ಹೊನ್ನಾಳಿಃ- ಜೂ 4 ಕೆಲಸಕ್ಕೆ ಸೇರಿದ ಪ್ರತಿಯೊಬ್ಬರಿಗೂ ಕೂಡ ಕಾನೂನು ರೀತಿಯಲ್ಲಿ ನಿವೃತ್ತಿ ಇರುತ್ತದೆ ಆದರೆ ವ್ಯಕ್ತಿಯ ಕ್ರಿಯಾಶೀಲತೆಗೆ ಎಂದಿಗೂ ಕೂಡ ನಿವೃತ್ತಿ ಎಂಬುದಿರುವುದಿಲ್ಲ ಎಂದು ಹಿರೇಕಲ್ಮಠದ ಡಾ. ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶ್ರೀ ಚನ್ನಪ್ಪಸ್ವಾಮಿ ವಿದ್ಯಾಪೀಠದಡಿಯಲ್ಲಿ ನಡೆಯುತ್ತಿರುವ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹೋದ್ಯೋಗಿಗಳ ಮತ್ತು ವಿದ್ಯಾರ್ಥಿಗಳ ನೆಚ್ಚಿನ ಪ್ರಾಂಶುಪಾಲರಾಗಿ ಉತ್ತಮ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಡಾ. ಪಿ.ಬಿ.ಚಾಮರಾಜ್ ಅವರ ಬೀಳ್ಕೋಡುಗೆ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಹಾಗೂ ಸೇವಾನಿವೃತ್ತರಾದ ಪ್ರಾಂಶುಪಾಲರಿಗೆ ಬಿಡುಗಡೆ ಆದೇಶ ಪತ್ರವನ್ನು ವಿದ್ಯುಕ್ತವಾಗಿ ನೀಡಿ ಮಾತನಾಡಿದರು.
ನಿವೃತ್ತರಾದ ಪ್ರಾಂಶುಪಾಲ ಡಾ. ಪಿ.ಬಿ.ಚಾಮರಾಜ್ ಅವರು ಅತ್ಯಂತ ಬಡ ಕುಟುಂಬದಿಂದ ತಮ್ಮ ಸ್ವಂತ ಪರಿಶ್ರಮ, ಶ್ರದ್ದೇ, ಸೇವಾಮನೋಭಾವನೆ ಮೂಲಕ ಹಾಗೂ ವಿಶೇಷವಾಗಿ ತಮ್ಮ ಕಾಲೇಜಿಗೆ ಬರುವ ಅತ್ಯಂತ ಬಡ ವಿದ್ಯಾರ್ಥಿಗಳಿಗೆ ತಾವೇ ಸ್ವತಃ ಆರ್ಥಿಕ ಸಹಾಯವನ್ನೂ ಕೂಡ ನೀಡುವ ಜೊತೆಗೆ ತಮ್ಮ ವಿದ್ಯಾರ್ಥಿಗಳು ವಿಷ್ಯದಲ್ಲಿ ಜೀವನ ರೂಪಿಸಿಕೊಳ್ಳುವಂತೆ ಮಾಡಿರುವ ಒಬ್ಬ ಅಪರೋಪದ ಪ್ರಾಧ್ಯಪಕರಾಗಿ, ಪ್ರಾಂಶುಪಾಲರಾಗಿ ಡಾ.ಪಿ.ಬಿ.ಚಾಮರಾಜ್ ಅವರು ಸೇವೆ ಅನನ್ಯವಾಗಿದೆ ಎಂದು ಹೇಳಿದರು.
ಇದೇ ರೀತಿ ಇವರ ಸ್ಥಾನಕ್ಕೆ ಹೂಸದಾಗಿ ಅಧಿಕಾರವಹಿಸಿ ಕೊಂಡಿರುವ ನೂತನ ಪ್ರಾಂಶುಪಾಲ ಪ್ರವೀಣ್ ದೊಡ್ಡಗೌಡರ್ ಅವರು ಕಾಲೇಜನ ಎಲ್ಲಾ ಬೊಧಕ ಮತ್ತು ಬೋಧೇಕೇತರ ಸಿಬ್ಬಂದಿಗಳ ಸಹಕಾರ ಪಡೆದು ಇವರೂ ಕೂಡ ಸಿಬ್ಬಂದಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುವ ಮೂಲಕ ಕಾಲೇಜಿನ ಶ್ರೇಯೋಭಿವೃದ್ದಿಗೆ ಶ್ರಮಿಸಬೇಕು ಎಂದು ಸ್ವಾಮೀಜಿ ಹೇಳಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಪ್ರಸ್ತುತ ಪ್ರಾಂಶುಪಾಲ ಪ್ರವೀಣ್ ದೊಡ್ಡಗೌಡರ್ ಮಾತನಾಡಿ ಮುಂದಿನ ದಿನಗಳಲ್ಲಿ ಕಾಲೇಜು ನ್ಯಾಕ್ ಸಮೀತಿ ಪರಿವೀಕ್ಷಣೆಗೆ ಒಳಗಾಗಲಿದ್ದು ತಮ್ಮ ಕಾಲೇಜು ನ್ಯಾಕ್ ಕಮಿಟಿಯಿಂದ ಉತ್ತಮ ಶ್ರೇಯಾಂಕ ಪಡೆಯುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಅಗಮಿಸಿದ್ದ ನಿವೃತ್ತ ಪ್ರಾಂಶುಪಾಲರ ತಂದೆ ಬಸಪ್ಪ ಅವರು ಮಾತನಾಡಿ ತಮ್ಮ ಮಗನ ವಿದ್ಯಾಭ್ಯಾಸ ಮಾಡಿಸುವ ಹಂತದಲ್ಲಿ ಅನುಭವಿಸಿದ ಬಡತನದ ಕಷ್ಟನಷ್ಟಗಳ ತಮ್ಮ ಅನುಭವವನ್ನು ಹಂಚಿಕೊಂಡು ತಮ್ಮಮಗನಿಗೆ ಪ್ರಾಧ್ಯಾಪಕ ಹುದ್ದೆ ದಯಪಾಲಿಸಿದ ಹೊನ್ನಾಳಿ ಹಿರೇಕಲ್ಮಠದ ಶ್ರಿ ಚನ್ನಪ್ಪಸ್ವಾಮಿ ಮಠದ ಪೀಠಾಧ್ಯಕ್ಷರುಗಳನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರುಗಳಾದ ಓ.ನಾಗೇಂದ್ರಪ್ಪ, ನರಸಪ್ಪ,ಪ್ರಾಧ್ಯಾಪಕರಾದ ಎಂ.ಆರ್.ಪಾಟೀಲ್, ಸಾಸ್ವೇಹಳ್ಳಿ ಸತೀಶ್, ಎಚ್.ಜಿ.ಶಿವನಗೌಡ, ಲೋಕೇಶ್, ನಾಗೇಶ್, ಎಸ್.ಬಿ.ಪಾಟೀಲ್ ಮೆಣಸಿನಹಾಳ್, ನಿವೃತ್ತ ಪ್ರಧ್ಯಾಪಕ .ಪಿ.ಶಿವನಗೌಡ, ವಿನೋದಮ್ಮ ಸೇರಿದಂತೆ ಸ್ಥಳೀಯ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಶಿವಬಸಪ್ಪ ಯತ್ತಿನಹಳ್ಳಿ ಹಾಗೂ ಪ್ರ`ಧ್ಯಾಪಕರು, ಸಾಸ್ವೇಹಳ್ಳಿ ಸೇರಿದಂತೆ ವಿವಿದ ಕಾಲೇಜುಗಳ ಪ್ರಾಧ್ಯಾಪಕರುಗಳು, ಹಲವಾರು ಜನ ಹಳೆವಿದ್ಯಾರ್ಥಿಗಳು, ಸಹೋದ್ಯೋಗಿಗಳು,ಆಡಳಿತ ಮಂಡಳಿಯ ಸದಸ್ಯಮಾದಪ್ಪ, ಮಹಾಲಿಂಗಪ್ಪ, ಚನ್ನೇಶಪ್ಪ ಸಮಾರಂಭಕ್ಕೆ ಅಗಮಿಸಿ ನಿವೃತ್ತರಾದ ಡಾ.ಪಿ.ಬಿ.ಚಾಮರಾಜ್ಅವರಿಗೆ ಸನ್ಮಾನಿಸಿದರು.
ವಯೋನಿವೃತ್ತರಾದ ಡಾ. ಪಿ.ಬಿ.ಚಾಮರಾಜ್ ಮತ್ತು ಅವರ ಕುಟುಂಬಕ್ಕೆ ಕಾಲೇಜಿನ ಸಿಬ್ಬಂದಿಗಳು, ಹಾಗೂ ಆಡಳಿತ ಮಂಡಳಿಯವರು ಕೂಡ ಆದ್ದೋರಿಯಾಗಿ ಸನ್ಮಾನಿಸಿ ಗೌರವಿಸಿದರು. ಹಾಗೂ ಪಿ.ಬಿ.ಚಾಮರಾಜ್ ಅವರ ಕುಟುಂಬದವರು ಹಿರೇಕಲ್ಮಠದ ಸ್ವಾಮೀಜಿಯವರಿಗೆ ಗೌರವಸಮರ್ಪಣೆ ಮಾಡಿ ಆಶೀರ್ವಾದ ಪಡೆದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ನರಗಟ್ಟೆ ಸ್ವಾಗತಿಸಿದರು. ಪ್ರ್ರಾಧ್ಯಾಪಕ ನಾಗೇಶ್ ಅವರು ಕಾರ್ಯಕ್ರಮ ನಿರೋಸಿದರು.ವಂದಿಸಿದರು.