ದಾವಣಗೆರೆ ಜೂ.16
ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ತಪ್ಪುಗಳಾಗಿದ್ದರೆ
ಸರಿಪಡಿಸಲು ಸಲಹೆಗಳಿಗೆ ಸರ್ಕಾರ ಮುಕ್ತವಾಗಿದೆ ಎಂದು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದಾವಣಗೆರೆ ನಗರÀದಲ್ಲಿ ಗುರುವಾರ ವಿವಿಧ
ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಜಿ.ಎಂ.ಐ.ಟಿ ಹೆಲಿಪ್ಯಾಡ್‍ಗೆ ಆಗಮಿಸಿದ
ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಈಗಾಗಲೇ
ಸಲಹೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಇಲಾಖೆಯ
ವೆಬ್‍ಸೈಟ್‍ನಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತಂತೆ ಪ್ರಸ್ತುತ
ಹಾಗೂ ಹಿಂದಿನ ವಿವರವನ್ನು ಮುಕ್ತವಾಗಿ ಪ್ರಕಟಿಸಲಾಗಿದೆ.
ಪರಿಷ್ಕರಣೆ ಸಂದರ್ಭದಲ್ಲಿ ತಪ್ಪುಗಳಾಗಿದ್ದರೆ
ಸರಿಪಡಿಸಲಾಗುವುದು. ಈ ಹಿಂದಿನ ಪಠ್ಯ ಪರಿಷ್ಕರಣೆ
ಸಂದರ್ಭದಲ್ಲಿಯೂ ಹಲವಾರು ತಪ್ಪುಗಳಾಗಿವೆ, ಅವುಗಳನ್ನೂ
ಸೇರಿ ಸÀರಿಪಡಿಸಬೇಕಾಗಿರುವ ಎಲ್ಲಾ ಅಂಶಗಳನ್ನೂ
ಸÀರಿಪಡಿಸಲಾಗುವುದೆಂದರು. ಹಾಗೂ ವಿದ್ಯಾರ್ಥಿಗಳ ಪ್ರವಾಸಕ್ಕೆ ಹಿಂದಿ
ಭಾಷೆ ಕಡ್ಡಾಯ ಎಂಬ ಯಾವುದೇ ಸುತ್ತೋಲೆ ಕೇಂದ್ರ ಅಥವಾ
ರಾಜ್ಯ ಸರ್ಕಾರಗಳಿಂದ ಬಂದಿರುವುದಿಲ್ಲ. ಈ ರೀತಿ ಸುತ್ತೋಲೆ ಹೊರಡಿಸಿದ
ಅಧಿಕಾರಿ ವಿರುದ್ದ ಕ್ರÀಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ತಾ.ಪಂ. ಹಾಗೂ ಜಿ.ಪಂ. ಚುನಾವಣೆಗಳಿಗೆ ಸಂಬಂಧಿಸಿದಂತೆ
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಹಿಂದುಳಿದ ವರ್ಗಗಳ
ಆಯೋಗದೊಂದಿಗೆ ಮೀಸಲಾತಿ ಸಂಬಂಧ ಚರ್ಚೆ ನಡೆದಿದೆ, ಮೊದಲ
ಹಂತದಲ್ಲಿ ಬಿಬಿಎಂಪಿ ಚುನಾವಣೆಗಳನ್ನ ನಡೆಸಲಾಗುವುದು,
ನಂತರ ಹಿಂದುಳಿದ ವರ್ಗಗಳ ಆಯೋಗದ ವರದಿಯಂತೆ
ತಾಲ್ಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳ
ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಮೇಕೆದಾಟು ಯೋಜನೆ ಕುರಿತು ಸುಪ್ರೀಂಕೋರ್ಟ್ ನಲ್ಲಿ
ಯಾವುದೇ ತಡೆಯಾಜ್ಞೆ ಇಲ್ಲ, ಸಿಡ್ಲೂಎಮ್‍ಎ ಸಮಿತಿಗೆ ಸಂಪೂರ್ಣ
ಪರಮಾಧಿಕಾರ ಇದೆ. ಮುಂದಿನ ವಾರ ಸಿಡ್ಲೂಎಮ್‍ಎ ಸಮಿತಿ ಸಭೆ
ನಡೆಯುವ ಸಾಧ್ಯತೆ ಇದ್ದು ಈಗಾಗಲೇ ನಮ್ಮ ವಾದವನ್ನು
ಮಂಡಿಸಿದ್ದೇವೆ. ತಮಿಳುನಾಡು ಏನೇ ಆಕ್ಷೇಪಣೆ ಎತ್ತಿದರೂ ಡಿ.ಪಿ.ಆರ್
ಅನುಮೋದನೆಯಾಗುವ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ನಗರಾಭಿವದ್ಧಿ ಮತ್ತು ದಾವಣಗೆರೆ ಜಿಲ್ಲಾ
ಉಸ್ತುವಾರಿ ಸಚಿವರಾದ ಬೈರತಿ ಬಸವರಾಜ್, ಸಂಸದರಾದ ಡಾ.ಜಿ.ಎಂ.
ಸಿದ್ದೇಶ್ವರ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ
ಎಸ್.ಎ. ರವೀಂದ್ರನಾಥ್, ಮಾಯಕೊಂಡ ಕ್ಷೇತ್ರದ ಶಾಸಕರಾದ
ಪ್ರೊ.ಲಿಂಗಣ್ಣ, ಮಹಾನಗರಪಾಲಿಕೆಯ ಮೇಯರ್ ಜಯಮ್ಮ
ಗೋಪಿನಾಥ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಸಿಇಓ ಡಾ.ಚನ್ನಪ್ಪ
ಉಪಸ್ಥಿತರಿದ್ದರು.