ಸಾಸ್ವೆಹಳ್ಳಿ: ಕೆ ಎಸ್ ಆರ್ ಟಿ ಸಿ. ಬಸ್ಸಿನ ಮುಂದೆ ಖಾಸಗಿ ಬಸ್ಸು ಸ್ಟ್ಯಾಂಡ್ ಏಜೆಂಟ್ ಒಬ್ಬರು ಮಲಗಿ ಬಸ್ಸು ಹೋಗುವುದಾದರೆ ನನ್ನ ಮೇಲೆ ಬಸ್ಸು ಹತ್ತಿಸಿಕೊಂಡು ಹೋಗು ಎಂದು ಕೆಲವು ನಿಮಿಷಗಳವರೆಗೆ ಸರ್ಕಾರಿ ಬಸ್ ಚಾಲಕ ಹಾಗೂ ಡ್ರೈವರ್ಗಳಿಗೆ ಸವಾಲ್ ಹಾಕಿದ ಘಟನೆ ಸಾಸ್ವೆಹಳ್ಳಿ ಸರ್ಕಲ್ನಲ್ಲಿ ಶನಿವಾರ ಸಂಜೆ ನಡೆದ ಘಟನೆ ನಡೆಯಿತು.

ಸರ್ಕಾರಿ ಬಸ್ಸು KA-17 F-1704. ಸಾಸ್ವೆಹಳ್ಳಿ ಉಜಿನಿಪೂರ ಹೊನ್ನಳ್ಳಿ ಮಾರ್ಗದ ಬಸ್ಸು ಸುಮಾರು4-50 ನಿಮಿಷಕ್ಕೆ ಬಂದು ಹೊನ್ನಾಳಿ ಕಡೆ ಮುಖ ಮಾಡಿ ನಿಂತಾಗ ಸಾಸ್ವೆಹಳ್ಳಿ ಸರ್ಕಲ್ಲಿನ ಸ್ಟ್ಯಾಂಡ್ ಏಜೆಂಟ್. ಸಿದ್ದಿಕ್ ಅಮದ್. ಹಾಗೂ ಮುಹಿಬುಲ್ಲಾ ಇವರು ಬಸ್ ಚಾಲಕ ಹಾಗೂ ಕಾರ್ಯನಿರ್ವಾಹಕ ಜೊತೆ ಮಾತಿಗೆ ಮಾತು ಬೆಳೆಸಿ ದ್ದು. ನಂತರ ಸಿದ್ದಿಕ್ ಎಂಬುವರು
ಬಸ್ಸಿನ ಮುಂದೆ ಮಲಗಿ ಬಸ್ಸು ಹೊರಡಲು ಹೋಗದಂತೆ ತಡೆದಿದ್ದು ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಸರ್ಕಾರಿ ಬಸ್ ಕಾರ್ಯನಿರ್ವಾಹಕ ಹೇಳುವಂತೆ. ಶನಿವಾರ ಮತ್ತು ಭಾನುವಾರ ಶಾಲೆಗಳಿಗೆ ರಜೆ ಇರುವುದರಿಂದ ಈ ವೇಳೆಯಲ್ಲಿ ವಿದ್ಯಾರ್ಥಿಗಳು ಇರುವುದಿಲ್ಲ ಎನ್ನುವ ಕಾರಣಕ್ಕೆ ಸಾಸ್ವೆಹಳ್ಳಿ ಯಿಂದ ಹೊನ್ನಾಳಿಗೆ ಹೋಗುತ್ತಿದ್ದೇವೆ ಇದನ್ನ ಇವರಿಗೆ ಮನವರಿಕೆ ಮಾಡಿದರು ಕೇಳುತ್ತಿಲ್ಲ ಎಂದು ತಿಳಿಸಿದರು.

ಖಾಸಗಿ ಬಸ್ ಏಜೆಂಟರು ಹೇಳುವಂತೆ ತ್ಯಾಗದಕಟ್ಟೆ. ಬೈರನಹಳ್ಳಿ ಕಡೆ ಹಳ್ಳಿಗಳಿಗೆ ಹೋಗಬೇಕಾದ ಬಸ್ಸು ನಮ್ಮ ಬಸ್ಸು ಇದ್ದ ವೇಳೆಗೆ ಇವರು ಹೋಗುತ್ತಿರುವುದರಿಂದ ಗುರು ರೇಣುಕಾ ಬಸ್ಸಿಗೆ ಕಲೆಕ್ಷನ್ ಆಗುವುದಿಲ್ಲ ಆದ್ದರಿಂದ ಬಸ್ಸನ್ನ ನಾವು ಬಿಡುವುದಿಲ್ಲ ಎಂದರು.

ಇಲ್ಲಿನ ಜನರು ಹೇಳುವಂತೆ ಖಾಸಗಿ ಬಸ್ಸುಗಳ ಏಜೆಂಟರುಗಳ ಮಧ್ಯೆನೆ ಆಗಿಂದಾಗೆ ಗಲಾಟೆ ಪ್ರಕರಣಗಳು ನಡೆಯುತ್ತಿರುತ್ತವೆ ಇನ್ನೂ ಸರ್ಕಾರಿ ಬಸ್ಸುಗಳ ಜೊತೆ ಗಲಾಟೆ ಮಾಡುತ್ತಿದ್ದಾರೆ ಇವರಿಗೆ ಸರ್ಕಾರಿ ಬಸ್ಸುಗಳು ಈ ಭಾಗಕ್ಕೆ ಬರುವುದು ಇಷ್ಟವಿಲ್ಲವೇ ಏನು ಅನಿಸುತ್ತದೆ ಎಂದು ಸಾರ್ವಜನಿಕರು ತಿಳಿಸುತ್ತಾರೆ.

Leave a Reply

Your email address will not be published. Required fields are marked *