ರಾಜ್ಯದಲ್ಲಿ ಕಳೆದ 10 ದಿನಗಳಿಂದ ದೈನಂದಿನ ಕೋವಿಡ್-19
ಪ್ರಕರಣಗಳ ಸಂಖ್ಯೆಯಲ್ಲಿ ನಿಧಾನಗತಿಯ ಏರಿಕೆಯನ್ನು
ಗಮನಿಸಲಾಗಿದ್ದು, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ
ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುμÁ್ಠನಗೊಳಿಸಿ
ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು
ಕಡ್ಡಾಯಗೊಳಿಸಿದೆ. ಮುಚ್ಚಿದ ಸಂರಚನೆಯನ್ನು (ಅಟoseಜ ಚಿಡಿeಚಿs)
ಹೊಂದಿದ ಸ್ಥಳಗಳಾದ ಶಾಪಿಂಗ್ ಮಾಲ್‍ಗಳು,
ರೆಸ್ಟೋರೆಂಟ್‍ಗಳು, ಪಬ್‍ಗಳು, ಕೆಫೆಟೀರಿಯಾ ಅಥವಾ
ಹೋಟೆಲ್‍ಗಳು, ಶೈಕ್ಷಣಿಕ ಸಂಸ್ಥೆಗಳು, ಹಾಸ್ಟೆಲ್‍ಗಳು,
ಕಚೇರಿಗಳು, ಕಾರ್ಖಾನೆ ಇತ್ಯಾದಿ ಪ್ರದೇಶಗಳಲ್ಲಿ ಸಿಬ್ಬಂದಿಗಳು

ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವುದು ಹಾಗೂ ಮಾಸ್ಕ್
ಧರಿಸಿ ಬರುವವರಿಗೆ ಮಾತ್ರವೇ ಪ್ರವೇಶ ನೀಡುವುದನ್ನು
ಖಚಿತಪಡಿಸಿಕೊಳ್ಳುವುದು ಆಯಾ ಸಂಸ್ಥೆಯ ಮಾಲೀಕರ
ಆಡಳಿತಗಳ ಜವಾಬ್ದಾರಿಯಾಗಿರುತ್ತದೆ. ಸ್ವಂತ ವಾಹನಗಳು ಹಾಗೂ
ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ (ಬಸ್ ಹಾಗೂ ರೈಲು) ಪ್ರಯಾಣಿಸುವ
ಸಂದರ್ಭದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು
ಕಡ್ಡಾಯವಾಗಿರುತ್ತದೆ.  IಐI &ಚಿmಠಿ; SಂಖI ಲಕ್ಷಣಗಳನ್ನು ಹೊಂದಿದವರು,
ಅಂದರೆ ಶೀತ, ಕೆಮ್ಮು, ಜ್ವರ, ಇಂತಹ ಲಕ್ಷಣಗಳು ಇರುವ ಹೈರಿಸ್ಕ್
ಗುಂಪಿನವರು ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ
ಒಳಪಡುವುದು ಹಾಗೂ ಫಲಿತಾಂಶ ಲಭ್ಯವಾಗುವವರೆಗೂ
ಮನೆಯಲ್ಲಿಯೇ ಪತ್ಯೇಕವಾಗಿರುವುದು. ಅರ್ಹ ಜನರೆಲ್ಲರೂ
ಮುನ್ನೆಚ್ಚರಿಕಾ ಡೋಸ್ (Pಡಿeಛಿಚಿuಣioಟಿಚಿಡಿಥಿ ಜose) ಸೇರಿದಂತೆ, ಕೋವಿಡ್ 19
ಲಸಿಕೆಯನ್ನು ಪಡೆಯಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *