ಹೊನ್ನಾಳಿ ಮೇ 29 ತಾಲೂಕು ದೇವನಾಯಕನಹಳ್ಳಿ ಸರ್ಕಾರಿ ನೌಕರರ ಸಭಾ ಭವನದಲ್ಲಿ ತಾಲೂಕು ಮಟ್ಟದ ಲಿಂಗಾಯತ ಒಳಪಂಗಡಗಳ ಒಕ್ಕೂಟದ ಸಮಾಲೋಚನೆ ಸಭೆಯನ್ನು ಡಿ ಕೆ ಬರಮಪ್ಪ ಗೌಡ್ರು ಮತ್ತು ಒಳಪಂಗಡಗಳ ಲಿಂಗಾಯಿತರ ಅಧ್ಯಕ್ಷರ ನೇತೃತ್ವದಲ್ಲಿ ದೀಪವನ್ನ ಬೆಳಗಿಸುವುದರ ಮೂಲಕ ಚಾಲನೆ ಕೊಡಲಾಯಿತು.

ಪ್ರಾಸ್ತಾವಿಕ ನುಡಿ ಯನ್ನು ಚನ್ನವೀರಪ್ಪ ಗೌಡ್ರು ರವರು ನೆರವೇರಿಸಿದರು.
ನಿರೂಪಣೆಯನ್ನು ಹೆಚ್ ಕಡದಕಟ್ಟೆ ತಿಮ್ಮಣ್ಣ ನವರು ಬಸವಣ್ಣನವರ ವಚನವನ್ನು ಹೇಳುವುದರ ಮುಖೇನ ಆ ಸಭೆಗೆ ಮೆರುಗನ್ನು ತಂದುಕೊಟ್ಟರು.
ಹಿರೇಮಠದ ಬಸವರಾಜಪ್ಪ ನವರು ಬಸವಣ್ಣನವರ ಆಸೆಯಂತೆ ಅನ್ನ ಕೊಡುವ ರೈತನಿಗೆ ಗೌರವ ತಂದುಕೊಡು ಉದ್ದೇಶದಿಂದ ರೈತರ ಗೀತೆಯನ್ನು ಹಾಡಿ ಬಸವಣ್ಣರ ಕನಸನ್ನು ನನಸು ಮಾಡೋಣ ಎಂದು ಹೇಳಿದರು.
ಉಪನ್ಯಾಸಕರಾದ ಪ್ರಸನ್ನ ರವರು ಬಸವಣ್ಣನವರ ಆಸೆಯಂತೆ ಯಾರು ಲಿಂಗಧಾರಣೆಯನ್ನು ಮಾಡಿಕೊಂಡಿದ್ದಾರೆ ದೊಡ್ಡ ಲಿಂಗಾಯಿತ ಸಮುದಾಯವೇ ಇರಬಹುದು ಹಾಗೂ ಒಳಪಂಗಡಗಳ ಸಣ್ಣ ಲಿಂಗಾಯಿತ ಸಮುದಾಯವು ಇರಬಹುದು ಎಲ್ಲರೂ ಒಟ್ಟಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ಒಂದೆಡೆ ಸೇರಿ ಒಗ್ಗೂಡಿ ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸೋಣ ಎಂದು ತಿಳಿಸಿದರು.
ನಂದಿ ಗೌಡ್ರು ಹಿರೇಗೋಣಿಗೆರೆ ನಂತರ ಮಾತನಾಡುತ್ತಾ ಮೊದಲನೇದಾಗಿ ಬಸವಣ್ಣನವರ ನೆನಪಿಸಿಕೊಂಡು ಎಲ್ಲಾ ಲಿಂಗಾಯಿತ ಒಳಪಂಗಡ ಸಮುದಾಯಗಳು ತಾಳ್ಮೆಯಿಂದ ಬಸವಣ್ಣನವರ ಮಾನದಂಡವನ್ನು ಇಟ್ಟುಕೊಂಡು ಎಲ್ಲಾ ಲಿಂಗಾಯಿತ ಸಮುದಾಯಗಳು ಒಗ್ಗೂಡಿದರೆ ದೇಶವನ್ನು ಆಳಬಹುದು ಎಂದು ತಿಳಿಸಿದರು.


ಅಧ್ಯಕ್ಷರು ಭಾಷಣವನ್ನು ಡಿಕೆ ಬರಮಪ್ಪ ಗೌಡ್ರು ರವರು ಮಾತನಾಡುತ್ತಾ ಬಸವಣ್ಣನವರ ಆಶೀರ್ವಾದದಿಂದ ಹರಿದು ಹಂಚಿಹೋಗಿದ್ದ ಲಿಂಗಾಯತ ಒಳಪಂಗಡಗಳು ಒಂದಾಗಬೇಕು ಹಾಗೂ ದೊಡ್ಡ ಲಿಂಗಾಯಿತ ಸಮುದಾಯಗಳು ಒಳಪಂಗಡ ಲಿಂಗಾಯತರನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಅವರ ಬೆಂಬಲವಾಗಿ ಬೆನ್ನ ಹಿಂದೆ ನಿಂತು ಸಮಾಜದಲ್ಲಿ ಮುಖ್ಯವಾಹಿನಿಗೆ ತರುವಂತ ಕೆಲಸವನ್ನು ಮಾಡುವುದರ ಮುಖೇನ ಲಿಂಗ ಧಾರಣೆಯನ್ನು ಮಾಡಿಕೊಂಡವರು ಎಲ್ಲಾ ಲಿಂಗಾಯಿತರು ಅದರಲ್ಲಿ ಮೇಲು-ಕೀಳು ದೊಡ್ಡ ಮತ್ತು ಸಣ್ಣ ಜಾತಿಯ ಭೇದಭಾವ ಮಾಡದೇ ನಾವೆಲ್ಲರೂ ಒಗ್ಗೂಡಿ ಕೊಂಡು ಈ ಸಮಾಜದಲ್ಲಿ ಹಣಕ್ಕಿಂತ ಗುಣಕ್ಕೆ ಹೆಚ್ಚಿಗೆ ಗೌರವ ಇದೆ ಹಾಗಾಗಿ ಬಸವಣ್ಣನವರು ಕನಸು ಮೂಡ ಚಾರವನ್ನು ಮೌಡ್ಯ ಮತ್ತು ಕಂದಾಚಾರವನ್ನು ಧಿಕ್ಕರಿಸಿ ಕಾಯಕದಿಂದಲೇ ಕೈಲಾಸವನ್ನು ಕಾಣಬಹುದು ಎಂದು ಹೇಳಿದಂತ ಪುಣ್ಯಾತ್ಮನಿಗೆ ನಮ್ಮದೊಂದು ದೊಡ್ಡ ನಮನಗಳು ಎಂದು ಹೇಳುತ್ತಾ ಎಲ್ಲಾ ಲಿಂಗಾಯಿತ ಒಳಪಂಗಡಗಳು ಒಂದಾಗಿ ನಮ್ಮ ಸಮುದಾಯಗಳು ಮೇಲ್ಮಟ್ಟಕ್ಕೆ ಬರುವಂತಹ ಆಗಬೇಕು ಎಂದು ತಿಳಿಸಿದರು.
ಉಪಸ್ಥಿತಿಯಲ್ಲಿ ಅಧ್ಯಕ್ಷತೆ ವಹಿಸಿಕೊಂಡ ಡಿಕೆ ಬರಮಪ್ಪ ಗೌಡ್ರು ಬಿದರಗಡ್ಡೆ, ನಂದಿಗೌಡ್ರು, ಪಂಚಮಸಾಲಿ ಸಮಾಜದ ತಾಲೂಕ ಅಧ್ಯಕ್ಷರಾದ ವೀರಣ್ಣ ಪಿ ,ತಾಲೂಕು ಪಂಚಮಸಾಲಿ ಯುವ ಘಟಕದ ಅಧ್ಯಕ್ಷ ಹಾಲೇಶ್ ಣ್ಣ ಸಾಯಿ, ಅರವಿಂದ್ ಎಸ್ ಎಬಿಸಿ ನ್ಯೂಸ್ ಸಂಪಾದಕರು, ನಾಗೇಂದ್ರಪ್ಪ ದೊಡ್ಡಹಳ್ಳಿ, ಕುಂಬಾರ ಬಸವರಾಜಪ್ಪ ಸಾಸ್ವೆಹಳ್ಳಿ, ಚನ್ನವೀರಪ್ಪ ಗೌಡ್ರು .ತಿಮ್ಮಣ್ಣ ಹೆಚ್ ಕಡದಕಟ್ಟೆ. ಕೋರಿ ಗಂಗಣ್ಣ. ತಾಲೂಕು ಮಟ್ಟದ ಸರ್ವ ಲಿಂಗಾಯಿತ ಒಳಪಂಗಡಗಳ ಅಧ್ಯಕ್ಷರುಗಳು ಹಾಗೂ ಭಾಗವಹಿಸಿದಂತಹ ಎಲ್ಲಾ ಲಿಂಗಾಯಿತ ಮುಖಂಡರುಗಳು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *