬಾರ್, ಅರವಿಂದ ಎಸ್ ಹೊನ್ನಾಳಿ, ಕುಂಕುವ ಕೊಟ್ರೇಶಣ್ಣ, ಜಗದೀಶ್ ಎಚ್ ಕಡದಕಟ್ಟೆ ,ಹಾಲೇಶ್ಣ್ಣ ಅಮಿತ್ ಕುಂದೂರು ಇನ್ನು ಮುಂತಾದ ಒಳಪಂಗಡದ ಲಿಂಗಾಯತ ಸಮಾಜದ ಮುಖಂಡರುಗಳು ಸಹ ಭಾಗಿಯಾಗಿದ್ದರು.