ನ್ಯಾಮತಿ ಜೂನ 16 ತಾಲೂಕು ಬೆಳಗುತ್ತಿ ಮಲಿಗೆನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 20 22-23 ನೇ ಸಾಲಿಗೆ ಶಾಲಾ ಸಂಸತ್ ಜ್ಞಾನಜ್ಯೋತಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಯಿತು. ಈ ಚುನಾವಣೆಗೆ 12 ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸಿದ್ದರು ನಾಮಪತ್ರಗಳನ್ನು ಸಹಶಿಕ್ಷಕರು ಪರಿಶೀಲಿಸಿದರು ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕರು ಸಹಶಿಕ್ಷಕರು ಗಳು ಮುಂಬರುವ ಚುನಾವಣೆಯಲ್ಲಿ ಹೇಗೆ ಮತದಾನ ಮಾಡಬೇಕೆಂಬ ಪ್ರಾಯೋಗಿಕವಾಗಿ ಮತದಾನದ ಮುನ್ನ ವಿದ್ಯಾರ್ಥಿಗಳ ಬೆರಳುಗಳಿಗೆ ಕಪ್ಪು ಶಾಹಿ ಹಾಕಿ ಮತ್ತು ವೋಟು ಮಾಡುವ ಯಂತ್ರಗಳ ಮೂಲಕ.8.9.10. ನೇ ತರಗತಿಯ ವಿದ್ಯಾರ್ಥಿಗಳು ಮತ ಹಾಕುವುದರ ಮುಖಾಂತರ ವಿದ್ಯಾರ್ಥಿಗಳಾದ:(-1.)ಮುಖ್ಯಮಂತ್ರಿಯಾಗಿ ಪ್ರಭು ಎಂಬ.(2.) ಉಪಮುಖ್ಯಮಂತ್ರಿಯಾಗಿ ಯಶೋದಾ HJ(.3. )ಶಿಕ್ಷಣ ಮಂತ್ರಿಯಾಗಿ ಪ್ರಜ್ವಲ್ (4.) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಯಾಗಿ ಭೂಮಿಕಾ.(5. )ಆರೋಗ್ಯ ಮತ್ತು ಸ್ವಚ್ಛತೆ ಮಂತ್ರಿಯಾಗಿ ಸುಮಂತ (6. )ಕ್ರೀಡಾ ಮಂತ್ರಿಯಾಗಿ ದರ್ಶನ್. (7.)ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿಯಾಗಿ ಕವನ.M. (8) ಶಾಲಾ ಪ್ರವಾಸ ಮಂತ್ರಿಯಾಗಿ ದೀಪಿಕಾ(9) ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮಂತ್ರಿಯಾಗಿ ನಂದೀಶ (10) ಶಾಲಾ ಸಾಂಸ್ಕೃತಿಕ ಚಟುವಟಿಕೆಗಳ ಮಂತ್ರಿಯಾಗಿ ಚಂದನ್ ಇವರುಗಳನ್ನು . ಆಯ್ಕೆ ಮಾಡಿದರು.
ಈ ಸಂದರ್ಭದಲ್ಲಿ ಶಾಲಾ SDMC ಅಧ್ಯಕ್ಷರಾದ ಜಿ ಕುಬೇರಪ್ಪ ನವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಈ ಪ್ರಕ್ರಿಯೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ತೀರ್ಥ ಲಿಂಗಪ್ಪ ಸಹಶಿಕ್ಷಕರು ಗಳಾದ ಶಿವಲಿಂಗಪ್ಪ ಬೀ ಜಾಡರ್ ,ಸೋಮಶೇಖರ್, ಚೆನ್ನಮಲ್ಲಿಕಾರ್ಜುನ, ಬಸವರಾಜಪ್ಪ, ವಿಶ್ವನಾಥ್ ,ಶಿವಕುಮಾರ್, ಯೋಗೇಶ್ವರ್, ಭರತ್ ಕುಮಾರ್ ,ಸುಮಲತಾ, ಕೋಮಲ ,ಸುನೀತಾ, ನೀಲಮ್ಮ ಹಾಗೂ ಸಿಬ್ಬಂದಿ ವರ್ಗದವರು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಗಳು ಭಾಗವಹಿಸಿದ್ದರು.