ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 2022-23ನೇ
ಸಾಲಿನಲ್ಲಿ “ಧನಶ್ರೀ” ಯೋಜನೆಯಡಿ ಹೆಚ್.ಐ.ವಿ. ಸೋಂಕಿತ
ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ
ಅಭಿವೃದ್ಧಿ ಹೊಂದಲು ನಿಗಮದಿಂದ ರೂ.30,000
ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ದಾವಣಗೆರೆ ಜಿಲ್ಲೆಗೆ
ಭೌತಿಕ 21 ಗುರಿ ನಿಗದಿಪಡಿಸಿದ್ದು, ಯೋಜನೆಯಡಿ ಸೌಲಭ್ಯ ಪಡೆಯಲು
ಆಸಕ್ತಿವುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವವರ ವಯೋಮಿತಿ 18 ರಿಂದ 60
ವರ್ಷದೊಳಗಿರಬೇಕು. ಅರ್ಜಿದಾರಳು ಹೆಚ್.ಐ.ವಿ. ಸೋಂಕು ಇರುವ
ಸಂಬಂಧ ಐ.ಸಿ.ಟಿ.ಸಿ/ಪಿ.ಪಿ.ಟಿ.ಸಿ.ಟಿ. ಕೇಂದ್ರಗಳಿಂದ ಪಡೆದ ವೈದ್ಯಕೀಯ
ದೃಢೀಕರಣ ಪತ್ರ ಸಲ್ಲಿಸುವುದು. ಪ್ರೋತ್ಸಾಹಧನ ಪಡೆಯಲು
ಉದ್ದೇಶಿತ ಆದಾಯೋತ್ಪನ್ನ ಚಟುವಟಿಕೆಯ ಯೋಜನಾ ವರದಿ
ಸಲ್ಲಿಸುವುದು. ಕುಟುಂಬದಲ್ಲಿ ಹೆಚ್.ಐ.ವಿ. ಸೋಂಕಿತ ಒಬ್ಬ ಮಹಿಳೆಗೆ
ಮಾತ್ರ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
ಅರ್ಜಿಗಳನ್ನು ಸಂಜೀವಿನಿ ನೆಟ್‍ವರ್ಕ್ ದಾವಣಗೆರೆ, 3ನೇ ಮುಖ್ಯ
ರಸ್ತೆ, 2ನೇ ಕ್ರಾಸ್, ಎಂ.ಸಿ.ಸಿ. ‘ಬಿ’ ಬ್ಲಾಕ್ ದಾವಣಗೆರೆ ಇವರಿಂದ ಪಡೆದು
ಸೂಕ್ತ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಜೂ.30 ರ
ಸಂಜೆ 5.30 ರೊಳಗಾಗಿ ಸಂಸ್ಥೆಯ ಕಚೇರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ 9738688610
ಕ್ಕೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.