ಶಿವಮೊಗ್ಗ ಜಿಲ್ಲೆ ದಿನಾಂಕ :31/05/2022 ರಂದು ಶಿಬಿರದ ಆರನೇ ಧ್ವಜಾರೋಹಣ ಕಾರ್ಯಕ್ರಮವನ್ನು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಆವರಣದಲ್ಲಿ ಶರಾವತಿ ತಂಡದವರು ಆಯೋಜಿಸಿದ್ದರು. ಮುಂಜಾನೆ 06:00 ಗಂಟೆಗೆ ಸರಿಯಾಗಿ ಎಲ್ಲಾ ತಂಡದ ಶಿಬಿರಾರ್ಥಿಗಳು ಧ್ವಜಾರೋಹಣ ಕಾರ್ಯಕ್ರಮಕ್ಕೆ ಹಾಜರಿದ್ದರು. 06:30 ಕ್ಕೆ ಸರಿಯಾಗಿ ಧ್ವಜಾರೋಹಣ ಕಾರ್ಯಕ್ರಮವು ಪ್ರಾರಂಭವಾಯಿತು. ಧ್ವಜಾರೋಹಣ ರೋಹಣ ಕಾರ್ಯಕ್ರಮವನ್ನು ಎಲ್ಲಾ ಕಾರ್ಯಕ್ರಮಾಧಿಕಾರಿಗಳ ಅಮೃತ ಹಸ್ತದಿಂದ ನೆರವೇರಿಸಲಾಯಿತು ಶರಾವತಿ ತಂಡದವರು “ಹೆಣ್ಣು ಭ್ರೂಣ ಹತ್ಯೆಯ” ಕುರಿತು ಸೇವಾ ಸ್ಪಂದನೆಯನ್ನು ಬಿಡುಗಡೆ ಮಾಡಿ, “ತಂಬಾಕು ಮುಕ್ತ ಭಾರತ” ಎಂಬ ವಿಷಯದ ಕುರಿತು ಚಿತ್ರ ವಿಶ್ಲೇಷಣೆ ಮಾಡಿದರು. ನಂತರ ಡಾ|| ನಾಗರಾಜ ಪರಿಸರ ರವರು ಯೋಗ ತರಬೇತಿ ನೀಡಿದರು ಹಿರಿಯ ಸ್ವಯಂ ಸೇವಕರು ಮನೋರಂಜನಾ ಆಟಗಳನ್ನು ಆಡಿಸಿದರು. ಉಪಹಾರಕ್ಕೆ ತೆರಳಿದರು.

ಭದ್ರಾ ತಂಡದವರು ರಾಷ್ಟ್ರೀಯಾ ಭಾವೈಕ್ಯತಾ ಶಿಬಿರದ ಸಮಾರೋಪ ಸಮಾರಂಭವನ್ನು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದರು. ಸರಿಯಾಗಿ 10:30 ಗಂಟೆಗೆ ಮುಖ್ಯ ಅತಿಥಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಮೊದಲಿಗೆ ಸ್ವಯಂ ಸೇವಕಿಯಾದ ಕು|| ರಕ್ಷಿತಾ ಸಿ. ಖ. ಸಾಕ್ಷ್ಯ ಚಿತ್ರದೊಂದಿಗೆ ಶಿಬಿರದ ವರದಿಯನ್ನು ಸವಿಸ್ತಾರವಾಗಿ ಮಂಡಿಸಿದರು. ನಂತರ ಕು|| ಮಹೇಂದ್ರ ಶೆಟ್ಟಿ ಭಾವೈಕ್ಯತಾ ಗೀತೆಯೋಂದಿಗೆ ಕಾರ್ಯಕ್ರಮಕ್ಕೆ ಛಾಲನೆ ನೀಡಿದರು. ರಾಷ್ಟ್ರೀಯ ಸೇವಾ ಯೋಜನೆ ಗೀತೆಯನ್ನು ಹಿರಿಯ ಸ್ವಯಂ ಸೇವಕರು ಪ್ರಸ್ತುತ ಪಡಿಸಿದರು. ವಿವಿಧ ರಾಜ್ಯದ ಮತ್ತು