ಹೊನ್ನಾಳಿ ಜೂನ್ 5 ಪಟ್ಟಣದಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದಿನಾಂಕ 5/ 6/2022 ರಂದು ಸಂಜೆ ಐದು ಗಂಟೆಗೆ ಸರಿಯಾಗಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ಯನ್ನು ಪಂಚಮಸಾಲಿ ಸಮಾಜದ ತಾಲೂಕು ಗೌರವಾಧ್ಯಕ್ಷರಾದ ಡಾಕ್ಟರ್ ರಾಜಕುಮಾರ್ ಮತ್ತು ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷರಾದ ಪಿ ವೀರಣ್ಣ ಮತ್ತು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯ ಉಪಾಧ್ಯಕ್ಷರಾದ ಪಟ್ಟಣಶೆಟ್ಟಿ ಪರಮೇಶಣ್ಣ ಇವರುಗಳ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಮಾಜದ ಮಹಿಳಾ ಘಟಕದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಆಯ್ಕೆ ಪ್ರಕ್ರಿಯೆ ಜವಾಬ್ದಾರಿಯನ್ನು ತಾಲೂಕ್ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಡಾ// ರಾಜಕುಮಾರ್ ಅವರು ಪೂರ್ಣಪ್ರಮಾಣದ ಜವಾಬ್ದಾರಿಯನ್ನು ತೆಗೆದುಕೊಂಡು ತಾಲೂಕಿನ ಸಮಾಜದ ಮಹಿಳೆಯರು ಮತ್ತು ಪುರುಷರ ನೇತೃತ್ವದಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂದು ನೇರವಾಗಿ ಸಮಾಜದ ಮಹಿಳೆಯರಿಗೆ ಮತ್ತು ಪುರುಷರಿಗೆ ತಿಳಿಸಿದಾಗ,. ಸಮಾಜದ ಮಹಿಳೆಯರು ಮತ್ತು ಪುರುಷರು ತಾವು ಗೌರವಾಧ್ಯಕ್ಷರಾಗಿ ತಾವು ಯಾರನ್ನು ಆಯ್ಕೆಯನ್ನು ಮಾಡಿದರೂ ಸಹ ಅದಕ್ಕೆ ನಮ್ಮೆಲ್ಲರ ಒಮ್ಮತದ ಸಹಮತ ಇದೆ ಎಂದು ಹೇಳಿದಾಗ ತಾಲೂಕ ಅಧ್ಯಕ್ಷರು ರಾಜ್ಯ ಉಪಾಧ್ಯಕ್ಷರು ಅವರ ಮಧ್ಯ ಚರ್ಚಿಸಿ ತೀರ್ಮಾನಕ್ಕೆ ಬಂದು ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಶಿಲ್ಪಾ ರಾಜು ಹಿರೇಮಠ, ಕಾರ್ಯದರ್ಶಿಗಳಾಗಿ ಶ್ರೀಮತಿ ಕವಿತಾ ಚನ್ನೇಶ್ ಮತ್ತು ಶ್ರೀಮತಿ ಅನುರಾಧಾ ಚಂದ್ರಶೇಖರ ಚನ್ನಮುಂಬಾಪೂರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಎಂದು ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ವೀರಣ್ಣನವರು ತಿಳಿಸಿದರು. ಹೊನ್ನಾಳಿ ತಾಲೂಕಿನ ಪಂಚಮಸಾಲಿ ಸಮಾಜದ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. .