ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ
ದಾಖಲಿಸುವಾಗ ಸತ್ಯಾಸತ್ಯತೆ ಪರಿಶೀಲಿಸುವ ಜೊತೆಗೆ ಕಾಯ್ದೆ
ದುರುಪಯೋಗ ಆಗದಂತೆ ಗಮನಹರಿಸಬೇಕು ಎಂದು
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಬುಧವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ
ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ
ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ
ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟುವ ಉದ್ದೇಶದಿಂದ ಜಾರಿಗೆ
ತರಲಾಗಿರುವ ದೌರ್ಜನ್ಯ ತಡೆ ಕಾಯ್ದೆಯಡಿ ಪರಿಶಿಷ್ಟ
ಸಮುದಾಯದವರಿಗೆ ನ್ಯಾಯ ಒದಗಿಸುವಲ್ಲಿ ಪ್ರಕರಣಗಳನ್ನು
ದಾಖಲು ಮಾಡಿಕೊಳ್ಳಲು ಆದ್ಯತೆ ನೀಡಬೇಕು. ಯಾವುದೇ
ಕಾರಣಕ್ಕೂ ರಾಜಿ ಸಂಧಾನಗಳ ಮೂಲಕ ಪ್ರಕರಣಗಳನ್ನು
ಇತ್ಯರ್ಥ ಪಡಿಸದೆ ಕರಾರುವಕ್ಕಾದ ತನಿಖೆ ನಡೆಸಿ ನೊಂದವರಿಗೆ
ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ
ಮಾಡಬೇಕು ಎಂದು ತಿಳಿಸಿದರು
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಕುಂದುವಾಡ
ಮಂಜುನಾಥ್ ಮಾತನಾಡಿ, ಕಳೆದ ತಿಂಗಳು ದಾವಣಗೆರೆ ತಾಲೂಕಿನ
ಗ್ರಾಮದ ಯುವಕ ಯುವತಿಯೊಬ್ಬರಿಗೆ ಮೆಸೇಜ್ ಮಾಡಿದ ಎನ್ನುವ
ಕಾರಣಕ್ಕಾಗಿ ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ.
ಯುವತಿಯ ಕಡೆಯವರು ಹುಡುಗನ ಮೇಲೆ
ಸುಳ್ಳುಆರೋಪವನ್ನು ಮಾಡಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ
ಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕೆಂದು ತಿಳಿಸಿದರು.
ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಈ ಗ್ರಾಮದ ಯುವಕನ ಪ್ರಕರಣಕ್ಕೆ
ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ನ್ಯಾಯ
ಒದಗಿಸಲಾಗುವುದು ಹಾಗೂ ಎಸ್‍ಸಿಪಿ ಅನುದಾನ ದುರ್ಬಳಕೆ ಕುರಿತು
ಸತ್ಯಾಸತ್ಯತೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಮತ್ತೋರ್ವ ನಾಮನಿರ್ದೇಶಿತ ಸದಸ್ಯ ಪಿ.ಎಂ ನಾಗರಾಜ್ ಮಾತನಾಡಿ,
ಜೆ.ಹೆಚ್ ಪಟೇಲ್ ನಗರಕ್ಕೆ ಹಿಂದೆ ರಾತ್ರಿ ಸಮಯದಲ್ಲಿ ಗಸ್ತು
ವಾಹನಗಳು ಬರುತ್ತಿದ್ದವು, ಆದರೆ ಇತ್ತೀಚಿನ ದಿನಗಳಲ್ಲಿ ಅದು
ಸ್ಥಗಿತಗೊಂಡಿದೆ. ಜೊತೆಗೆ ಇಲ್ಲಿ ಹಾಸ್ಟೆಲ್‍ಗಳ ಸಂಖ್ಯೆ ಹೆಚ್ಚಿದ್ದು
ವಿದ್ಯಾರ್ಥಿಗಳಿಗೆ ಕಾಲೇಜಿಗೆ ತೆರಳಲು ಸಂಚಾರಕ್ಕಾಗಿ ಕೆಎಸ್‍ಆರ್‍ಟಿಸಿ ಬಸ್
ವ್ಯವಸ್ಥೆ ಕಲ್ಪಿಸಬೇಕೆಂದರು.
ಜಿಲ್ಲಾಧಿಕಾರಿ ಸಭೆಯಲ್ಲಿ ಹಾಜರಿದ್ದ ಕೆಎಸ್‍ಆರ್‍ಟಿಸಿ ವಿಭಾಗಾಧಿಕಾರಿಗೆ ಜೆ.ಹೆಚ್
ಪಟೇಲ್ ಬಡಾವಣೆಯ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ
ಬಸ್ ಸಂಚಾರ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ
ನೀಡಿದರು.
ನಾಮನಿರ್ದೇಶಿತ ಸದಸ್ಯ ಆವರಗೆರೆ ವಾಸು ಮಾತನಾಡಿ,
ಆನೆಕೊಂಡದ ಬಳಿ ಇರುವ ಮಟ್ಟಿಕಲ್ಲು ನಗರ ಪ್ರದೇಶದಲ್ಲಿ ಎಸ್ಸಿ –
ಎಸ್ಟಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ, ಅಲ್ಲಿಯ ಜನರಿಗೆ
ಸೂಕ್ತ ಮೂಲಭೂತ ಸೌಕರ್ಯಗಳಿಲ್ಲ ಮತ್ತು ಶೌಚಾಲಯ
ವ್ಯವಸ್ಥೆ ಇಲ್ಲ ದಾವಣಗೆರೆ ಮಹಾನಗರ ಪಾಲಿಕೆ ಅವರು ಸ್ವಚ್ಛ ಭಾರತ್
ಮಿಷನ್ ಯೋಜನೆಯಡಿ ಪ್ರತಿಯೊಂದು ಕುಟುಂಬಗಳಿಗೆ ಶೌಚಾಲಯ
ನಿರ್ಮಾಣ ಮಾಡಿಕೊಡಬೇಕೆಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಮಹಾನಗರ ಪಾಲಿಕೆ ಆಯುಕ್ತ
ವಿಶ್ವನಾಥ್.ಪಿ.ಮುದ್ದಜ್ಜಿ ಪ್ರತಿಕ್ರಿಯಿಸಿ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ,
ಪರಿಶೀಲನೆ ನಡೆಸಿ ಶೌಚಾಲಯ ಹಾಗೂ ಇನ್ನಿತರ ಮೂಲಭೂತ ಸೌಲಭ್ಯ
ಒದಗಿಸುವ ಬಗ್ಗೆ ಭರವಸೆ ನೀಡಿದರು.
ಸಭೆಯಲ್ಲಿ ಪೆÇಲೀಸ್ ಇಲಾಖೆಯಲ್ಲಿ ದಾಖಲಾದ ಪರಿಶಿಷ್ಟ ಜಾತಿ
ಮತ್ತು ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ಪ್ರಕರಣಗಳ
ಸ್ವರೂಪ, ಬಿ.ರಿಪೆÇೀರ್ಟ್ ಆದ ಪ್ರಕರಣಗಳು, ಚಾರ್ಜ್ ಶೀಟ್ ಸಲ್ಲಿಕೆ
ಆಗಿರುವ ಪ್ರಕರಣಗಳು ಹಾಗೂ ತನಿಖಾ ಹಂತದಲ್ಲಿರುವ
ಪ್ರಕರಣಗಳು, ದೌರ್ಜನ್ಯಕ್ಕೊಳಗಾದವರಿಗೆ ಪರಿಹಾರದ ಕುರಿತು
ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಜಿ.ಪಂ ಸಿಇಒ ಡಾ.ಎ.ಚನ್ನಪ್ಪ, ಸಮಾಜ ಕಲ್ಯಾಣ
ಇಲಾಖೆ ಉಪನಿರ್ದೇಶಕಿ ಕೌಸರ್ ರೇμÁ್ಮ, ಅಂಬೇಡ್ಕರ್ ಅಭಿವೃದ್ಧಿ ನಿಗಮದ
ಜಿಲ್ಲಾ ವ್ಯವಸ್ಥಾಪಕ ರಮೇಶ್, ಜಿಲ್ಲಾ ಪರಿಶಿಷ್ಟ ವರ್ಗಗಳ
ಕಲ್ಯಾಣಾಧಿಕಾರಿ ಮಂಜನಾಯ್ಕ ಸೇರಿದಂತೆ ಜಿಲ್ಲಾ ಜಾಗೃತಿ ಮತ್ತು
ಉಸ್ತುವಾರಿ ಸಮಿತಿ ಸದಸ್ಯರು, ಪದಾಧಿಕಾರಿಗಳು ಹಾಜರಿದ್ದರು.