ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ
ವತಿಯಿಂದ ದಾವಣಗೆರೆ ಪಿ.ಬಿ. ರಸ್ತೆಯ ಅರುಣ ಚಿತ್ರ ಮಂದಿರದ ಎದುರಿನ
ಪಶು ಆಸ್ಪತ್ರೆ ಅವರಣದಲ್ಲಿರುವ ಪಶುಪಾಲನಾ ಮತ್ತು
ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಜೂನ್ ಮಾಹೆಯಲ್ಲಿ
ರೈತರಿಗೆ ಪಶುಸಂಗೋಪನಾ ಚಟುವಟಿಕೆ ಕುರಿತು ತರಬೇತಿ
ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಜೂ.02 ರಿಂದ ಜೂ.30 ರವರೆಗೆ ಪಶುವೈದ್ಯರಿಗೆ ಪುನಃಶ್ಚೇತನ
ತರಬೇತಿ 30 ಜನರಿಗೆ, ಆಧುನಿಕ ಹೈನುಗಾರಿಕೆ ಬಗ್ಗೆ ತರಬೇತಿ, ಕುರಿ
ಮತ್ತು ಮೇಕೆ ಸಾಕಾಣಿಕೆ ಬಗ್ಗೆ ತರಬೇತಿ, ಕೋಳಿ ಸಾಕಾಣಿಕೆ
ತರಬೇತಿ ಕಾರ್ಯಕ್ರಮದಲ್ಲಿ ತಲಾ 25 ಜನರಿಗೆ ತರಬೇತಿ ನೀಡುವ
ಗುರಿ ಹೊಂದಲಾಗಿದೆ.
ತರಬೇತಿಗೆ ಹಾಜರಾಗುವ ರೈತರು ಆಧಾರ್ ಕಾರ್ಡ್ ಜೆರಾಕ್ಸ್,
ಎರಡು ಪಾಸ್ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಹಾಗೂ
ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರ ತರಬೇಕು,
ತರಬೇತಿ ಅವಧಿಯಲ್ಲಿ ಯಾವುದೇ ಪ್ರೋತ್ಸಾಹಧನ ಮತ್ತು
ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುವೈದ್ಯಕೀಯ ಸಹಾಯಕರ
ತರಬೇತಿ ಕೇಂದ್ರ ದಾವಣಗೆರೆ ಇವರ ದೂರವಾಣಿ ಸಂಖ್ಯೆ 08192-
233787 ಗೆ ಸಂಪರ್ಕಿಸಬಹುದಾಗಿದೆ ಎಂದು ಮುಖ್ಯ
ಪಶುವೈದ್ಯಾಧಿಕಾರಿಗಳು (ಆಡಳಿತ) ಪಶುಪಾಲನಾ ಮತ್ತು
ಪಶುವೈದ್ಯಕೀಯ ತರಬೇತಿ ಕೇಂದ್ರ ಇವರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.