ಸಾಸ್ವೆಹಳ್ಳಿ: ಕ್ಯಾಸಿನಕೆರೆ, ಕುಳಗಟ್ಟೆ ಮತ್ತು ಹುಣಸಘಟ್ಟ ಈ ಮೂರು ಪಂಚಾಯಿತಿಗಳ ಒಗ್ಗೂಡಿಸಿ ನಡೆದ ಜಿಲ್ಲಾಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಅದ್ದೂರಿಯಾಗಿ ಕ್ಯಾಸಿನಕೆರೆ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ನಡೆಯಿತು.
ಅಕಾರಿಗಳನ್ನು,ಶಾಸಕರನ್ನು ಹಾಗೂ ಜನಪ್ರತಿನಿಗಳನ್ನು ಗ್ರಾಮಸ್ಥರು, ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರಿಂದ ಪೂರ್ಣಕುಂಭದ ಸ್ವಾಗತ ಹಾಗೂ ಜಾನಪದ ತಂಡಗಳೊAದಿಗೆ ಗ್ರಾಮದ ವೀರಭದ್ರೇದಶ್ವರ ಸ್ವಾಮಿ ದೇವಸ್ಥಾನದಿಂದ ಸಭಾ ಕಾರ್ಯಕ್ರಮದ ವೇದಿಕೆಯವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಸ್ವಾಗತಿಸಿದರು.
ತಹಶೀಲ್ದಾರ್ ಎಚ್.ಜೆ ರಶ್ಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಸಂದರ್ಭದಲ್ಲಿ ನಾಲ್ವರಿಗೆ ಸೀಮಂತ ಕಾರ್ಯ, ಚೀಲಾಪುರದ ೨೮ ಜನರಿಗೆ, ಬಿದರಗಡ್ಡೆ ಗ್ರಾಮದ ೭ ಜನರಿಗೆ ೯೪ಸಿಯಲ್ಲಿ ಹಕ್ಕುಪತ್ರ ವಿತರಣೆ, ಕೋವಿಡ್ ನಿಂದ ಮೃತಪಟ್ಟ ಇಬ್ಬರ ಕುಟುಂಬಕ್ಕೆ ತಲಾ ಒಂದು ಲಕ್ಷದ ಚೆಕ್ ವಿತರಣೆ, ೫ ಜನರಿಗೆ ನಿರ್ಗತಿಕ ವಿಧವಾ ವೇತನ, ಐವರಿಗೆ ಮನಸ್ವಿನಿ, ೫೯ ಜನರಿಗೆ ಇಂದಿರಗಾA ರಾಷ್ಟ್ರೀಯ ವೃದ್ಯಾಪ ವೇತನ, ಇಬ್ಬರು ಅಂಗವಿಕಲರಿಗೆ ಅಂಗವಿಕಲ ವೇತನ, ಮೂವರಿಗೆ ಸಂಧ್ಯಾ ಸುರಕ್ಷ ಯೋಜನೆ, ೬ ಜನರಿಗೆ ಪೌತಿ ಹಕ್ಕು ಬದಲಾವಣೆ ಪತ್ರಗಳನ್ನು ಈ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು ಎಂದು ತಿಳಿಸಿದರು.
ಹೋಬಳಿ ವ್ಯಾಪ್ತಿಯ ಜನರು ತಮ್ಮ ಹೊಲಗಳಿಗೆ ಓಡಾಡಲು ರಸ್ತೆ ಸಮಸ್ಯೆ, ಕುಳಗಟ್ಟೆ ಗ್ರಾಮದ ಜನರು ಇ ಸ್ವತ್ತು, ಹೊಸಹನುಮನಹಳ್ಳಿ ಗ್ರಾಮದ ನಿವೇಶನ ಹಾಗೂ ಮನೆಯ ಸಮಸ್ಯೆ, ತ್ಯಾಗದಕಟ್ಟೆ ಗ್ರಾಮ ಸರ್ವೆ ನಂ ೨೮,೨೯ ಸಾಗುವಳಿ ಪತ್ರಕ್ಕೆ ಅರ್ಜಿ, ಹನುಮನಹಳ್ಳಿ ಸೇರಿದಂತೆ ಬಸ್ ಸೌಲಭ್ಯ ಇಲ್ಲದ ಗ್ರಾಮಗಳಿಗೆ ಬಸ್ ಸಂಚಾರ ಆರಂಭ ಸೇರಿದಂತೆ ಮನೆ ಹಕ್ಕು ಪತ್ರ, ಸಾಗುವಳಿ ಪತ್ರ, ವೃದ್ಯಾಪ್ಯ ವೇತನ, ಸಂಧ್ಯಾ ಸುರಕ್ಷ ವೇತನಕ್ಕೆ ಸಂಬAಸಿದAತೆ ೨೫೦ಕ್ಕೂ ಹೆಚ್ಚು ಅರ್ಜಿಗಳನ್ನು ಜನರು ಸಲ್ಲಿಸಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಚಾರ್ಯ ಮಾತನಾಡಿ, ಮುಖ್ಯಮಂತ್ರಿಗಳ ಜೊತೆ ಮಾತನಾಡಿ ೨೧೩೦ ಕ್ಕೂ ಹೆಚ್ಚು ಹೆಚ್ಚುವರಿ ಮನೆಗಳನ್ನು, ಕುಳಗಟ್ಟೆ ಕ್ರಾಸ್ ನಿಂದ ಹಾಲೇಶಪುರದ ವರೆಗೆ ೫.