ಹರಿಹರ ನಗರಸಭೆ ವತಿಯಿಂದ 2022-23ನೇ ಸಾಲಿನ
ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ
ಜೀವನೋಪಾಯ ಅಭಿಯಾನ ಯೋಜನೆಯಡಿ ಸ್ವಯಂ ಉದ್ಯೋಗ
ಕಾರ್ಯಕ್ರಮದಡಿ, ವ್ಯಕ್ತಿಗತ ಉದ್ಯಮಶೀಲತೆ (ಸಾಲ ಮತ್ತು
ಸಹಾಯಧನ), ಗುಂಪು ಉದ್ಯಮ ಕಾರ್ಯಕ್ರಮದಡಿ, ಗುಂಪು
ಉದ್ಯಮ ಕೈಗೊಳ್ಳಲು, ಎಸ್.ಹೆಚ್,ಜಿ ಬ್ಯಾಂಕ್ ಕ್ರೆಡಿಟ್ ಲಿಂಕೇಜ್
ಕಾರ್ಯಕ್ರಮದಡಿ ಸಾಲ ಪಡೆಯಲು, ಕೌಶಲ್ಯಾಭಿವೃದ್ಧಿ ಮೂಲಕ
ಉದ್ಯೋಗ ಮತ್ತು ಸ್ಥಳ ನಿಯುಕ್ತಿ ಕಾರ್ಯಕ್ರಮದಡಿ ವಿವಿಧ
ತರಬೇತಿಯನ್ನು ಪಡೆಯಲು, ಮಹಿಳಾ ಸ್ವ ಸಹಾಯ
ಸಂಘಗಳನ್ನು ರಚಿಸಲು, ವಿಕಲಚೇತನ ಪುರುಷರ ಸ್ವ ಸಹಾಯ
ಸಂಘಗಳನ್ನು ರಚಿಸಲು, ಬೀದಿ ಬದಿ ವ್ಯಾಪಾರಿಗಳ ಸ್ವ ಸಹಾಯ
ಸಂಘಗಳನ್ನು ರಚಿಸಲು ಆಸಕ್ತಿ ಹೊಂದಿದ ಅರ್ಹ ಫಲಾನುಭವಿ
ಅಥವಾ ಗುಂಪುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಫಲಾನುಭವಿಗಳು ಹರಿಹರದ
ನಿವಾಸಿಗಳಾಗಿರಬೇಕು, ಬಡತನ ರೇಖೆಗಿಂತ ಕೆಳಗಿರುವ
ಕುಟುಂಬದವರಾಗಿರಬೇಕು ಹಾಗೂ ಅರ್ಜಿಯೊಂದಿಗೆ ರೇಷನ್ ಕಾಡ್,
ಚುನಾವಣಾ ಗುರುತಿನ ಚೀಟಿ, ನಿವಾಸಿ ದೃಢೀಕರಣ ಪತ್ರ, ಆಧಾರ್ ಕಾರ್ಡ್,
ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಅನುಭವ ಪ್ರಮಾಣ ಪತ್ರ,
ಹುಟ್ಟಿದ ತಾರೀಖು ದೃಢೀಕರಣ ಪತ್ರ ಲಗತ್ತಿಸಿ ಅರ್ಜಿಯನ್ನು
ದ್ವಿಪತ್ರಿಯಲ್ಲಿ ಜೂನ್ 30 ರ ಒಳಗಾಗಿ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ
ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಸಂಬಂಧಪಟ್ಟ ಶಾಖೆಯಲ್ಲಿ
ವಿಚಾರಿಸಬಹುದಾಗಿದೆ ಎಂದು ಹರಿಹರ ನಗರಸಭೆ ಪೌರಾಯುಕ್ತರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.