ಇದರ ಜೊತೆಗೆ ತಾಲೂಕು ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು85/: ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡುವುದರ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು. ಇದರ ಜೊತೆಗೆ ರಾಜ್ಯ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷರಾದ ಜಿ ಬಿ ಪಾಟೀಲ್ ಮತ್ತು ರಾಜ್ಯ ಪಂಚಮಸಾಲಿ ಸಮಾಜದ ಉಪಾಧ್ಯಕ್ಷರಾದ ಪಟ್ಟಣಶೆಟ್ಟಿ ಪರಮೇಶ್ ಣ್ಣ ಹಾಗೂ ಹೊನ್ನಾಳಿ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿಗೆ ಆಯ್ಕೆ ಆದಂತಹ ಅಧ್ಯಕ್ಷರುಗಳಿಗೆ ಹಾಗೂ ಸದಸ್ಯರುಗಳಿಗೆ ಮತ್ತು ಸಮಾಜಸೇವೆ ಮಾಡಿದಂತ ಪುರುಷರಿಗೆ ಮತ್ತು ಮಹಿಳೆಯರಿಗೆ ಸನ್ಮಾನಿಸಲಾಗುವುದು ಎಂದು ಗೌರವಾಧ್ಯಕ್ಷರಾದ ಡಾ// ಎಚ್ ಪಿ ರಾಜಕುಮಾರ್ ಅವರು ತಿಳಿಸಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಡಾಕ್ಟರ್ ರಾಜಕುಮಾರ್ ಅವರು ನಂತರ ಮಾತನಾಡಿ ಪಂಚಮಸಾಲಿ ಸಮಾಜವು ಈ ತಾಲೂಕಿನಲ್ಲಿ ಪ್ರತಿಯೊಂದು ಕುಟುಂಬದಲ್ಲಿ ಶಿಕ್ಷಣವಂತ ರಾಗಬೇಕು ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಸಮಾಜದಲ್ಲಿ ಮೇಲ್ಪಂಕ್ತಿಯ ಮಟ್ಟಕ್ಕೆ ನಾವು ಕಿತ್ತೂರಾಣಿ ಚೆನ್ನಮ್ಮನ ಹಾದಿಯನ್ನು ನೆನಪಿಸಿಕೊಂಡು ಪ್ರತಿಯೊಬ್ಬರು ನಮ್ಮ ನಮ್ಮ ಮಕ್ಕಳು ಶಿಕ್ಷಣವಂತರಾದಾಗ ಅವರ ಆಲೋಚನೆ ಮಟ್ಟವು ಸಹ ಶ್ರೀಮಂತ ವಾಗಿರುತ್ತದೆ ಹಾಗಾಗಿ ಸಮಾಜವು ಸದೃಢವಾಗಿ ಮೇಲ್ಮಟ್ಟಕ್ಕೆ ಬರುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಗೌರವಾಧ್ಯಕ್ಷರಾದ ಡಾ// H P ರಾಜಕುಮಾರ್, ತಾಲೂಕು ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಪಿ ವೀರಣ್ಣ ಬೆನಕನಹಳ್ಳಿ ರಾಜ್ಯ ಪಂಚಮಸಾಲಿ ಸಮಾಜದ ಉಪಾಧ್ಯಕ್ಷರಾದ ಪಟ್ಟಣಶೆಟ್ಟಿ ಪರಮೇಶ್ ಣ್ಣ, ಪಂಚಮಸಾಲಿ ಸಮಾಜದ ಮಾಜಿ ಅಧ್ಯಕ್ಷರುಗಳಾದ ಸೋಮಣ್ಣ, ಚೆನ್ನಬಸಣ್ಣ ಜೆ ಬೆನಕನಹಳ್ಳಿ , , ನಗರ ಘಟಕದ ಅಧ್ಯಕ್ಷ ಗಿರೀಶ್, ಕುಂಕೊದ ಹಾಲೇಶ್ ಣ್ಣ, ರೈತ ಮುಖಂಡ ಬಸವರಾಜಪ್ಪ ಹಿರೇಮಠ ,ಪತ್ರಕರ್ತ ಮೃತ್ಯುಂಜಯ ಪಾಟೀಲ್, ಇಡ್ಲಿ ಶಿವಣ್ಣ, ಅಶೋಕ ಒಡೆಯರ ಹತ್ತೂರು, ಹಾಲೇಶ್ ಣ್ಣ ಬಳ್ಳೇಶ್ವರ, ಚನ್ನಮುಂಬಾಪೂರ ಚಂದ್ರಶೇಖರ್, ಸಾಸ್ವೆಹಳ್ಳಿ ಕಲ್ಪನಾ ಸೋಮಣ್ಣ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸವಿತಾ ಉಮೇಶ್ ನಾಡಿಗೇರ್ ,ವಿನಯ್ ಕೆಬಿ ಬೆನಕನಹಳ್ಳಿ ,ಪ್ರಭುದೇವ್, ಪ್ರಶಾಂತ್ ಕಮ್ಮಾರಗಟ್ಟೆ, ಪೇಟೆ ಪ್ರಶಾಂತ್, ಮೀನಾಕ್ಷಮ್ಮ ಚಂದ್ರಶೇಖರ್ ಹಿರೇಮಠ, ಹಾಗೂ ಸಮಾಜದ ಎಲ್ಲ ಹಿರಿಯ ಮತ್ತು ಕಿರಿಯ ಪುರುಷ ಮತ್ತು ಮಹಿಳೆ ಮುಖಂಡರುಗಳು ಸಹಭಾಗಿಯಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.