ಹೊನ್ನಾಳಿ: May- 12 ಸಂಘದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ನಾವು ಹೆಚ್ಚು ಪ್ರಗತಿಯನ್ನು ಹೊಂದುತ್ತೇವೆ. ಸಾಮಾಜೀಕರಣಗೊಳ್ಳುತ್ತೇವೆ. ಅದು ವಿದ್ಯಾರ್ಥಿ ಜೀವನದಲ್ಲಿಯೆ ತೊಡಗಿಕೊಳ್ಳುವುದು ಉತ್ತಮ ಎಂದು ಭಾರತೀಯ ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್. ಲಿಂಗಯ್ಯ ಹೇಳಿದರು.
ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ ಸಮಾರಂಭದಲ್ಲಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದ ಸಂಸ್ಥೇಯ ಸಹಕಾರ್ಯದರ್ಶಿ ಕೆ.ಗಣೇಶ್ ಮಾತನಾಡಿ, ಪಠ್ಯ ಚಟುವಟಿಕೆಗಳಿಂದ ಮಾತ್ರ ಅಭಿವೃದ್ಧಿ ಸಾಧಿಸುವುದಿಲ್ಲ. ಸಹಪಠ್ಯ ಚಟುವಟಿಕೆಗಳು ಹೆಚ್ಚು ಅವಶ್ಯಕ. ಸಹಪಠ್ಯ ಚಟುವಟಿಕೆಗಳು ನಮ್ಮನ್ನು ಸದಾ ಚಟುವಟಿಕೆಯಿಂದ ಇಡುತ್ತದೆ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಶಿಕ್ಷಕ ಅಶೋಕ್ ಎಚ್ ಮಾತನಾಡಿ, ಬಾಲ್ಯದಲ್ಲಿಯೇ ಪಕ್ಷಿ ವೀಕ್ಷಿಸಿದ ಸಲೀಂ ಅಲಿ ಪ್ರಸಿದ್ಧ ಪಕ್ಷಿ ತಜ್ಞರಾದರು, ಪಕ್ಷಿ ಹಾರುತ್ತಿರುವುದನ್ನು ಗಮನಿಸಿದ ಎಪಿಜೆ ಅಬ್ದುಲ್ ಕಲಾಂ ಕ್ಷಿಪಣಿ ತಜ್ಞರಾದರು. ಇಂತಹ ಮಹಾನ್ ಸಾಧಕರಾಗಲು ಸಂಘದ ಚಟುವಟಿಕೆಗಳು ಹೆಚ್ಚು ಅವಶ್ಯಕ ಎಂದರು.
ಸಭೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಸುರೇಶ್ ಶೇಟ್, ಜಯಪ್ಪ ಎಚ್.ಟಿ, ಮುಖ್ಯೋಪಾಧ್ಯಾಯ ತಿಮ್ಮೇಶ್ ಆರ್, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಗಿರೀಶ್ ಎನ್.ಎಂ, ಜ್ಯೋತಿ ಬಾಪುಲೆ ಸಂಘದ ನಿರ್ದೇಶಕಿ ನಾಗಮ್ಮ ಎಸ್, ಶಿಕ್ಷಕರಾದ ಮಂಜಪ್ಪ ಎಲ್, ಸತೀಶ್, ಶಿವಲಿಂಗಪ್ಪ, ಶೋಭ, ರುಕ್ಮಿಣಿ, ಶಾಹಿಸ್ತ ಬಾನು ಇದ್ದರು.