ಹೊನ್ನಾಳಿ : ಸಂಘಪರಿವಾರನ್ನು ಯಾರು ಟೀಕೆ ಮಾಡುತ್ತಾರೋ ಅವರು ದೇಶ ದ್ರೋಹಿಗಳೆಂದು ಸಿಎಂ ರಾಜಕಿಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಆರ್‍ಎಸ್‍ಎಸ್ ರಾಷ್ಟ್ರಭಕ್ತಿ ಸಂಸ್ಥೆ, ರಾಷ್ಟ್ರದ್ರೋಹಿಗಳು, ಬಹೋತ್ಪಾದಕರು,ಉಗ್ರಗಾಮಿಗಳಿಗೆ ಬೆಂಬಲ ಕೊಡುವವರು ನಿಜವಾದ ನಪುಸಂಕರು ಎಂದರು.
ಆರ್‍ಎಸ್‍ಎಸ್ ರಾಷ್ಟ್ರಭಕ್ತಿ ಸಂಘಟನೆ, ಇದರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೇಸ್‍ನವರಿಗೆ ಇಲ್ಲಾ ಎಂದ ಶಾಸಕರು, ದೇಶದಲ್ಲಿ ಕಾಂಗ್ರೇಸ್ ಅಡ್ರಸ್ ಇಲ್ಲಾ, ವಿನಾಃ ಕಾರಣ ನಿಮ್ಮ ನಾಲಿಗೆ ಹರಿಬಿಡಬೇಡಿ ಎಂದರು.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಕಚ್ಚಾಟ ನಡೆಯುತ್ತಿದ್ದು, ಆರ್‍ಆರ್‍ಎಸ್ ಬೈದರೆ ರಾಹುಲ್ ಗಾಂಧಿ ನಿಮ್ಮನ್ನು ಸಿಎಂ ಮಾಡುತ್ತಾರೆಂಬ ಭ್ರಮೆಯಲ್ಲಿ ಕಾಂಗ್ರೇಸ್‍ನವರು ಇದ್ದಾರೆ ಎಂದ ಶಾಸಕರು, ಸಂಘ ಪರಿಹಾರ ಟೀಕೆ ಮಾಡಿದರೆ ಜನ ನಿಮ್ಮನ್ನು ಧೂಳಿ ಪಟ ಮಾಡುತ್ತಾರೆ ಎಂದರಲ್ಲದೇ 2023 ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ರಾಹುಲ್‍ಗಾಂಧಿ ರಾಜಕೀಯದಲ್ಲಿ ಇನ್ನೂ ಬಚ್ಚಾ, ರಾಜಕೀಯದ ಪ್ರಜ್ಞೆ ಕೂಡ ಅವರಿಗೆ ಇಲ್ಲಾ, ಎಂದ ರೇಣುಕಾಚಾರ್ಯ ಜನರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಬಸವನಗೌಡ ಪಾಟೀಲ್ ಯತ್ನಾಳ ಅವರು ನನ್ನ ಆತ್ಮೀಯ ಸ್ನೇಹಿತರು. ನೀವು ಸರ್ಕಾರ ಹಾಗೂ ಸಂಘಟನೆ ವಿರುದ್ದ ಮಾತನಾಡುವುದನ್ನು ಬಿಡ ಬೇಕು ಎಂದ ಶಾಸಕರು ಜನರಿಗೆ ನಿಮ್ಮ ಬಗ್ಗೆ ತಪ್ಪು ಸಂದೇಶ ಹೋಗಲಿದ್ದು, ಇದೇ ರೀತಿ ಮಾತನಾಡುತ್ತಾ ಹೋದರೆ ಪಕ್ಷ ಸಹಿಸುವುದಿಲ್ಲಾ ಎಂದರು. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರೇ ಹೇಳಿದ್ದಾರೆ ವಿಜಯೇಂದ್ರ ರಾಜಕೀಯದಲ್ಲಿ ಬೆಳೆಯಲು ಸಾಕಷ್ಟು ಅವಕಾಶ ಇದ್ದು, ಬಿ.ಎಲ್.ಸಂತೋಷ್ ಅವರು ಟಿಕೇಟ್ ತಪ್ಪಿಸಿಲ್ಲಾ ಇದೂ ನೂರಕ್ಕೆ ನೂರು ಸುಳ್ಳು ಎಂದರು.