ಹೊನ್ನಾಳಿ ಜೂನ್ 14 ತಾಲೂಕ್ ಹಿರೇಗೋಣಿಗೇರಿ ಗ್ರಾಮ ಪಂಚಾಯಿತಿಗೆ ಈ ಹಿಂದೆ ಅಧ್ಯಕ್ಷರಾಗಿದ್ದ ಶ್ರೀಮತಿ ಅನಿತಾ ಕೊಂ ಚಂದ್ರಪ್ಪ ಟಿಆರ್ ಇವರ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.
ಈ ಅಧ್ಯಕ್ಷರ ಗಾದೆಗೆ ಶಮೀನಾ ಭಾನು ಕೋಂ ಅಮಾನುಲ್ಲಾ ಸಾಬ್ ರವರು ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಅರ್ಜಿಯನ್ನು ಸಲ್ಲಿಸಿದ್ದರು. ಬೇರೆ ಯಾವ ಗ್ರಾಮ ಪಂಚಾಯಿತಿ ಸದಸ್ಯರು ಸಹ ಅಧ್ಯಕ್ಷರ ಗಾದೆಗೆ ನಾಮಪತ್ರ ಅರ್ಜಿ ಸಲ್ಲಿಸಿದೇ ಇರುವ ಕಾರಣ ಚುನಾವಣಾ ಅಧಿಕಾರಿಗಳಾದ ರಾಜೇಂದ್ರ ಪ್ರಸಾದ್ ರವರು ಶ್ರೀಮತಿ ಶಮೀನಾ ಬಾನು ಕೊಂ ಅಮನುಲ್ಲಾ ಸಾಬ್ ರವರನ್ನು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು ಎಂದು ಘೋಷಣೆ ಮಾಡಿದರು.
ಉಪಸ್ಥಿತಿಯಲ್ಲಿ;- ಚುನಾವಣಾ ಅಧಿಕಾರಿಗಳಾದ ಶ್ರೀ ರಾಜೇಂದ್ರ ಪ್ರಸಾದ್ ,ಎಫ್ ಡಿಸಿ ಕರಿಬಸಪ್ಪ, ಪಿಡಿಒ ಅರುಣ್ ಕೆ, ನೂತನ ಅಧ್ಯಕ್ಷರಾದ ಶ್ರೀಮತಿ ಶಮೀನಾ ಬಾನು, ಉಪಾಧ್ಯಕ್ಷರಾದ ಮಂಜಪ್ಪ ಎಂ ಟಿ, ಮಾಜಿ ಅಧ್ಯಕ್ಷರಾದ ಅನಿತಾ ಟಿ, ಸದಸ್ಯರುಗಳಾದ ನಾಗಪ್ಪ ಎಚ್ ವಿ ,ಮಧು ಡಿಎಂ, ಗಿರಿಜಮ್ಮ, ಜ್ಯೋತಿ ಎಂ ಎನ್, ನಶ್ರೀನ ಭಾನು, ಸೋಮಣ್ಣ, ಲಲಿತಾಬಾಯಿ ,ರವಿಕುಮಾರ್ ಎಸ್ ,ಗೀತಮ್ಮ, ಕೆ ಬಸವಣ್ಣಪ್ಪ ,ಹನುಮಂತಪ್ಪ ಎ ಕೆ, ಮಂಜಪ್ಪ ,ನಾಗರಾಜ್ ,ಎಚ್ಎಸ್ ನಾಗರತ್ನ ಹಾಗೂ ಗ್ರಾಮ ಪಂಚಾಯಿತಿಯ ಆಡಳಿತ ಸಿಬ್ಬಂದಿ ವರ್ಗದವರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸಹ ಭಾಗಿಯಾಗಿದ್ದರು .