ಜಿಲ್ಲೆಯ ಪಡಿತರ ಚೀಟಿದಾರರು ರಾಜ್ಯದ ಯಾವುದೇ ನ್ಯಾಯಬೆಲೆ
ಅಂಗಡಿಗಳಲ್ಲಿ ಪೋರ್ಟೆಬಿಲಿಟಿ ಮುಖಾಂತರ ಇ-ಕೆವೈಸಿ ಮಾಡಿಸಲು ಈ
ತಿಂಗಳ ಅಂತ್ಯದವರೆಗೆ ಅವಕಾಶ ಕಲ್ಪಿಸಲಾಗಿದ್ದು, ತಪ್ಪದೆ ಇ-
ಕೆವೈಸಿ ಮಾಡಿಸುವಂತೆ ಸಾರ್ವಜನಿಕರಲ್ಲಿ ಕೋರಿದೆ. ಪಡಿತರ ಚೀಟಿದಾರರು
ತಮ್ಮ ಕುಟುಂಬದ ಎಲ್ಲಾ ಸದಸ್ಯರ ವಿವರಗಳೊಂದಿಗೆ ನ್ಯಾಯಬೆಲೆ
ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಬೇಕಿದೆ. ಇದುವರೆಗೆ ಮೂಲ
ನ್ಯಾಯಬೆಲೆ ಅಂಗಡಿಗಳಲ್ಲಿ ಮಾತ್ರ ಇ-ಕೆವೈಸಿ ಮಾಡಲು
ಅವಕಾಶವಿತ್ತು. ಪ್ರಸ್ತುತ ರಾಜ್ಯದ ಯಾವುದೇ ನ್ಯಾಯಬೆಲೆ
ಅಂಗಡಿಗಳಲ್ಲಿ ಪೋರ್ಟೆಬಿಲಿಟಿ ಮುಖಾಂತರ ಇ-ಕೆವೈಸಿ
ಮಾಡಬಹುದಾಗಿರುತ್ತದೆ. ವಲಸೆ ಹೋಗಿ ಅಥವಾ ಬೇರೆ ಜಿಲ್ಲೆಗೆ ಕೆಲಸ
ನಿಮಿತ್ತ ತೆರಳಿರುವ ವ್ಯಕ್ತಿಗಳು ಮೂಲ ನ್ಯಾಯಬೆಲೆ
ಅಂಗಡಿಗಳಿಗೆ ಬಂದು ಇ-ಕೆವೈಸಿ ಮಾಡಿಸಿರುವುದಿಲ್ಲ. ಆದ್ದರಿಂದ ಅಂತವರಿಗೆ
ಅನುಕೂಲವಾಗಲು ಪೋರ್ಟೆಬಿಲಿಟಿಯಲ್ಲಿ ಇ-ಕೆವೈಸಿಯನ್ನು ಮಾಡಲು
ಈಗ ಅವಕಾಶ ಕಲ್ಪಿಸಲಾಗಿದೆ.
ಇದುವರೆಗೆ ಇ-ಕೆವೈಸಿ ಮಾಡಿಸದ ಪಡಿತರ ಚೀಟಿದಾರರು ತಾವು
ವಾಸಿಸುವ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿ ಕೂಡಲೇ ಇ-ಕೆವೈಸಿ
ಮಾಡಿಸಿಕೊಳ್ಳಬೇಕು. ಬೆಳಿಗ್ಗೆ 8.00 ರಿಂದ ರಾತ್ರಿ 8.00 ಗಂಟೆಯವರೆಗೆ
ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶವಿರುತ್ತದೆ. ಪಡಿತರ ಚೀಟಿದಾರರ
ಎಲ್ಲಾ ಸದಸ್ಯರ ಬಯೋ ದೃಢೀಕರಣ ಮಾಡಿಸಬೇಕು. ಆಧಾರ್ ಸಂಖ್ಯೆ,
ಫೋನ್ ನಂಬರ್, ಗ್ಯಾಸ್ ಹೊಂದಿರುವ ಮಾಹಿತಿ ಹಾಗೂ ಕುಟುಂಬದ
ಸದಸ್ಯರ ಸಹ ಸಂಬಂಧವನ್ನು ಇ-ಕೆವೈಸಿಯಲ್ಲಿ ನಮೂದಿಸಬೇಕು.
ಇದು ಪಡಿತರ ಚೀಟಿದಾರರಿಗೆ ಅಂತಿಮ ಅವಕಾಶವಾಗಿದ್ದು, ಇ-ಕೆವೈಸಿ
ಮಾಡಿಸಿಕೊಳ್ಳದ ಪಡಿತರ ಚೀಟಿದಾರರಿಗೆ ಮುಂದಿನ ತಿಂಗಳಿಂದ ಪಡಿತರ
ವಿತರಣೆ ರದ್ದು ಮಾಡಲಾಗುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಹಾಲಿ
4,21,577 ಪಡಿತರ ಚೀಟಿಗಳಿದ್ದು, ಅದರಲ್ಲಿ 14,60,150 ಸದಸ್ಯರು
ಇರುತ್ತಾರೆ. ಇವರಲ್ಲಿ 12,89,863 ಸದಸ್ಯರು ಈಗಾಗಲೇ ಇ-ಕೆವೈಸಿ
ಮಾಡಿಸಿದ್ದು, ಉಳಿದ 1,70,287 ಸದಸ್ಯರು ಇ-ಕೆವೈಸಿ ಮಾಡಿಸಲು ಬಾಕಿ
ಇರುವುದರಿಂದ ಬಾಕಿ ಇರುವ ಎಲ್ಲಾ ಪಡಿತರ ಚೀಟಿದಾರರು ಈ ತಿಂಗಳ
ಒಳಗಾಗಿ ತಪ್ಪದೇ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಇಂದೇ
ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.