ಹೊನ್ನಾಳಿ : ಲಿಂಗೈಕ್ಯ ಜಗದ್ಗುರುಗಳಾದ ರಾಂಪುರ ಮಠದ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಕತೃಗದ್ದಿಗೆ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ರಾಂಪುರದ ಗವಿಮಠದಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಲಿಂಗೈಕ್ಯ ಹಾಲಸ್ವಾಮೀಜಿ ಯವರ ಕತೃಗದ್ದಿಗೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, 50 ಲಕ್ಷ ವೆಚ್ಚದಲ್ಲಿ ಮಠದ ಆವರಣದಲ್ಲಿ ವಿವಿಧ ಅಭಿವೃಧ್ದಿ ಕಾಮಗಾರಿಗಳನ್ನು ಮಾಡಲಾಗುವುದು ಎಂದರು.
ಲಿಂಗೈಕ್ಯ ಶ್ರೀಗಳು ನಮ್ಮ ಧರ್ಮ ಸಂಸ್ಕøತಿ, ಸನಾತನ ಪರಂಪರೆಯನ್ನು ಎತ್ತಿ ಹಿಡಿದವರಾಗಿದ್ದರಲ್ಲದೇ, ಜಗದ್ಗುರುಗಳಾಗಿ ರಾಜ್ಯದ ಮೂಲೆ ಮೂಲೆಯಲ್ಲಿ ಭಕ್ತರನ್ನು ಸಂಪಾದಿಸಿದ್ದರು ಎಂದರು.
ತಮ್ಮಲ್ಲಿಗೆ ಆಗಮಿಸಿದ ಭಕ್ತಿರು ಸದಾ ಮಂಗಳಕರವಾಗಿರಲೆಂದು ಆಶೀರ್ವದಿಸುವುದರ ಜೊತೆಗೆ ತಮ್ಮ ಸನ್ನಿಧಾನಕ್ಕೆ ಆಗಮಿಸಿದ ಭಕ್ತರ ಕುಂದುಕೊರತೆ ವಿಚಾರಿಸಿ ಹಲವಾರು ಕಾಯಿಲೆಗಳಿಗೆ ನಾಟಿ ಔಷಧಿ ಕೂಡ ನೀಡುತ್ತಿದ್ದರು.
ಇಂತಹ ಮಹಾನುಬಾವರ ಸವಿನೆನಪು ಭಕ್ತರ ಮನದಾಳದಲ್ಲಿ ಉಳಿಯಲೆಂದು ಭಕ್ತರು ಶ್ರೀಗಳ ಸುಂದರವಾದ ಕತೃಗದ್ದಿಗೆ ನಿರ್ಮಾಣ ಮಾಡಲು ತೀರ್ಮಾನಿಸಿದ್ದು ಇಂತಹ ಮಹಾನ್ ಕಾರ್ಯಕ್ಕೆ ನಮ್ಮ ಸರ್ಕಾರವೂ ಕೂಡ ಕೈ ಜೋಡಿಸಿದೆ ಎಂದರು.
ಇನ್ನು ಈ ಭಾಗದ ಹಲವಾರು ವರ್ಷಗಳ ಸಾರ್ವಜನಿಕರ ಬೇಡಿಕೆಯಾದ ಗೋವಿನಕೋವಿಯಿಂದ ರಾಂಪುರದ ನಡುವೆ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣಕ್ಕೆ ಸಂಬಂದಿಸಿದಂತೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸಿದ್ದು ನಮ್ಮ ಬೇಡಿಕೆಗೆ ಸಚಿವರ ಪುರಸ್ಕಾರ ದೊರತಿದೇ ಎಂದ ಶಾಸಕರು, ಸೇತುವೆ ನಿರ್ಮಾಣ ಮಾಡಿಯೇ ಮಾಡುತ್ತೇನೆ ಎಂದರು.
ಈ ಸಂದರ್ಭ ರಾಂಪುರ ಮಠದ ಶಿವಕುಮಾರ ಹಾಲಸ್ವಾಮೀಜಿ, ಆರ್.ಎಂ.ಗುರುಗೇಶಯ್ಯ, ತಿಪ್ಪೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಂದ್ರನಾಯ್ಕ, ನಿಗಮದ ನಿರ್ದೇಶಕರಾದ ಶಿವು ಹುಡೇದ್, ಗ್ರಾ.ಪಂ ಉಪಾಧ್ಯಕ್ಷರಾದ ಶ್ರೀನಿವಾಸ್ ಸದಸ್ಯರಾದ ರಮೇಶ್ ಸೇರಿದಂತೆ ಮತ್ತೀತತರಿದ್ದರು.