ಹೊನ್ನಾಳಿ : ಸಾಲುಮರದ ತಿಮ್ಮಕ್ಕ ಶತಾಯುಷ್ಯವನ್ನು ಪಡೆದ ಮಹಾನ್ ತಾಯಿ,ಪರಿಸರ ಉಳಿಸಿ ಬೆಳೆಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿ, ಅವರ ಮಾರ್ಗದರ್ಶನದಲ್ಲಿ ನಾವು ಕಾಡನ್ನು ಬೆಳೆಸಿ, ಪರಿಸರ ಉಳಿಸ ಉಳಿಸುವ ಕೆಲಸವನ್ನು ಮಾಡುತ್ತೇವೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ರಾಂಪುರ ಗ್ರಾಮಕ್ಕೆ ಆಗಮಿಸಿದ್ದ ಪದ್ಮಶ್ರೀ ಪುರಸ್ಕøತ ಸಾಲುಮರದ ತಿಮ್ಮಕ್ಕನವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ತಮಗೆ ಮಕ್ಕಳಿಲ್ಲಾ ಎಂಬ ಕಾರಣಕ್ಕೆ ರಸ್ತೆ ಬದಿಯಲ್ಲಿ ಮರಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಸಾಕಿದ ಮಹಾನ್ ತಾಯಿ ತಿಮ್ಮಕ್ಕೆ ಎಂದ ಶಾಸಕರು, ಡಾ|| ಶಿವಕುಮಾರ ಸ್ವಾಮೀಜಿಯವರನ್ನು ಬಿಟ್ಟರೇ 111 ವರ್ಷ ಬದುಕಿರುವ ಮಹಾನ್ ತಾಯಿ ಎಂದರೆ ಅದು ಸಾಲುಮರದ ತಿಮ್ಮಕ್ಕ ಎಂದರು.
ಪರಿಸರ ದಿನಾಚರಣೆಯನ್ನು ಕೇವಲ ಒಂದು ದಿನ ಆಚರಿಸಿದರೆ ಸಾಲದು, ಪ್ರತಿಯೊಬ್ಬರೂ ಸಾಲುಮರದ ತಿಮ್ಮಕ್ಕನವರೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಗಿಡ ನೆಡುವ ಮೂಲಕ ಪರಿಸರವನ್ನು ರಕ್ಷಿಸುವಂತೆ ಕರೆನೀಡಿದರು.
ತಿಮ್ಮಕ್ಕನವರು ಅನಕ್ಷರಸ್ತೆಯಾಗಿದ್ದರೂ ಕೂಡ ಪರಿಸರ ಸಂರಕ್ಷಣೆಯಲ್ಲಿ ಅವರ ಕಾರ್ಯ ಮಹತ್ತರ ವಾದದ್ದು ಎಂದ ಶಾಸಕರು, ಅವರಿಗೆ ಪರಿಸರದ ಮೇಲಿನ ಪ್ರೀತಿಯನ್ನು ಕಂಡು ಸಾಕಷ್ಟು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳು ಅವರಿಗೆ ವಿವಿಧ ಬಿರುದುಗಳನ್ನು ನೀಡಿ ಪುರಸ್ಕರಿಸಿವೆ ಎಂದರು.
ತಿಮ್ಮಕ್ಕನವರು ಹೊನ್ನಾಳಿ ತಾಲೂಕಿಗೆ ಬಂದಿರುವುದು ನಮ್ಮೆಲ್ಲರ ಸೌಭಾಗ್ಯ ಎಂದ ಶಾಸಕರು, ನಿಮ್ಮ ಆಶೀರ್ವಾದ ಎಲ್ಲರ ಮೇಲಿರಲಿ ಎಂದರು.
ಇದೇ ವೇಳೆ ಮಾತನಾಡಿದ ಸಾಲುಮರದ ತಿಮ್ಮಕ್ಕ ಪ್ರತಿಯೊಬ್ಬರೂ ಕೂಡ ಪರಿಸರ ರಕ್ಷಣೆಯ ಕಡೆಗೆ ಒತ್ತು ನೀಡ ಬೇಕೆಂದರಲ್ಲದೇ, ಮರಗಳನ್ನು ಕಡಿಯುವ ಬದಲು ಮರಗಳನ್ನು ಉಳಿಸಿ ಬೆಳೆಸಿ ಎಮದು ಕರೆ ನೀಡಿದರು.
ಈ ವೇಳೆ ತಿಮ್ಮಕ್ಕನವರ ದತ್ತುಪುತ್ರ ಉಮೇಶ್,ರಾಂಪುರ ಮಠದ ಶಿವಕುಮಾರ ಹಾಲಸ್ವಾಮೀಜಿ. ಮಾಜಿ ಜಿಲ್ಲಾಪಂಚಾಯಿತಿ ಸದಸ್ಯ ಸುರೇಂದ್ರನಾಯ್ಕ,ನಿಗಮದ ನಿರ್ದೇಶಕ ಶಿವುಹುಡೇದ್ ಮುಖಂಡರಾದ ಚೇತನ್,ರಮೇಶ್ ಸೇರಿದಂತೆ ಮತ್ತೀತರರಿದ್ದರು.