ಹೊನ್ನಾಳಿ ಜೂನ್ 13 ತಾಲೂಕಿನ
ಮಾಶಾಸನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಿವಮೊಗ್ಗ, ಹಾವೇರಿ, ಚನ್ನಗಿರಿ ಮತ್ತು ಹೊನ್ನಾಳಿ-ನ್ಯಾಮತಿ ತಾಲೂಕಿನ ಬೆನ್ನುಹುರಿ ಅಪಘಾತಕ್ಕೆ ಒಳಗಾದ ವಿಕಲಚೇತನರು ಶಾಸಕರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರಿಗೆ ಭಾನುವಾರ ಮನವಿ ಪತ್ರವನ್ನು ನೀಡಿದರು.
ಮನವಿ ಪತ್ರ ನೀಡಿ ಮಾತನಾಡಿದ ನ್ಯಾಮತಿ ಷಣ್ಮುಖ.ಬಿ.ಈ ಪ್ರಸ್ತುತ ದಿನಮಾನಗಳಲ್ಲಿ ಪ್ರತಿ ವಸ್ತುವಿನ ಬೆಲೆಯು ಹೆಚ್ಚಾಗಿದ್ದು ವಿಕಲಚೇತನದ ಬದುಕುವುದು ಕಷ್ಟಕರವಿದ್ದು ವಿಕಲಚೇತನರಿಗೆ ನೀಡುತ್ತಿರುವ ಮಾಶಾಸನವನ್ನು ಕನಿಷ್ಟ ೫ಸಾವಿರ ನೀಡುವಂತೆ ಒತ್ತಾಯಿಸಿದರು.
ಅಲ್ಲದೆ ಗ್ರಾಮ ಪಂಚಾಯಿತಿಗಳಲ್ಲಿ ಸಿಗುವ ಸೌಲಭ್ಯ ಸುಲಭವಾಗಿ ಸಿಗುತ್ತಿಲ್ಲ ಅಲ್ಲದೆ ಈ ಸಂಬAಧ ಸರಿಯಾದ ಮಾಹಿತಿಗಳನ್ನು ಸಂಬಧಪಟ್ಟ ಇಲಾಖೆವತಿಯಿಂದ ಎಲ್ಲಾ ವಿಕಲಚೇತನರಿಗೆ ನೀಡುವಂತೆ ಹೇಳಿದರು. ಗ್ರಾಮಪಂಚಾಯಿತಿಗಳಲ್ಲಿ ೫% ಅನುದಾನದಲ್ಲಿ ನೀಡುವ ಸೌಲಭ್ಯಗಳು ವಿಕಲಚೇತನರಿಗೆ ಸುಲಭವಾಗಿ ಸಿಗುವಂತೆ ಅಧಿಕಾರಿಗಳು ಮಾಹಿತಿ ನೀಡಬೇಕೆಂದು ಹೇಳಿದರು.
ಮನವಿ ಪತ್ರ ಪಡೆದ ಸಿ.ಎಂ.ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು ಈ ಬಗ್ಗೆ ಮುಖ್ಯಮಂತ್ರಿಗಳಲ್ಲಿ ನೀವು ಬೇಡಿಕೊಂಡಿರುವ ವಿಷಯದ ಬಗ್ಗೆ ಚರ್ಚಿಸಿ ಆದಷ್ಟು ಬೇಗ ಬೇಡಿಕೆಗಳನ್ನು ಈಡೇರಿಸುವಂತೆ ನಿಮ್ಮ ಪರವಾಗಿ ಮಾತನಾಡುವುದಾಗಿ ಹೇಳಿದರು.
ಬೇಡಿಕೆಗಳು;
ಕನಿಷ್ಟ ೫ಸಾವಿರ ಮಾಶಾಸನ ಹೆಚ್ಚಳ
ವಿಕಲ ಚೇತನ ಅವಲಂಬಿತರಿಗೆ ಸರ್ಕಾರಿ ಉದ್ಯೋಗದಲ್ಲಿ ಮೊದಲ ಪ್ರಾಶಸ್ತö್ಯ.
ಪುನಶ್ಚೇತನ ತರಬೇತಿ ಕೇಂದ್ರಗಳನ್ನು ಪ್ರತಿ ೩ಜಿಲ್ಲೆಗಳಲ್ಲಿ ತೆರೆಯುವುದು.
ಸೂಕ್ತ ಸಾಧನಾಸಲಕರಣೆಗಳನ್ನು ವಿತರಣೆ.
ಅಗತ್ಯ ವೈದ್ಯಕೀಯ ಸೌಲಭ್ಯ ಕೀಟ್ ವಿತರಣೆ.
ಬೆನ್ನು ಹುರಿ ಅಪಘಾತ ವಿಕಲಚೇತನರಿಗೆ ವಿಶೇಷ ಶೌಚಾಲಯ ನಿರ್ಮಾಣ.
೫% ಅನುದಾನವನ್ನು ಅಗತ್ಯ ಮತ್ತು ಕಡ್ಡಾಯ ಬಳಕೆ.
ವಿಕಲಚೇತನರಿಗೆ ಮೀಸಲಿಟ್ಟ ಅನುದಾನದಲ್ಲಿ ಸ್ವಯಂ ಉದ್ಯೋಗಕ್ಕೆ ಆರ್ಥಿಕ ಸಹಾಯ ವಿಕಲಚೇತನರಿಗೆ ನೀಡುವ
ಈ ಸಂದರ್ಭದಲ್ಲಿ ಆಯನೂರು ವಿನಾಯಕ, ಚನ್ನಗಿರಿ ಅಜಯ್, ಹಿರೇಕೆರೂರು ಮಹೇಶಪ್ಪ ಬಿ. ಗಿಡ್ಡಣನವರು, ರವಿಶಂಕರಪ್ಪ ಲಮಾಣಿ ಬ್ಯಾಡ್ಗಿ, ಗಂಗಾಧರ್, ಮಹೇಶಯ್ಯ ಶಂಕ್ರಯ್ಯ ಹಿರೇಮಠ, ತಿಪ್ಪೇಶ್ ಇತರರು ಇದ್ದರು.
ಮಾಶಾಸನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಹೆಚ್ಚಳ ಮಾಡುವಂತೆ ವಿವಿಧ ಜಿಲ್ಲೆಗಳ ವಿಕಲಚೇತನರು ಸಿ.ಎಂ.ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರಿಗೆ ಭಾನುವಾರ ತಮ್ಮ ನಿವಾಸದಲ್ಲಿ ಮನವಿ ನೀಡಿದರು. ಆಯನೂರು ವಿನಾಯಕ, ಚನ್ನಗಿರಿ ಅಜಯ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *