ಹೊನ್ನಾಳಿ : ಕಳೆದ ಕೆಲ ದಿನಗಳ ಹಿಂದೆ ಸುರಿದ ಬಾರೀ ಮಳೆಯಿಂದಾಗಿ ಅವಳಿ ತಾಲೂಕಿನಲ್ಲಿ ಬೆಳೆಹಾನಿ,ಸಾರ್ವಜನಿಕ ಆಸ್ತಿ ಹಾನಿ,ರಸ್ತೆ,ಸೇತುವೆ,ಶಾಲಾಕೊಠಡಿಗಳು ಸೇರಿದಂತೆ ಸಾಕಷ್ಟು ಹಾನಿ ಉಂಟಾದ ಹಿನ್ನೆಲೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವಳಿ ತಾಲೂಕಿನ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ತಾಲೂಕು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಅಕಾಲಿಕ ಮಳೆಯಿಂದಾಗಿ 31,45,98,900 ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾಧ್ಯಂತ 159 ಮನೆಗಳಿಗೆ ಹಾನಿಯಾಗಿದ್ದು 35,63,900 ಲಕ್ಷ ರೂಪಾಯಿ ನಷ್ಟವಾಗಿದೆ ಎಂದರು. ಕೃಷಿಗೆ ಸಂಬಂದಿಸಿದಂತೆ ಭತ್ತ ಸೇರಿದಂತೆ ವಿವಿಧ ಬೆಳೆಗಳು ಸೇರಿದಂತೆ 990 ಹೆಕ್ಟೇರ್ ನಷ್ಟು ನಷ್ಟವಾಗಿದ್ದು 1,33,65000 ರೂ ನಷ್ಟು ಉಂಟಾಗಿದೆ ಎಂದರು. ಬೆಸ್ಕಾಂ ಇಲಾಖೆಗೆ ಸಂಬಂಧಿಸಿದಂತೆ ಅವಳಿ ತಾಲೂಕಿನಲ್ಲಿ 1.07 ಕೋಟಿ ನಷ್ಟ ಉಂಟಾಗಿದೆ ಎಂದರು.ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಅವಳಿ ತಾಲೂಕಿನಲ್ಲಿ ಐದು ರಸ್ತೆ, ಒಂದು ಕಟ್ಟಡ,ಒಂದು ಸೇತುವೆ,ಏಳು ಕೆರೆಗಳು ಸೇರಿದಂತೆ 1.80 ಕೋಟಿ ನಷ್ಟವಾಗಿದೆ ಎಂದರು.
ಕೆಆರ್‍ಡಿಎಲ್ ಇಲಾಖೆಗೆ ಸಂಬಂಧಿಸಿದಂತೆ ಸಿಸಿರಸ್ತೆ ಹಾಗೂ ರಾಜಕಾಲುವೆಗೆ ಹಾನಿಯಾಗಿದ್ದು ಒಟ್ಟು 5,16 ಕೋಟಿ ನಷ್ಟವಾಗಿದೆ ಎಂದರು. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಐದು ಸೇತುವೆಗಳು ಹಾಗೂ ನಾಲ್ಕು ರಸ್ತೆಗಳು ಸೇರಿದಂತೆ ಅವಳಿ ತಾಲೂಕಿನಲ್ಲಿ 5.70 ಕೋಟಿ ನಷ್ಟ ಉಂಟಾಗಿದೆ ಎಂದರು. ಶಿಕ್ಷಣ ಇಲಾಖೆಗೆ ಸಂಬಂದಿಸಿದಂತೆ 137 ಶಾಲಾ ಕೊಠಡಿಗಳಿಗೆ ಹಾನಿಯಾಗಿದ್ದು ಒಟ್ಟು 5.74 ಕೋಟಿ ನಷ್ಟವಾಗಿದೆ ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ 15 ಅಂಗನವಾಡಿಗಳಿಗೆ ಹಾನಿಯಾಗಿದ್ದು ಒಟ್ಟು 2.64 ಕೋಟಿ ರೂಪಾಯಿ ನಷ್ಟವಾಗಿದೆ ಎಂದರು. ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ 10 ಕಾಮಗಾರಿಗಳಿಗೆ ಹಾನಿಯಾಗಿದ್ದು ಒಟ್ಟು 12.40 ಕೋಟಿಯಷ್ಟು ಹಾನಿಯಾಗಿದೆ ಎಂದರು. ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಕೆರೆಗಳು,ನಾಲೆಗಳು ಸೇರಿದಂತೆ ಒಟ್ಟು3.97 ಕೋಟಿಯಷ್ಟು ನಷ್ಟವಾಗಿದೆ ಎಂದರು.
ಹಾನಿಯ ಬಗ್ಗೆ ಸರ್ಕಾರಕ್ಕೆ ಸದ್ಯದರಲ್ಲೇ ವರದಿ ನೀಡುವುದಾಗಿ ತಿಳಿಸಿದ ಶಾಸಕರು, ಬೆಳೆ,ಆಸ್ತಿ ಕಳೆದುಕೊಂಡ ಎಲ್ಲರಿಗೂ ಸೂಕ್ತ ಪರಿಹಾರ ಕೊಡಿಸುವ ಬರವಸೇ ನೀಡಿದರು.
ಈ ಸಂದರ್ಭ ಉಪವಿಭಾಗಾಧೀಕಾರಿ ತಿಮ್ಮಣ್ಣ ಹುಲುಮನಿ, ಅವಳಿ ತಾಲೂಕಿನ ತಹಶೀಲ್ದಾರರಾದ ರಶ್ಮಿ, ರೇಣುಕಾ, ಇಓ ರಾಮಬೋವಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *