ಹೊನ್ನಾಳಿ ಜೂನ್ 16 ತಾಲೂಕ ಆಫೀಸಿನಲ್ಲಿ ತಾಲೂಕು ದಂಡಾಧಿಕಾರಿಗಳಾದ ಶ್ರೀಮತಿ ಹೆಚ್ ಜೆ ರಶ್ಮಿ ಇವರ ನೇತೃತ್ವದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ತಾಲೂಕು ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ತಾಲೂಕು ದಂಡಾಧಿಕಾರಿಗಳಾದ ಶ್ರೀಮತಿ ಎಚ್ ಜೆ ರಶ್ಮಿ ಅವರು ಮಾತನಾಡಿ ಕೇಂದ್ರ ಸರ್ಕಾರ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾ ಆಯುಷ್ ಇಲಾಖೆ ತಾಲೂಕು ಆಡಳಿತ ಹೊನ್ನಾಳಿ ಪತಂಜಲಿ ಯೋಗ ಸಮಿತಿ ಅವಳಿ ತಾಲೂಕು ಘಟಕ, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾನಿಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 21 /6 /20 22 ಮಂಗಳವಾರದಂದು ಬೆಳಗಿನ ಜಾವ 5:30 ಸರಿಯಾಗಿ ಚನ್ನಪ್ಪ ಸ್ವಾಮಿ ಮಠ ಹೊನ್ನಾಳಿ ಯಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಾಲೂಕ್ ತಹಶೀಲ್ದಾರರಾದ ಶ್ರೀಮತಿ ಹೆಚ್ ಜೆ ರಶ್ಮಿ ಯವರು ತಿಳಿಸಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಶ್ರೀಮತಿ ಹೆಚ್ ಜೆ ರಶ್ಮಿ, ಈ ಈ ಓ ರಾಮ ಭೂಮಿ, ಪುರಸಭೆಯ ಮುಖ್ಯ ಅಧಿಕಾರಿ ವೀರಭದ್ರಯ್ಯ, ಪಿಎಸ್ಐ ಬಸವರಾಜ್ ಬೀರದಾರ್, ಇನ್ನು ಮುಂತಾದ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಆಯುಷ್ಯ ಇಲಾಖೆಯ ಡಾಕ್ಟರ್ ಲಿಂಗರಾಜ್ ಪತಂಜಲಿ ಯೋಗ ಪ್ರಕೃತಿ ಚಿಕಿತ್ಸಾ ತಜ್ಞರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *