ನ್ಯಾಮತಿ : ಅವಳಿ ತಾಲೂಕಿನಲ್ಲಿ ಅಭಿವೃದ್ದಿ ಕೆಲಸಗಳಿಗೆ ಎಂದೂ ಕೊನೆಯಿಲ್ಲಾ, ಅಭಿವೃದ್ದಿ ಕೆಲಸಗಳು ನಿರಂತರವಾಗಿ ನಡೆಯುಯತ್ತಲೇ ಇರುತ್ತವೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕುಂದುರೆಕೊಂಡ ಹಾಗೂ ಫಲವನಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು ಮಾತನಾಡಿದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಅಭಿವೃದ್ದಿ ಕೆಲಸಗಳು ನಿರಂತವಾಗಿ ನಡೆಯುತ್ತಲೇ ಇರುತ್ತವೇ ಎಂದ ಶಾಸಕರು, ಅವಳಿ ತಾಲೂಕುಗಳನ್ನು ಧೂಳು ಮುಕ್ತ ತಾಲೂಕುಗಳನ್ನಾಗಿ ಮಾಡ ಬೇಕೆಂದು ಪಣ ತೊಟ್ಟಿದ್ದೇನೆ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕುಗಳನ್ನು ಮಾದರಿ ತಾಲೂಕುಗಳನ್ನಾಗಿ ಮಾಡ ಬೇಕೆಂಬ ಕನಸಿದ್ದು ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದು, ರಾಜ್ಯದ ಜನರು ಒಂದು ಬಾರೀ ಅವಳಿ ತಾಲೂಕಿನ ಕಡೆ ತಿರುಗಿ ನೋಡುವಂತೆ ಅಭಿವೃದ್ದಿ ಮಾಡುತ್ತೇನೆ ಎಂದರು.
ವಿವಿಧ ಕಾಮಗಾರಿಗಳ ಉದ್ಘಾಟನೆ : ತಾಲೂಕಿನ ಕುದುರೆಕೊಂಡ ಗ್ರಾಮದಲ್ಲಿ 4.40 ಲಕ್ಷ ರೂಪಾಯಿ ವೆಚ್ಚದಲ್ಲಿ ಬಸ್‍ನಿಲ್ದಾಣ ನಿರ್ಮಾಣ ಮಾಡಿದ್ದು ಅದನ್ನು ಉದ್ಘಾಟಿಸಿದ ಶಾಸಕರು, ಫಲವನಹಳ್ಳಿ ಗ್ರಾಮದಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಯನ್ನು ಉದ್ಘಾಟಿಸಿದರು. ಇದೇ ವೇಳೆ ಫಲವನಹಳ್ಳಿ ಗ್ರಾಮದ ಮಹಿಳೆಯರು ಗ್ರಾಮಕ್ಕೆ ಚರಂಡಿ ವ್ಯವಸ್ಥೆ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದು, ಶಾಸಕರು ಚರಂಡಿ ವ್ಯವಸ್ಥೆ ಕಲ್ಪಿಸಿಕೊಡುವ ಬರವಸೆ ನೀಡಿದರು.
ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಗೋವಿಂದರಾಜು, ನೇತ್ರಮ್ಮ ನಾಗರಾಜಪ್ಪ ಸೇರಿದಂತೆ ಮುಖಂಡರಾದ ಸತ್ಯನಾರಾಯಣಪ್ಪ,ಸಿದ್ದಪ್ಪ,ಶ್ರೀನಿವಾಸ್,ಮಂಜಪ್ಪ,ಹಳದಪ್ಪ.ಜೆ ಸೇರಿದಂತೆ ಮತ್ತೀತರರಿದ್ದರು.