ವಿಶ್ವವಿದ್ಯಾಲಯದ ಸ್ವಯಂ ಸೇವಕರು ತಾವು ಕಲಿತ ಪಾಠ, ಕಳೆದ ಕ್ಷಣಗಳ ಬಗ್ಗೆ ಶಿಬಿರದ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ಡಲ್ಲಾ ಕಾರ್ಯಕ್ರಮಾಧಿಕಾರಿಗಳು ಈ ಶಿಬಿರದಲ್ಲಿ ನಾವು ಪಾಲ್ಗಂಡಿದ್ದು ನಮ್ಮ ಜೀವನದಲ್ಲಿ ನಮಗೆ ಸಿಕ್ಕ ಸುವರ್ಣಾವಕಾಶ. ಈ ಶಿಬಿರವು ನಮಗೆ ಅನೇಕ ರೀತಿ ಸಕರಾತ್ಮಕ ಬದಲಾವಣೆಯನ್ನು ಹೋದುವಲ್ಲಿ ಸಹಾಯಕವಾಗಿದೆ. ಶಿಬಿರದ ಆಯೋಜನೆ ಡಾ|| ನಾಗರಾಜ ಪರಿಸರ ಕಾರ್ಯಕ್ರಮ ಸಂಯೋಜನಾಧಿಕಾರಿಗಳು ಕುವೆಂಪು ವಿಶ್ವವಿದ್ಯಾಲಯ ರವರು ಮತ್ತು ಅವರ ಹಿರಿಯ ಸ್ವಯಂ ಸೇವಕರ ತಂಡ ನಮ್ಮನ್ನ ಉಪಚರಿಸಿದ ರೀತಿ ನಮ್ಮಲ್ಲಿ ಅಗಾದ ಗೌರವನ್ನುಂಟು ಮಾಡದೆ. ಇಂತಹ ಶಿಬಿರ ಮತ್ತೊಮ್ಮೆ ಮೊಗದೊಮ್ಮೆ ಆಯೋಜನೆಯಾಗುತ್ತಿರಲಿ. ಈ ಶಿಬಿರಕ್ಕಾಗಿ ಶ್ರಮಿಸಿದ ಸರ್ವರಿಗೂ ನಮ್ಮ ನಮಸ್ಕಾರಗಳು. ತಮಗೆಲ್ಲಾ ಶುಭವಾಗಲಿ ಎಂದು ತಮ್ಮ ಶಿಬಿರದ ಅನಿಸಿಕೆಯನ್ನು ಭಾವನಾತ್ಮಕವಾಗಿ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಲಕ್ಷ್ಮೀಪ್ರಸಾದ್ ಬಿ. ಎಮ್. ಐ.ಪಿ.ಎಸ್ ಎಸ್.ಪಿ. ಶಿವಮೊಗ್ಗ ಜಿಲ್ಲೆ ಇವರು ತಮ್ಮ ಹಿತನುಡಿಗಳಲ್ಲಿ ಇಂದಿನ ಯುವಪೀಳಿಗೆಯು, ಅಲ್ಪಕ್ಷಣದ ಖುಷಿಗಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ. ಯಂತಹ ಯೋಜನೆಗಳು ವಿದ್ಯಾರ್ಥಿಗಳಗೆ ಯೋಜನೆಯೊಂದಿಗೆ ಯೋಚನೆ, ಆಲೋಚನೆಗಳನ್ನು ಹುಟ್ಟುಹಾಕುತ್ತವೆ. ಆ ಮೂಲಕ ಭಾರತಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡುತ್ತವೆ. ಶಿಬಿರಾರ್ಥಿಗಳನ್ನು ದುಶ್ಚಟಗಳು, ಮಾಧ್ಯಮಗಳ ಅತಿಯಾದ ಬಳಕೆಯಿಂದ ತಮ್ಮ ಗುರಿ ತಲುಪುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ರಾಷ್ಟ್ರೀಯ ಭಾವೈಕ್ಯತಾ ಶಿಬಿರಗಳು ಮತ್ತೆ ವಿದ್ಯಾರ್ಥಿಗಳಿಗೆ ಹೊಸ ಹುರುಪು ಸಾಮಾಜಿಕ ಜವಾಬ್ದಾರಿಯಾಗಿದೆ. ಮತ್ತು ಇತರರಿಗರ ಮಾರ್ಗದರ್ಶನ ಮಾಡುವ ಕೌಶಲ್ಯ, ಅರಿವುಉ ಮೂಡಿಸುವಲ್ಲಿ ಸಹಾಯಕವಾಗಲಿ. ಈ ಶಿಬಿರದ ಎಲ್ಲಾ ಶಿಬಿರಾರ್ಥಿಗಳಿಗೆ ಧನ್ಯವಾದಗಳನ್ನು ಸಮಪ್ಣೆ ಮಾಡಿದರು.ನಮತರ ಪ್ರೋ. ಕಿರಣ್ ದೇಸಾಯಿ ಸಿಂಡಿಕೇಟ್ ಸದಸ್ಯರು ಕುವೆಂಪು ವಿಶ್ವವಿದ್ಯಾಲಯ ಇವರು. ಇಂದಿನ ಶಿಬಿರದಲ್ಲಿ ಎಲ್ಲಾ ಕಾರ್ಯಕ್ರಮಾಧಿಕಾರಿಗಳು ಶಿಬಿರಾಧಿಕಾರಿಗಳ ಅನಿಸಿಕೆಯೇ ಈ ಕಾರ್ಯಕ್ರಮದ ಯಶಸ್ಸಿನ ಪ್ರತಿಬಿಂಭವಾಗಿದೆ. ಇಲ್ಲಿನ ಎಲ್ಲಾ ವಿದ್ಯಾರ್ಥಿಗಳ ಶಿಸ್ತು, ಸಮಯ, ಸೋದರತ್ವ ಗುಣ ನಿಜವಾದ ಭಾರತದ ಐಕ್ಯತೆಯನ್ನು ಎತ್ತಿ ಹಿಡಿಯುತ್ತಿದೆ. ಶಿಬಿರಾರ್ಥಿಗಳ ಭಾಷೆ ಬೇರೆಯಾದರು ಭಾವ ಒಂದೆಯಾಗಿದೆ, ಅವರ ಆಚಾರ ಬೇರೆಯಾದರು ಅವರ ದೇಶನಿರ್ಮಾಣದ ಯೋಚನೆ ಒಂದೇ ಆಗಿದೆ. ಶಿಬಿರದ ಆಯೋಜನೆ, ವ್ಯವಸ್ಥೆ, ರೂಪರೇಶಗಳು ಅತ್ಯಂತ ಕ್ರಮಬದ್ದವಾಗಿ ಮೂಡಿಬಂದು ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ತಮ್ಮ ಹಿತನುಡಿಗಳನ್ನಾಡಿದರು. ಶ್ರೀ ಎಸ್. ಪಿ. ದಿನೇಶ್ ಅಧ್ಯಕ್ಷರು ಪದವೀದರರ ಸ್ವಸಹಾಯ ಸಂಘ ಶಿವಮೊಗ್ಗ ಇವರು ಈ ಶಿಬಿರವು ಭಾವನಾತ್ಮಕ ಬೆಸುಗೆಯನ್ನು ಬೆಸೆದಿದೆ. ಈ ಶಿಬಿರದ ಎಲ್ಲಾ ಶಿಬಿರಾರ್ಥಿಗಳಲ್ಲಿ ಕುಟುಂಬದ ಸದಸ್ಯರಂತೆ ಕಾಣುತ್ತಿರುವುದನ್ನು ಕಂಡರಂತೆ ಭಾರತದ “ಸರ್ವ-ಧರ್ಮ ಸಮನ್ವಯದ” ತಾತ್ಪರ್ಯ ನಿಜಕ್ಕೂ ಸತ್ಯ ಮತ್ತು ಶ್ಲಾಘನೀಯ ಎಂಬ ಭಾವನೆ ನಮ್ಮಲ್ಲಿ ಮೂಡುತ್ತಿದೆ, ನಿಜವಾದ ಪ್ರೀತಿ ಸೌಹಾರ್ಧತೆ, ಸೋದರತ್ವ, ಉತ್ತಮ ಆಲೋಚನೆಗಳಿದ್ದರೆ “ಭಾಷೆಯಾಗಲಿ, ಪ್ರದೇಶವಾಗಲಿ ಯಾವ ಅಡ್ಡಿಯಾಗದು” ಎಂದು ಶಿಬಿರವನ್ನು ನೋಡಿದರೆ ತಿಳಿಯುತ್ತದೆ, ಇದು ವಿವಿಧ ರಾಜ್ಯಗಳ ಕಲೆ, ಸಂಸ್ಕøತಿ, ಸಂಸ್ಕಾರಗಳ ಸಂಗಮ ಎಂದು ತಮ್ಮ ನುಡಿಗಳಲ್ಲಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಂತಹ ಡಾ|| ವೀಣಾ ಕೆ. ಎಂ. ಪ್ರಾಚಾಂiÀರ್iರು ಸಹ್ಯಾದ್ರಿ ವಾಣಜ್ಯ ಮತ್ತು ನಿರ್ವಹಣಾ ಕಾಲೇಜು ಶಿವಮೊಗ್ಗ ಇವರು ಈ ಶಿಬಿರದ ಆಯೋಜನೆ ಅತ್ಯಂತ ವ್ಯವಸ್ಥಿತವಾಗಿದ್ದು. ಈ ಶಿಬಿರವು ನಮ್ಮ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದು ನಮಗೆ ಹೆಮ್ಮೆ ತಂದಿದೆ. ಡಾ|| ನಾಗರಾಜ ಪರಿಸರ ರವರ ಕಾರ್ಯಕ್ಷಮತೆ ಕ್ರಿಯಾಶೀಲತೆ ಅವರ ಸಹಾನುಭೂತಿ ಗುಣಗಳು. ಈ ಶಿಬಿರದ ಯಶಸ್ವಿಗೆ ಕಾರಣವಾಗಿದೆ, ದೇಶ ನಮಗೇನು ಕೊಟ್ಟಿದೆ ಎಂಬುದಕ್ಕಿಂತ ದೇಶಕ್ಕಾಗಿ ನಾವು ಏನುಕೊಟ್ಟಿದ್ದೇನೆ ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರು ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು. ನಂತರ ರಾಜ್ಯ ಮತ್ತು ವಿವಿಧ ವಿಶ್ವವಿದ್ಯಾಲಯದ ತಂಡದವರಿಗೆ ಪ್ರಮಾಣ ಪತ್ರವನ್ನು ಮತ್ತು ನೆನಪಿನ ದ್ಯೋತಕವಾಗಿ “ವಿವೇಕಾನಂದರ” ಸ್ಮರಣಿಕೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ವರಿಗೂ ಹಾಗೂ ಶಿಬಿರದ ಯಶಸ್ವಿಗೆ ಕಾರಣರದ ಸರ್ವರಿಗೂ ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ|| ನಾಗರಾಜ ಪರಿಸರ ತುಂಬು ಹೃದಯದ ಕೃತಜ್ಞತೆಯನ್ನು ತಿಳಿಸಿದರು. ನಂತರ ವಿದ್ಯಾರ್ಥಿ ನಿಲಯದಲ್ಲಿ ಬೋಜನಾ ವ್ಯವಸ್ಥತೆಯನ್ನು ಮಾಡಲಾಗಿತ್ತು. ಶಿಬಿರದ ಸದಸ್ಯರು ಬೋಜನೆಯನ್ನು ಸ್ವೀಕರಿಸಿ ತಮ್ಮ ವಿಶ್ವವಿದ್ಯಾಲಯಕ್ಕೆ ತೆರಳಿದರು.

Leave a Reply

Your email address will not be published. Required fields are marked *