ಹೊನ್ನಾಳಿ; ರಾಜ್ಯ ನೌಕರರಿಗೆ ನೂತನ ಪಿಂಚಣಿ ಯೋಜನೆ ರದ್ದು ಗೊಳಿಸಿ,ನಿಶ್ಚಿತ ಪಿಂಚಣಿ ಮರು ಸ್ಥಾಪಿಸಲು ಸರ್ಕಾರ ಮುಂದಾಗಬೇಕೆಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಹೆಚ್ ಕೆ ಸಣ್ಣಪ್ಪ ಹೇಳಿದರು.
ಅವರು ನೌಕರರ ಒಕ್ಕೂಟದಿಂದ ತಾಲ್ಲೂಕು ಉಪ ತಹಶೀಲ್ದಾರ ಎಂಕೆ ಸುಭಾಷ್‍ರವರಿಗೆ ಶುಕ್ರವಾರ ಮನವಿ ಸಲ್ಲಿಸಿ ಮಾತನಾಡಿದರು.
ರಾಜ್ಯದಲ್ಲಿ ಖಾಲಿ ಇರುವ 2.80 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಸುವುದರೊಂದಿಗೆ ಈಗಿರುವ ನೌಕರರಿಗೆ ಆಗುತ್ತಿರುವ ಕಾರ್ಯ ಒತ್ತಡ ನಿವಾರಿಸಬೇಕಿದೆ ಎಂದರು.
ಸಂಘದ ಖಜಾಂಚಿ ಜಿಕೆ ಅರುಣ್ ಕುಮಾರ ಮಾತನಾಡಿ ಗುತ್ತಿಗೆ ಆದಾರದ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಸಮಾನ ವೇತನದೊಂದಿಗೆ ನೇರ ನೆಮಕಾತಿಯಲ್ಲಿ ನಿಯಮಾನುಸಾರ ಆದ್ಯತೆ ಕಲ್ಪಿಸುವುದರ ಜೊತೆಗೆ ಸಾರ್ವಜನಿಕ ಉದ್ಯಮಗಳ ಖಾಸಗೀಕರಣವನ್ನ ಕೈ ಬಿಡಬೇಕೆಂದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಚಂದ್ರಾನಾಯ್ಕ,ಎನ್‍ಪಿಎಸ್ ತಾಲ್ಲೂಕು ಅಧ್ಯಕ್ಷ ಪ್ರಕಾಶ್ ನಾಯ್ಕ,ಪದಾಧಿಕಾರಿಗಳಾದ ಎಂ ತಿಪ್ಪೇಶಪ್ಪ,ಮಂಜುನಾಥ್,ಮಲ್ಲಿಕಾರ್ಜುನ್ ಬಡಿಗೇರ್,ಶಿವಲಿಂಗಪ್ಪ,ಹೆಚ್‍ಕೆ ಹಾಲೇಶ್,ಶಕೀಲ್ ಅಹಮ್ಮದ್ ಇದ್ದರು.

Leave a Reply

Your email address will not be published. Required fields are marked *