೫ ಮೀಟರ್ ಅಗಲದ ರಸ್ತೆ ಕಾಮಗಾರಿ, ಹೊಸಹಳ್ಳಿಯಿಂದ ಈ ಭಾಗದ ಎಲ್ಲಾ ಹಳ್ಳಿಗಳಿಗೂ ರೂ ೪೬ ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿಗೆ ಅನುದಾನವನ್ನು ಮಂಜೂರು ಮಾಡಿಸಲಾಗಿದೆ. ರಾಂಪುರದಿAದ ಗೋವಿನಕೋವಿ ಸೇತುವೆ ಹಾಗೂ ಬಾಗೆವಾಡಿಯಿಂದ ಚೀಲೂರುಗೆ ಸೇತುವೆ ಮಾಡಿಸುವುದಾಗಿ ಹೇಳಿದರು.
ಚುನಾವಣೆ ಬಂದಾಗ ಜನರನ್ನು ಮಾಲಿಕರೆನ್ನುತ್ತಾರೆ. ಗೆದ್ದ ನಂತರ ತಿರಸ್ಕಾರ ಮಾಡುತ್ತಾರೆ. ಆದರೆ ನನಗೆ ಮತದಾರರೆ ಮಾಲಿಕರು, ಈ ಕ್ಷೇತ್ರದ ಜನ ನೀವು ನನ್ನನ್ನು ಮೂರು ಭಾರಿ ಆಯ್ಕೆ ಮಾಡಿದ್ದೀರಿ, ಇದು ದಾಖಲೆ, ನಾನು ಈ ತಾಲ್ಲೂಕಿನ ಮೂರನೇ ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ. ಈ ಸಾಧನೆಗೆ ನೀವೆ ಪ್ರೇರಣೆ ಕೆಲವರಿಗೆ ಜನರನ್ನು ಕಂಡರೆ ಅಲರ್ಜಿ ಆದರೆ ನನಗೆ ಜನರೇ ಎನರ್ಜಿ ಎಂದರು.
ಜಿಲ್ಲಾಕಾರಿಗಳು ಬರುತ್ತಾರೆ, ಅವರೊಂದಿಗೆ ನಮ್ಮ ಸಮಸ್ಯೆ ಹೇಳಿಕೊಂಡರೆ ಪರಿಹಾರವಾಗುತ್ತದೆ ಎಂಬ ಆಶಾ ಭಾವನೆಯಿಂದ ಬಂದಿದ್ದ ನೂರಾರು ಜನ ನಿರಾಶಭಾವದಿಂದ ಗೊಣಗಿಕೊಳ್ಳುತ್ತಾ ಮನೆಗೆ ತೆರಳಿದ್ದು ಕಂಡು ಬಂತು.
ವೇದಿಕೆಯಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಕಾರಿ ರಾಮ ಭೋವಿ, ಸಿಡಿಪಿಓ ಮಹಂತೇಶ್ ಪೂಜಾರ್, ತಾಲ್ಲೂಕು ಕೃಷಿ ಅಕಾರಿ ಪ್ರತಿಮಾ, ಪಿಎ??? ಬಸನಗೌಡ ಬಿರಾದಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಕುಮಾರ್, ಚಂದ್ರಪ್ಪ ಬಂಗಾರಿ ಹಾಗೂ ರತ್ನಮ್ಮ ಸೇರಿದಂತೆ ಪಂಚಾಯಿತಿಯ ಸದಸ್ಯರು, ಅಕಾರಿಗಳು ಇದ್ದರು.
ಮುಖ್ಯಾಂಶಗಳು
೨೫೦ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ
೯೪ಸಿ ಯಲ್ಲಿ ೩೫ ಜನರಿಗೆ ಹಕ್ಕುಪತ್ರ
ಜಿಲ್ಲಾಕಾರಿಗಳು ಇಲ್ಲದಿರುವುದು ಬೇಸರ
ಮೆರಗು ತಂದ ಪೂರ್ಣಕುಂಭ ಸ್ವಾಗತ