ದಾವಣಗೆರೆ ಜಿಲ್ಲೆಯ 2022-23ನೇ ಸಾಲಿನ
ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ
ಯೋಜನೆಯಡಿ ಮುಂಗಾರು ಹಂಗಾಮಿನ ಅವಧಿಗೆ ಜಿಲ್ಲೆಯಲ್ಲಿ
ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ವಿಮಾ
ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ತೋಟಗಾರಿಕೆ
ಬೆಳೆಗಳನ್ನು ನೋದಾಯಿಸಿಕೊಳ್ಳಬಹುದಾಗಿದೆ.
ರೈತರು ತೋಟಗಾರಿಕೆ ಬೆಳೆಗಳಾದ ಅಡಿಕೆ ಬೆಳೆಗೆ ಪ್ರತಿ
ಹೆಕ್ಟೇರ್‍ಗೆ ರೂ.1,28,000 ವಿಮಾ ಮೊತ್ತಕ್ಕೆ 6400.ರೂ, ದಾಳಿಂಬೆ
ಬೆಳೆಗೆ ಪ್ರತಿ ಹೆಕ್ಟೇರ್‍ಗೆ ರೂ.1,27,000 ವಿಮಾ ಮೊತ್ತಕ್ಕೆ 6350.ರೂ,
ವಿಳ್ಯದೆಲೆ ಬೆಳೆಗೆ ಪ್ರತಿ ಹೆಕ್ಟೇರ್‍ಗೆ ರೂ.1,17,000 ವಿಮಾ ಮೊತ್ತಕ್ಕೆ
5850.ರೂ, ಕಾಳುಮೆಣಸು ಬೆಳೆಗೆ ಪ್ರತಿ ಹೆಕ್ಟೇರ್‍ಗೆ ರೂ.47,000

ವಿಮಾ ಮೊತ್ತಕ್ಕೆ 2350.ರೂ, ಮಾವು ಬೆಳೆಗೆ ಪ್ರತಿ ಹೆಕ್ಟೇರ್‍ಗೆ
ರೂ.80,000 ವಿಮಾ ಮೊತ್ತಕ್ಕೆ 4000.ರೂ ಪ್ರತಿ ಹೆಕ್ಟೇರ್‍ಗೆ ವಿಮಾ
ಕಂತು ಪಾವತಿಸಬೇಕು.
 ರೈತರು ಅಡಿಕೆ, ದಾಳಿಂಬೆ, ವಿಳ್ಯದೆಲೆ, ಕಾಳುಮೆಣಸು ಬೆಳೆಗಳ
ವಿಮಾ ಮೊತ್ತ ಪಾವತಿಸಲು ಜೂ.30 ಕೊನೆಯ ದಿನವಾಗಿದೆ, ಮತ್ತು
ಮಾವು ಬೆಳೆಗಳ ವಿಮಾ ಮೊತ್ತ ಪಾವತಿಸಲು ಜು.31 ಅಂತಿಮ
ದಿನವಾಗಿದೆ. ರೈತರು ಬೆಳೆಗಳ ವಿಮೆ ಕಂತನ್ನು ಎಸ್.ಬಿ.ಐ ಇನ್ಸರೆನ್ಸ್
ಕಂಪನಿ ಲಿಮಿಟೆಡ್ ವಿಮಾ ಸಂಸ್ಥೆ(ಟೋಲ್ ಫ್ರೀ ನಂ: 18001021111) ಯಲ್ಲಿ
ಪಾವತಿಸಿ ನೋಂದಣಿ ಮಾಡಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೈತರು ಸಮೀಪದ ಬ್ಯಾಂಕ್ ಶಾಖೆ, ಗ್ರಾಮ
ಪಂಚಾಯಿತಿ ಕಚೇರಿ, ಸಾಮಾನ್ಯ ಸೇವಾ ಕೇಂದ್ರಗಳು, ರೈತ
ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು
ಅಥವಾ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ
ನಿರ್ದೇಶಕರ ದೂ.ಸಂ ದಾವಣಗೆರೆ08192-297090, 08192-
250153/9482129648, ಚನ್ನಗಿರಿ 08189-228170/9449759777, ಹೊನ್ನಾಳಿ 08188-
252990/8296358345, ನ್ಯಾಮತಿ 08188-252990/8296358345, ಹರಿಹರ 08192-
242803/7625078054, ಜಗಳೂರು 08196-227389/9353175240 ಗೆ
ಸಂಪರ್ಕಿಸಬಹುದೆಂದು ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ)
ದಾವಣಗೆರೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *