ಹೊನ್ನಾಳಿ ಮೇ 31 ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ಇಂದು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿರುವ ಸುಮಾರು 43 ಸರ್ಕಾರಿ ಶಾಲೆಗಳಲ್ಲಿ 2016- 17 ನೇ ಸಾಲಿನಿಂದ ಎಲ್ ಕೆ ಜಿ ಮತ್ತು ಯುಕೆಜಿ ಶಿಕ್ಷಕಿಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಾವುಗಳು ಸರ್ಕಾರದ ಅನುಮತಿ ಮೇರೆಗೆ ಒಂದು ವಾರ ತರಬೇತಿಯನ್ನು ನೀಡಿ ಪ್ರಮಾಣಪತ್ರವನ್ನು ಕೊಟ್ಟಿರುತ್ತಾರೆ. ಕಳೆದ 6 ವರ್ಷಗಳಿಂದ ಸ್ವಯಂಪ್ರೇರಿತವಾಗಿ ಕೆಲಸವನ್ನು ನಿರ್ವಹಿಸುತ್ತಿರುವ ನಮಗೆ ಯಾವುದೇ ರೀತಿಯ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯಗಳು ವೇತನವನ್ನು ನೀಡದಿರುವ ಕಾರಣದಿಂದ ದಿನಾಂಕ 2/6/2022 ರಂದು ಸಮಯ ಬೆಳಗ್ಗೆ 11 ಗಂಟೆಗೆ ಸರಿಯಾಗಿ ದೇವನಾಯಕನಹಳ್ಳಿ ಸರ್ಕಲ್ ನಿಂದ ತಾಲೂಕು ಕಚೇರಿಗೆ ಬೃಹತ್ ಪ್ರತಿಭಟನೆಯನ್ನು ಸರ್ಕಾರದ ವಿರುದ್ಧ ಮಾಡಲಾಗುವುದು ಎಂದು ತಾಲೂಕ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಎಲ್ ಕೆ ಜಿ ಮತ್ತು ಯುಕೆಜಿ ತಾಲೂಕ ಅಧ್ಯಕ್ಷರು ಉಪಾಧ್ಯಕ್ಷರು ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸುತ್ತಾ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ವಿವಿಧ ಪರ ಸಂಘಟನೆಗಳು ಹೋರಾಟಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಉಪಸ್ಥಿತಿಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಶಿವಲಿಂಗಪ್ಪ ಹುಣಸಘಟ್ಟ, ಸಂಘಟನಾ ಕಾರ್ಯದರ್ಶಿ ರುದ್ರನಾಯಕ, ಹಾಲಿವಾಣ, ಸುಭಾಷ್, ಪ್ರಿಯಾಂಕ N E, ಉಪಾಧ್ಯಕ್ಷೆ ಲಕ್ಷ್ಮೀ ಶ್ರೀನಿವಾಸ್, ಬಿ ಬಿ ಐಷಾ,ನಜಿಯ ಬಾನು, ಶಿಲ್ಪ ಕೆಪಿ ಇನ್ನು ಮುಂತಾದವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *