ದಾವಣಗೆರೆ ಜೂ.17
2022-23 ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆಯಡಿ ದಾವಣಗೆರೆ ತಾಲ್ಲೂಕಿನಲ್ಲಿನ ಮೆಟ್ರಿಕ್ ನಂತರದ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿನ ಖಾಲಿ ಸ್ಥಾನಗಳ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ರಾಜ್ಯ ಹಾಸ್ಟೆಲ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ತಾಲ್ಲೂಕಿನಲ್ಲಿರುವ ಮೆಟ್ರಿಕ್ ನಂತರದ ನಿಲಯಗಳ ವಿವರ: ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ‘ಎ’ ವಿದ್ಯಾರ್ಥಿನಿಲಯ ಶಕ್ತಿನಗರ, ‘ಬಿ’ ವಿದ್ಯಾರ್ಥಿನಿಲಯ ಸರಸ್ವತಿ ನಗರ, ‘ಸಿ’ ವಿದ್ಯಾರ್ಥಿನಿಲಯ ಸರಸ್ವತಿ ನಗರ, ‘ಡಿ’ ವಿದ್ಯಾರ್ಥಿನಿಲಯ ಹದಡಿ ರಸ್ತೆ, ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ನಂ-01 ದಾವಣಗೆರೆ, ನಂ-02 ಬಿ.ಐ.ಇ.ಟಿ ರಸ್ತೆ, ನಂ-03 ಡಿ.ಸಿ.ಎಂ ಟೌನ್‌ಶಿಪ್, ನಂ-04 ದಾವಣಗೆರೆ, ಹೊಸ ವಿದ್ಯಾರ್ಥಿನಿಲಯ ಬಾಡಕ್ರಾಸ್, ಬಾಲಕರ ವೃತ್ತಿಪರ ವಿದ್ಯಾರ್ಥಿನಿಲಯ ಬಾಡಕ್ರಾಸ್, ಮಾಯಕೊಂಡ.
ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಹೆಚ್.ಕೆ.ಆರ್ ಸರ್ಕಲ್, ಬಾಡಕ್ರಾಸ್, ಕುಂದುವಾಡ ರಸ್ತೆ, ಬಿ.ಐ.ಇ.ಟಿ ರಸ್ತೆ, ಜೆ.ಹೆಚ್ ಪಟೇಲ್ ನಗರ, ಎಂ.ಸಿ.ಸಿ ‘ಬಿ’ ಬ್ಲಾಕ್ ದಾವಣಗೆರೆ ಈ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ರಾಜ್ಯ ಹಾಸ್ಟೆಲ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ ಅರ್ಜಿಯೊಂದಿಗೆ ಆರ್.ಡಿ ನಂಬರ್ ಇರುವ ಜಾತಿ/ಆದಾಯ ಪ್ರಮಾಣಪತ್ರದ ಜೆರಾಕ್ಸ್ ಪ್ರತಿ ಹಾಗೂ ಹಿಂದಿನ ತರಗತಿಯಲ್ಲಿ ಪಾಸಾದ ಅಂಕಪಟ್ಟಿ, ಶುಲ್ಕ ರಶೀದಿ, ಆಧಾರ್ ಕಾರ್ಡ್ ಪ್ರತಿಯೊಂದಿಗೆ, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ದಾವಣಗೆರೆ, ಇವರಿಗೆ ಜೂನ್.30 ರ ಸಂಜೆ 5.00 ಗಂಟೆಯೊಳಗೆ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08192-231413 ವೆಬ್‌ಸೈಟ್ ವಿಳಾಸ : sತಿ.ಞಚಿಡಿ.ಟಿiಛಿ.iಟಿ ಯನ್ನು ಸಂಪರ್ಕಿಸಬಹುದು.