ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಾಲಕರ
ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ
ಗುರುವಾರ ಆಯೋಜಿಸಿದ್ದ ಎರಡು ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು
ಸಾಹಿತಿ ನಾಗರಾಜ ಆರ್ಕಾಚಾರ್ ಉದ್ಘಾಟಿಸಿದರು.
ಕನ್ನಡದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕಿದೆ
ನ್ಯಾಮತಿ:
ಗ್ರಾಮೀಣ ಪ್ರದೇಶಗಳ ಜನರಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ ವಿವಿಧ
ರೀತಿಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಬೇಕು ಎಂದು ದತ್ತಿ ದಾನಿ
ಹಾಗೂ ಸಾಹಿತಿ ನಾಗರಾಜಪ್ಪ ಆರ್ಕಾಚಾರ್ ಸಲಹೆ ನೀಡಿದರು.
ಪಟ್ಟಣzಲ್ಲಿ ಗುರುವಾರÀ ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು
ಮತ್ತು ಬಾಲಕರ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ
ಸಹಯೋಗದಲ್ಲಿÀ ಆಯೋಜಿಸಿದ್ದ ಎರಡು ದತ್ತಿ ಉಪನ್ಯಾಸ
ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಡಿ.ಬಸವರಾಜಪ್ಪ ಅವರು ಸ್ಥಾಪಿಸಿರುವ ಪಾರ್ವತಮ್ಮ ದೊಡ್ಡಮನೇರ
ಮರಿಲಿಂಗಪ್ಪ ಜೀನಹಳ್ಳಿ ದತ್ತಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಮಹಿಳಾ
ವಚನಗಾರ್ತಿಯರ ಕೊಡುಗೆ ಕುರಿತು ಬಾಲಕಿಯರ ಸರ್ಕಾರಿ ಪದವಿಪೂರ್ವ
ಕಾಲೇಜಿನ ಪ್ರೌಢಶಾಲೆ ಸಹಶಿಕ್ಷಕಿ ಜಿ. ಪೂರ್ಣಿಮಾ ಅವರು ಮಾತನಾಡಿದರು.
ನಾಗರಾಜಪ್ಪ ಆರ್ಕಾಚಾರ್ ಮತ್ತು ಸಹೋದರರು ಸ್ಥಾಪಿಸಿರುವ
ಸುಲೋಚನಮ್ಮ ಸಿದ್ಧಪ್ಪ ಸ್ವಾತಂತ್ರ್ಯ ಹೋರಾಟಗಾರರ ದತ್ತಿಯಲ್ಲಿ
ಸಮುದಾಯ ಆಸ್ಪತ್ರೆಯ ಹಿರಿಯ ಆರೋಗ್ಯ ಶಿಕ್ಷಕ ಬಿ. ನಿಂಗಪ್ಪ
ಸಾಂಕ್ರಾಮಿಕ ರೋಗಗಳು ಮತ್ತು ತಡೆಗಟ್ಟುವಿಕೆ ಕುರಿತು ಉಪನ್ಯಾಸ
ನೀಡಿದರು.
ದತ್ತಿ ದಾನಿ ಡಾ. ಡಿ. ಬಸವರಾಜಪ್ಪ ವೈದ್ಯಕೀಯದಲ್ಲಿ ಸರ್ವಜ್ಞನ ವಚನಗಳ
ಕುರಿತು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಪ್ರಾಸ್ತಾವಿಕ
ಮಾತನಾಡಿದರು.
ಶಾಲೆಯ ಮುಖ್ಯೋಪಾಧ್ಯಾಯ ಬಿ. ಶಿವಾನಂದಪ್ಪ ಅಧ್ಯಕ್ಷತೆ ವಹಿಸಿದ್ದರು.
ನಿಕಟಪೂರ್ವ ಅಧ್ಯಕ್ಷ ಜಿ. ನಿಜಲಿಂಗಪ್ಪ, ಅಜೀವ ಸದಸ್ಯ ಗೌಡರ ನಟರಾಜ, ಗೌರವ
ಕಾರ್ಯದರ್ಶಿ ಬಿ.ಜಿ.ಚೈತ್ರಾ, ವೆಂಕಟೇಶನಾಯ್ಕ, ಚಂದನ್‍ಜಂಗ್ಲೀ,
ಎ.ಕೆ.ಕರಿಬಸಪ್ಪ, ಚಂದ್ರೇಗೌಡ, ಕುಬೇರಪ್ಪ, ಆಚೆಮನೆ ತಿಪ್ಪೆಸ್ವಾಮಿ,
ಸಹಶಿಕ್ಷಕರು ಇದ್ದರು.
ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು, ಭಾಗ್ಯಲಕ್ಷ್ಮೀ
ಸ್ವಾಗತಿಸಿದರು, ಕೆ.ಎಂ. ಬಸವರಾಜಪ್ಪ ನಿರೂಪಿಸಿದರು, ಬಂಡಿ ಈಶ್ವರಪ್ಪ
ವಂದಿಸಿದರು.