ನ್ಯಾಮತಿ : ಗೋವಿನಕೋವಿ ಹಾಗೂ ರಾಂಪುರ ನಡುವೆ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ 62 ಕೋಟಿ ರೂಪಾಯಿ ಅನುದಾನ ಕೇಳಿದ್ದು, ಅನುದಾನ ನೀಡುವ ಬರವಸೆಯನ್ನು ಗಡ್ಕರಿಯವರು ನೀಡಿದ್ದಾರೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಗೋವಿನಕೋವಿ ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದ ಶಾಸಕರು, ಗೋವಿನಕೋವಿ ಗ್ರಾಮಕ್ಕೆ ಪಶು ಚಿಕಿತ್ಸಾಲಯ ಬೇಕೆಂದು ಸಾಕಷ್ಟು ಬಾರಿ ಗ್ರಾಮಸ್ಥರು ಮನವಿ ಮಾಡಿದ್ದು ಇದೀಗ ಗ್ರಾಮಕ್ಕೆ ಪಶು ಆಸ್ಪತ್ರೆ ಮಂಜೂರು ಮಾಡಿಸಿದ್ದೇನೆ ಎಂದರು.
ಪಶು ಆಸ್ಪತ್ರೆ ತಾತ್ಕಾಲಿಕವಾಗಿ ಹಾಲು ಉತ್ವಾದಕರ ಸಹಕಾರ ಸಂಘದ ಕಚೇರಿಯಲ್ಲಿ ಕೆಲಸ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಕೊಡಿಸುವ ಬರವಸೆ ನೀಡಿದರು.
ಗೋವಿನಕೋವಿ ಗ್ರಾಮದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ,ಹೊಳೆಮೆಟ್ಟಿಲು ಸೇರಿದಂತೆ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿಸಿದ್ದು ಇಡೀ ಗ್ರಾಮವನ್ನು ಧೂಳು ಮುಕ್ತ ಗ್ರಾಮವನ್ನಾಗಿ ಮಾಡಲಾಗಿದೆ ಎಂದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಸಾಕಷ್ಟು ಗ್ರಾಮಗಳಲ್ಲಿ ಪಶು ಆಸ್ಪತ್ರೆ ಬೇಕೆಂದು ಬೇಡಿಕೆ ಇಟ್ಟಿದ್ದು ಮುಂದಿನಗಳಲ್ಲಿ ಆ ಗ್ರಾಮಗಳಿಗೆ ಪಶು ಆಸ್ಪತ್ರೆಯನ್ನು ಮಂಜೂರು ಮಾಡಿಸಲಾಗುವದು ಎಂದ ಶಾಸಕರು, ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಎರಡು ಪಶುಸಂಜೀವಿನ ವಾಹನಗಳನ್ನು ಮಂಜೂರು ಮಾಡಿಸಿದ್ದು ಮನೆ ಬಾಗಿಲಿಗೆ ಈ ವಾಹನ ಬಂದು ಜಾನುವಾರಿಗೆ ಚಿಕಿತ್ಸೆ ನೀಡಲಿದೆ ಎಂದರು.
ಅರಕರೆ,ಟಿ.ಬಿ.ರಸ್ತೆ,ಹಳರಹಳ್ಳಿ ಗ್ರಾಮಗಳಲ್ಲಿ ಚತುಸ್ಪಥ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಗೋವಿನಕೋವಿ,ಚೀಲೂರು,ಕುರುವ ಬಳಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಂದುವರೆ ಕಿಲೋ ಮೀಟರ್ ವರೆಗೆ ಚತುಸ್ಪತ ರಸ್ತೆ ನಿರ್ಮಾಣ ಮಾಡಲು ಅನುದಾನ ಕೇಳಿದ್ದು ಸದ್ಯದಲ್ಲೇ ಅನುದಾನ ಬಿಡುಗಡೆ ಯಾಗಲಿದೆ ಎಂದರು.
ಲಿಂಗಾಪುರ-ಹಿರೇಗೋಣಿಗೆರೆಯ ಹೈಸ್ಕೂಲ್‍ಗಳನ್ನು ಪದವಿ ಪೂರ್ವ ಕಾಲೇಜಿಗೆ ಮೇಲ್ಡರ್ಜೆರಿಸಿದ್ದುಮುಂಬರುವ ಶೈಕ್ಷಣಿಕ ವರ್ಷದಿಂದ ಅವುಗಳು ಕಾರ್ಯರಂಭ ಮಾಡಲಿವೆ ಎಂದ ಶಾಸಕರು, ತಾಲೂಕಿನ ವಿದ್ಯಾರ್ಥಿಗಳ ಹಿತರಕ್ಷಣೆ ದೃಷ್ಟಿಯಿಂದ ಇನ್ನೋದು ಪದವಿ ಪೂರ್ವ ಕಾಲೇಜು ಮಂಜೂರಾತಿಗೆ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದು ಶೀರ್ಘ ಮಂಜೂರಾತಿ ದೊರೆಯಲಿದೆ ಎಂದರು.
ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು. ಈ ಸಂದರ್ಭ ಹಾಲು ಒಕ್ಕೂಟದ ನಿರ್ದೇಶಕರಾದ ಬಸವರಾಜಪ್ಪ, ಗ್ರಾ.ಪಂ.ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಸಿದ್ದೇಶಪ್ಪ ಸದಸ್ಯರಾದ ಎಕೆ ನರಸಿಂಹಪ್ಪ, ಪಾರ್ವತಮ್ಮ, ಶಿಲ್ಪಾ, ಹಾಲಿನ ಡೈರಿ ಅಧ್ಯಕ್ಷರಾದ ಚನ್ನಯ್ಯ ಸೇರಿದಂತೆ ಗ್ರಾಮದ ಮುಖಂಡರಾದ ಚಂದ್ರಪ್ಪ, ಶೇಖರಪ್ಪ, ಹಾಲೇಶಪ್ಪ, ಗಿರೀಶ್, ಸಿದ್ದಪ್ಪ,ವಿ.ಶಿವಮೂರ್ತಿ ಸೇರಿದಂತೆ ವೈದ್ಯರಾದ ವಿರೇಶ್ ಮತ್ತೀತರರಿದ್ದರು.

Leave a Reply

Your email address will not be published. Required fields are marked *