ಹುಣಸಘಟ್ಟ: ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಲಿಂಗಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶಾಲಾ ಅಂಗಳದಲ್ಲಿ ಸಾಹಿತ್ಯೋತ್ಸವ ಮತ್ತು ಶ್ರೀಮತಿಬರಮಮ್ಮ ಪಂಡಿತ್ ಬರಮೆ ಗೌಡ್ರು ಸ್ಮರಣಾರ್ಥ, ಶ್ರೀ ಲಕ್ಷ್ಮಣಪ್ಪ ವೈಶ್ಯರ್ ಇವರ ಸ್ಮರಣಾರ್ಥ, ಶ್ರೀಮತಿ ನಾಗಮ್ಮ ಶ್ರೀ ಅಂಗಡಿ ಕೆಂಚಪ್ಪ ಶ್ರೀಮತಿ ಪ್ರಭಾವತಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಮುರಿಗೆಪ್ಪ ಗೌಡ್ರು ಪ್ರಾಸ್ತಾವಿಕ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡುವ ವ್ಯಕ್ತಿಗಳಿಂದ ಯುವ ಕವಿಗಳು ಲೇಖಕರು ಮತ್ತು ಸಾಹಿತ್ಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಅವರು ನೀಡುವ ದತ್ತಿಯಿಂದ ಪೂರ್ವಜರ ಹೆಸರಲ್ಲಿ ಕನ್ನಡ ಕಟ್ಟುವ ಕೆಲಸವಾಗುತ್ತದೆ. ದೇಶದ ಬಹುತೇಕ ಪ್ರಾದೇಶಿಕ ಭಾಷೆಗಳು ಸಾವಿಂದಾನಾತ್ಮಕ ಮಾನ್ಯತೆ ಪಡೆದರೂ ಸಹ ಅಳಿವಿನಂಚಿನಲ್ಲಿವೆ ಇಂಥ ಕಾರ್ಯಕ್ರಮಗಳಿಂದ ಸಾಹಿತ್ಯ ಭಾಷೆ ಮತ್ತು ಮುಂದಿನ ಯುವ ಪೀಳಿಗೆಗೆ ಸಹಕಾರಿಯಾಗಲಿದೆ ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಾಹಿತಿ ಕೆಪಿ ದೇವೇಂದ್ರಯ್ಯ ಕನಕದಾಸರ ಕೀರ್ತನೆ ಮಂಡಿಗೆಗಳ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ ಹಲವಾರು ವರ್ಷ ನೆರಳಾಗಿ ನಿಂತ ಮರ ತೊಲೆಯಾಗಿ ಉಳಿಯಿತು ನೂರಾರು ವರ್ಷ. ನೂರಾರು ವರ್ಷ ಆಳಿದ ಅರಸ ಹೆಣವಾಗಿ ಉಳಿಯಲಿಲ್ಲ ಮೂರು ದಿವಸ ಎಂದರು.
ಇತಿಹಾಸ ಉಪನ್ಯಾಸಕಿ ವನಜಾಕ್ಷಮ್ಮ ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯ ಬಗ್ಗೆ ಉಪನ್ಯಾಸ ನೀಡಿ ವೇದವನ್ನು ಓದಿದವರು ದೊಡ್ಡವರಲ್ಲ ಜನರ ವೇದನೆಯನ್ನು ಅರಿತವರು ದೊಡ್ಡವರು. ಸನ್ಮಾನ ದೊಡ್ಡದಲ್ಲ ಸಂಸ್ಕಾರ ದೊಡ್ಡದು. ಹಣ ದೊಡ್ಡದಲ್ಲ ಗುಣ ದೊಡ್ಡದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ನಂಜಪ್ಪ ಗೌಡ್ರು ವಹಿಸಿದ್ದರು. ಗ್ರಾ ಪಂ ಅಧ್ಯಕ್ಷೆ ಉಷಾ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಶೇಖರಪ್ಪ ಪದಾಧಿಕಾರಿಗಳಾದ ರೇವಣಪ್ಪ ಗೋವಿಂದಪ್ಪ ಕತ್ತಿಗೆ ನಾಗರಾಜ್ ಶಾಲಾ ಮುಖ್ಯಶಿಕ್ಷಕ ಕುಮಾರಸ್ವಾಮಿ ಚನ್ನಬಸಪ್ಪ, ಗ್ರಾ ಪಂ ಸದಸ್ಯೆ ರೇಖಾ, ಪ್ರೌಢಶಾಲಾ ಶಿಕ್ಷಕರು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *