ಹೊನ್ನಾಳಿ ಮೇ 31 ಸರ್ಕಾರಿ ಶಾಲೆಗಳಲ್ಲಿ ಎಲ್ ಕೆ ಜಿ ಮತ್ತು ಯುಕೆಜಿ ಬೋಧನೆಯನ್ನು ಮಾಡುತ್ತಿರುವ ಶಿಕ್ಷಕಿಯರ ಗೌರವಧನಕ್ಕಾಗಿ ದಾವಣಗೆರೆ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿಯರುಗಳು ದೇವನಾಯಕನಹಳ್ಳಿ ಸರ್ಕಲ್ ನಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಾಲು ಜಾಥಾದ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಅಲ್ಲಿಂದ ತಾಲೂಕು ಕಚೇರಿಯ ವರೆಗೆ ಪಾದಯಾತ್ರೆಯ ಮೂಲಕ ಘೋಷಣೆಯನ್ನು ಕೂಗುತ್ತಾ ಇಂದು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿರುವ ಸುಮಾರು 43 ಸರ್ಕಾರಿ ಶಾಲೆಗಳಲ್ಲಿ 2016- 17 ನೇ ಸಾಲಿನಿಂದ ಎಲ್ ಕೆ ಜಿ ಮತ್ತು ಯುಕೆಜಿ ಶಿಕ್ಷಕಿಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಾವುಗಳು ಸರ್ಕಾರದ ಅನುಮತಿ ಮೇರೆಗೆ ಒಂದು ವಾರ ತರಬೇತಿಯನ್ನು ನೀಡಿ ಪ್ರಮಾಣಪತ್ರವನ್ನು ಕೊಟ್ಟಿರುತ್ತಾರೆ. ಕಳೆದ 6 ವರ್ಷಗಳಿಂದ ಸ್ವಯಂಪ್ರೇರಿತವಾಗಿ ಕೆಲಸವನ್ನು ನಿರ್ವಹಿಸುತ್ತಿರುವ ನಮಗೆ ಯಾವುದೇ ರೀತಿಯ ಸರ್ಕಾರದಿಂದ ಸೌಲಭ್ಯಗಳು ವೇತನ ಮತ್ತು ಭದ್ರತೆಯನ್ನು ನೀಡದಿರುವ ಕಾರಣದಿಂದ ದಿನಾಂಕ 2/6/2022 ರಂದು ಸಮಯ ಬೆಳಗ್ಗೆ 11 ಗಂಟೆಗೆ ಸರಿಯಾಗಿ ತಾಲೂಕ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಎಲ್ ಕೆ ಜಿ ಮತ್ತು ಯುಕೆಜಿ ತಾಲೂಕ ಅಧ್ಯಕ್ಷರು ಉಪಾಧ್ಯಕ್ಷರು ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸಿ ತಾಲೂಕು ಉಪ ತಹಶೀಲ್ದಾರ್ ಸುರೇಶ್ ರವರಿಗೆ ಮನವಿ ಪತ್ರವನ್ನು ರಾಜ್ಯಸರ್ಕಾರಕ್ಕೆ ಕಳಿಸಿಕೊಡುವಂತೆ ಒತ್ತಾಯಿಸಿದರು.
ರಾಜ್ಯ ಸರ್ಕಾರವು ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟವನ್ನು ರಾಜ್ಯಾದ್ಯಂತ ಮಾಡಲಾಗುವುದು ಎಂದು ತಿಳಿಸಿದರು.
ಉಪಸ್ಥಿತಿಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಶಿವಲಿಂಗಪ್ಪ ಹುಣಸಘಟ್ಟ, ತಾಲೂಕ ಎಲ್ ಕೆ ಜಿ ಮತ್ತು ಯುಕೆಜಿ ಸಂಘದ ಅಧ್ಯಕ್ಷರಾದ ಜಯಲಕ್ಷ್ಮಿ ಸಂಘಟನಾ ಕಾರ್ಯದರ್ಶಿ ರುದ್ರನಾಯಕ ಹಾಲಿವಾಣ, ಸತೀಶ್ ಬನ್ನಿಕೋಡ್ ಪಿಜಿ ಮಂಜುನಾಥ್ , ಸುಭಾಷ್, ಪ್ರಿಯಾಂಕ N E, ಉಪಾಧ್ಯಕ್ಷೆ ಲಕ್ಷ್ಮೀ ಶ್ರೀನಿವಾಸ್, ಬಿ ಬಿ ಗೌರವಾಧ್ಯಕ್ಷೆ ಕವಿತಾ ಖಜಾಂಚಿ ಪ್ರಿಯಾಂಕ ರಂಜಿತ ಸಾವಿತ್ರಮ್ಮ ಐಷಾ,ನಜಿಯ ಬಾನು, ಶಿಲ್ಪ ಕೆಪಿ ಇನ್ನು ಮುಂತಾದವರು ಸಹ ಭಾಗಿಯಾಗಿದ್ದರು.