ನ್ಯಾಮತಿ:
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾಒಕ್ಕೂಟದ ನ್ಯಾಮತಿ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಮಾದನಬಾವಿ ಕೆಂಚಪ್ಪಅವರು ಲಾಟರಿ ಎತ್ತುವ ಮೂಲಕ ಶುಕ್ರವಾರ ಆಯ್ಕೆಯಾದರು.
ತಾಲ್ಲೂಕಿ£ ಒಟ್ಟು 17 ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಒಗ್ಗೂಡಿ ತಾಲ್ಲೂಕು ಒಕ್ಕೂಟ ರಚನೆ ಮಾಡಿಕೊಂಡು ಪದಾಧಿಕಾರಿಗಳ ಆಯ್ಕೆ ನಡೆಯಿತು. ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಸಮಿತಿ ಸಹಕಾರ್ಯದರ್ಶಿ ರೇಖಾಆರ್.ಲೋಕೇಶ ಕಿಚಡಿ ಅವರು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿದರು.
ಅಧ್ಯಕ್ಷ ಸ್ಥಾನಕ್ಕೆ ಮೂರುಜನ ಆಕಾಂಕ್ಷೆಗಳು ಇದ್ದಕಾರಣ ಸದಸ್ಯರು ಚೀಟಿಎತ್ತುವ ಮೂಲಕ ಆಯ್ಕೆ ಮಾಡಲು ತೀರ್ಮಾನಿಸಿ ಸ್ಥಳದಲ್ಲಿದ್ದ ಪ್ರಜಾವಾಣಿ ಸ್ಟ್ರೀಂಜರ್ ಡಿ.ಎಂ. ಹಾಲಾರಾಧ್ಯ ಅವರ ಮೂಲಕ ಚೀಟಿಎತ್ತಿದಾಗ ಬಸವನಹಳ್ಳಿ ಗ್ರಾಮ ಪಂಚಾಯಿತಿ ಮಾದನಬಾವಿ ಕ್ಷೇತ್ರದ ಕೆಂಚಪ್ಪ ಅವರು ಅಧ್ಯಕ್ಷರಾಗಿಆಯ್ಕೆಯಾದರು.
ಗೋವಿನಕೋವಿ ಶಿಲ್ಪಾ ಉಪಾಧ್ಯಕ್ಷೆ, ಫಲವನಹಳ್ಳಿ ಪ್ರವೀಣ ಪ್ರಧಾನ ಕಾರ್ಯದರ್ಶಿ, ಸುರಹೊನ್ನೆ ಸವಿತಾಖಜಾಂಚಿ, ಕುಮಾರ ಚಿನ್ನಿಕಟ್ಟೆ ಸಂಘಟನಾ ಕಾರ್ಯದರ್ಶಿ, ಚಿನ್ನಿಕಟ್ಟೆ ಶ್ರುತಿ ಸಹಕಾರ್ಯದರ್ಶಿ ಹಾಗೂ ಜಿಲ್ಲಾ ಒಕ್ಕೂಟ ಸದಸ್ಯರಾ ಗಿಚಿನ್ನಿಕಟ್ಟೆ ಲಕ್ಷ್ಮೀಆಯ್ಕೆಯಾದರು.
ಈ ಸಂದರ್ಭದಲ್ಲಿ ಹೊನ್ನಾಳಿ ತಾಲ್ಲೂಕುಗ್ರಾಮ ಪಂಚಾಯಿತಿ ಸದಸ್ಯರ ಮಹಾಒಕ್ಕೂಟದ ಅಧ್ಯಕ್ಷೆ ಶ್ವೇತಾ, ವಿಕೇಂದ್ರಿಕೃತ ತರಬೇತಿ ಸಂಯೋಜಕಎಂ.ಜೆ.ಯುವರಾಜ, ವಿವಿಧಗ್ರಾಮ ಪಂಚಾಯಿತಿಗಳ ಸದಸ್ಯರುಇದ್ದರು.
ಬಿ. ಪ್ರವೀಣ ಸ್ವಾಗತಿಸಿದರು, ಬಸವನಹಳ್ಳಿ ರಮೇಶ ವಂದಿಸಿದರು.

Leave a Reply

Your email address will not be published. Required fields are marked *