ಹೊನ್ನಾಳಿ ಜೂನ್ 15 ತಾಲೂಕು ಬೇಲೆ ಮೇಲೂರು ಗ್ರಾಮ ಪಂಚಾಯಿತಿಗೆ ಈ ಹಿಂದೆ ಶ್ರೀಮತಿ ಸವಿತಾ ಎಂ ಡಿ ಕೋಂ ಹಾಲಪ್ಪ ಅಧ್ಯಕ್ಷರ ಅವಧಿ ತೆರವಾದ ಹಿನ್ನೆಲೆಯಲ್ಲಿ ಇಂದು ಚುನಾವಣೆ ನಡೆಯಿತು . ಈ ಚುನಾವಣೆಯಲ್ಲಿ ಶ್ರೀಮತಿ ಮಂಜಮ್ಮ ಸಿದ್ದಪ್ಪ ಎನ್ ರವರು ಚುನಾವಣಾ ಅಧಿಕಾರಿಗಳಿಗೆ ಇಂದು ನಾಮಪತ್ರ ಅರ್ಜಿಯನ್ನು ಸಲ್ಲಿಸಿದ್ದರು. ಬೇರೆ ಯಾವ ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಅರ್ಜಿ ಸಲ್ಲಿಸಿದೇ ಇರುವ ಕಾರಣ ಚುನಾವಣಾ ಅಧಿಕಾರಿಗಳು ನೀರಾವರಿ ಇಲಾಖೆ ಇಂಜಿನಿಯರ್ ರಾಜೇಂದ್ರಪ್ರಸಾದ್ ಎಸ್ ರವರು ಶ್ರೀಮತಿ ಮಂಜಮ್ಮ ಕೋಂ ಸಿದ್ದಪ್ಪ ಎನ್ ರವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು.
ನೂತನ ಅಧ್ಯಕ್ಷರಾದ ಶ್ರೀಮತಿ ಮಂಜಮ್ಮ ಸಿದ್ದಪ್ಪ ಎನ ನಂತರ ಮಾತನಾಡಿ, ನನಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಿಕ್ಕೆ ಸಹಕರಿಸಿದ ಸರ್ವ ಸದಸ್ಯರುಗಳಿಗೆ ಶುಭಾಶಯಗಳೊಂದಿಗೆ ಧನ್ಯವಾದಗಳನ್ನು ತಿಳಿಸಿದರು. ನಮ್ಮ ಪಂಚಾಯಿತಿಯ ಸರ್ವ ಸದಸ್ಯರ ಸಹಕಾರದೊಂದಿಗೆ ಬೇಲೆ ಮಲ್ಲೂರು ಗ್ರಾಮ ಪಂಚಾಯಿತಿ ಶ್ರೇಯೋಭಿವೃದ್ಧಿಗೆ ನಾನು ಶ್ರಮ ಪಡುತ್ತೇನೆ ಎಂದು ತಿಳಿಸಿದರು.
ಉಪಸ್ಥಿತಿಯಲ್ಲಿ;- ಚುನಾವಣಾ ಅಧಿಕಾರಿಯಾದ ರಾಜೇಂದ್ರ ಪ್ರಸಾದ್ ನೂತನ ಅಧ್ಯಕ್ಷರಾದ ಶ್ರೀಮತಿ ಮಂಜಮ್ಮ ಸಿದ್ದಪ್ಪ ಎನ್ ಉಪಾಧ್ಯಕ್ಷರಾದ ಶ್ರೀಮತಿ ನೀಲಮ್ಮ ಸದಸ್ಯರುಗಳಾದ ಸವಿತಾ ಎಂ ಡಿ ,ಎಚ್ ನಾಗರಾಜ್, ಚಂದ್ರಪ್ಪ ,ಜಯಪ್ಪ , ಜಿ ಎಸ್ ಲಕ್ಷ್ಮಿ, ರತ್ನಮ್ಮ ,ಹನುಮಂತಪ್ಪ ಪಿಬಿ ,ಕಮಲಮ್ಮ ಅಣ್ಣಪ್ಪ ಎಕೆ, ಹನುಮಂತಪ್ಪ ಕೆಎನ್ ,ಗೀತಮ್ಮ, ಶಾಂತಾಬಾಯಿ, ಹಾಗೂ ಪಿಡಿಓ ಅರುಣ್ ಕೆ ,ಕಾರ್ಯದರ್ಶಿ ಎಚ್ಕೆ ವೀರಣ್ಣ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಮತ್ತು ಊರಿನ ಗ್ರಾಮಸ್ಥರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *