ದಾವಣಗೆರೆ ಜೂ.11
ಜನಸಾಮಾನ್ಯರು ತಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳ ಬಳಿ
ದೇವಾಲಯ ಹಾಗೂ ಧಾರ್ಮಿಕ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ
ಕೇಳುವ ಬದಲು, ತಮ್ಮ ಗ್ರಾಮಕ್ಕೆ ಅಗತ್ಯವಿರುವ ಶಾಲಾ
ಕೊಠಡಿಗಳ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಬೇಕು ಎಂದು ಕೃಷಿ ಸಚಿವ
ಬಿ.ಸಿ ಪಾಟೀಲ್ ಹೇಳಿದರು.
ದಾವಣಗೆರೆ ತಾಲ್ಲೂಕಿನ ನಲ್ಕುಂದ ಗ್ರಾಮದ ಸರ್ಕಾರಿ ಪ್ರಾಥಮಿಕ
ಶಾಲೆಗೆ ದಯಾನಂದ ಓ.ಎಸ್ ದಂಪತಿಗಳು ಕೊಡುಗೆಯಾಗಿ
ನಿರ್ಮಿಸಲಾದ 4 ಶಾಲಾ ಕೊಠಡಿಗಳನ್ನು ಉದ್ಘಾಟಿಸಿ, ವೇದಿಕೆ
ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಪೀಳಿಗೆಯನ್ನು ಭವಿಷ್ಯದ ನಾಯಕರನ್ನಾಗಿ
ರೂಪಿಸುವ ಕಾರ್ಯ ಶಾಲೆಯಿಂದಲೇ ಶುರುವಾಗುತ್ತದೆ, ಹಾಗಾಗಿ
ದೇವಾಲಯ ನಿರ್ಮಾಣಕ್ಕಿಂತಲೂ ಪುಣ್ಯವಾದ ಕೆಲಸ ಶಾಲೆಗಳನ್ನು
ನಿರ್ಮಾಣ ಮಾಡುವುದಾಗಿದೆ. ಅನೇಕ ಜನರು ತಾವು ಓದಿದ ಊರು
ಮರೆತು ಪಟ್ಟಣ ಸೇರುತ್ತಾರೆ, ಆದರೆ ದಯಾನಂದ ಓ. ಎಸ್
ಮತ್ತು ಕುಟುಂಬದವರು ತಮಗೆ ಬದುಕು ಕಟ್ಟಿಕೊಟ್ಟ
ಊರನ್ನು ಮರೆಯದೆ, ತಾವು ಓದಿದ್ದ ಶಾಲೆಗೆ ಕಟ್ಟಡಗಳನ್ನು
ನಿರ್ಮಾಣ ಮಾಡುವುದರ ಮೂಲಕ ಅನೇಕರಿಗೆ
ಸ್ಪೂರ್ತಿಯಾಗಿದ್ದಾರೆ ಎಂದು ದಯಾನಂದ ಕುಟುಂಬದ
ಕಾರ್ಯವನ್ನು ಶ್ಲಾಘಿಸಿದರು.
ದೇಶದಲ್ಲಿ ಅನ್ನವನ್ನು ಸೃಷ್ಟಿ ಮಾಡುವ ಶಕ್ತಿ ರೈತರಿಗೆ
ಮಾತ್ರ ಇದೆ. ರೈತರ ಜೀವನದಲ್ಲಿ ಬದಲಾವಣೆ ತರಲು ಸರ್ಕಾರ
ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ರೈತರು ಸಾಲಕ್ಕೆ
ಒಳಗಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ
ರಸಗೊಬ್ಬರಗಳಿಗೆ ಸಹಾಯಧನ ಒದಗಿಸುತ್ತಿದೆ. 53 ಲಕ್ಷ
ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಜಾರಿ ಮಾಡಿದೆ
ಎಂದರು.
ಕೃಷಿ ಪದ್ಧತಿಯಲ್ಲಿ ಸಮಗ್ರ ಬದಲಾವಣೆ ತರಬೇಕು ಎನ್ನುವ
ಉದ್ದೇಶ ಹೊಂದಲಾಗಿದೆ. ರೈತರು ಸಮಗ್ರ ಕೃಷಿ ನೀತಿ
ಅಳವಡಿಸಿಕೊಳ್ಳಬೇಕು, ಬಿತ್ತನೆ ಮಾಡುವ ಮುನ್ನ ಮಣ್ಣಿನ
ಪರೀಕ್ಷೆ ಮಾಡಿಸಬೇಕು. ಭೂಮಿಗೆ ಬೇಕಾದ ಅಗತ್ಯ
ಪೆÇೀಷಕಾಂಶ ಮತ್ತು ಲವಣಾಂಶಗಳನ್ನು ಒದಗಿಸುವ ಕೆಲಸ
ಮಾಡಿದಾಗ ಮಾತ್ರ ಹೆಚ್ಚಿನ ಇಳುವರಿ ಪಡೆದು ಆರ್ಥಿಕವಾಗಿ
ಸಬಲರಾಗಲು ಸಾಧ್ಯ ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ರೈತರ
ಮಕ್ಕಳಿಗೆ ಶೇ.50ರಷ್ಟು ಮೀಸಲಾತಿ ಜಾರಿ ಮಾಡಲಾಗಿದೆ. ರೈತ
ವಿದ್ಯಾನಿಧಿ ಯೋಜನೆ ಮೂಲಕ ರೈತರ ಮಕ್ಕಳಿಗೆ ವಿದ್ಯಾರ್ಥಿ
ವೇತನ ಜಾರಿಗೊಳಿಸಲಾಗಿದೆ. ವಿಶೇಷವಾಗಿ ಎಲ್ಲಾ ವರ್ಗದ ರೈತರ
ಹೆಣ್ಣುಮಕ್ಕಳಿಗೆ ರೂ.2000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಬಿತ್ತನೆ ಸಮಯದಲ್ಲಿ ಭೂಮಿಯನ್ನು ಉಳುಮೆ ಮಾಡಲು
ಪ್ರತಿ ಒಂದು ಎಕರೆಗೆ ಲೀಟರ್ ಗೆ 25.ರೂ ನಂತೆ ಗರಿಷ್ಠ 10 ಲೀಟರ್
ವರೆಗೆ 250.ರೂ ಡೀಸೆಲ್ ಸಬ್ಸಿಡಿ ನೀಡಲಾಗುತ್ತಿದೆ, ಹನಿ ನೀರಾವರಿಗೆ
ಶೇ.90 ರಷ್ಟು ಸಹಾಯಧನ ಒದಗಿಸಲಾಗುತ್ತಿದೆ ಒಟ್ಟಾರೆ
ರೈತರನ್ನು ಸಬಲೀಕರಣಗೊಳಿಸಲು ಸರ್ಕಾರ ಅನೇಕ
ಯೋಜನೆಗಳನ್ನು ರೂಪಿಸುತ್ತಿದೆ ಎಂದರು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಎ
ರವೀಂದ್ರನಾಥ್ ಮಾತನಾಡಿ, ಆಧುನಿಕ ದಿನಗಳಲ್ಲಿ ಅನೇಕರು
ಹಳ್ಳಿಗಳಲ್ಲಿ ಓದಿ ದೊಡ್ಡ ದೊಡ್ಡ ಮಹಾನಗರಗಳನ್ನು ಸೇರಿ
ತಾವು ಹುಟ್ಟಿದ ಊರನ್ನು ಮರೆಯುತ್ತಾರೆ. ಇಂತಹ ವರ್ತಮಾನ
ಕಾಲದಲ್ಲಿ ದಯಾನಂದ ಮತ್ತು ಕುಟುಂಬದವರ ಸಾಮಾಜಿಕ ಸೇವೆ
ಅನೇಕರಿಗೆ ಆದರ್ಶವಾಗಲಿ. ರೈತರಿಗೆ ಬೆಂಬಲ ಬೆಲೆ ಹಾಗೂ
ಟ್ರ್ಯಾಕ್ಟರ್ ಖರೀದಿಗೆ ಸಹಾಯಧನ ಒದಗಿಸುವಂತೆ
ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಿ ಎಂದು ಕೃಷಿ
ಸಚಿವರಿಗೆ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ
ಶಾಸಕ ಪೆÇ್ರ.ಲಿಂಗಣ್ಣ, ಕಟ್ಟಡದ ದಾನಿಗಳಾದ ದಯಾನಂದ ಓ. ಎಸ್,
ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನ
ಮೂರ್ತಿ, ಮಾಜಿ ಶಾಸಕ ಬಸವರಾಜ್ ನಾಯಕ್, ಶಿವಮೊಗ್ಗ ಕೃಷಿ ವಿವಿ
ಆಡಳಿತ ಮಂಡಳಿ ಸದಸ್ಯ ಅಜಗಣ್ಣ, ಸುರೇಶ್, ಸಿದ್ದರಾಮ ರೆಡ್ಡಿ,
ಸುನಂದಮ್ಮ ಓ.ಶಿವಲಿಂಗಪ್ಪ, ಗ್ರಾಪಂ ಅಧ್ಯಕ್ಷೆ ಜಮೀಲಾ ಬಾನು
ಸಮೀವುಲ್ಲಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್
ಸೇರಿದಂತೆ ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.