ಪ್ರಸ್ತುತ ದಿನಗಳಲ್ಲಿ ಉದ್ಯಮವನ್ನು ಸ್ಥಾಪಿಸುವದಷ್ಟೇ
ಅಲ್ಲದೇ, ಉದ್ಯಮ ಕುರಿತು ಸಂಪೂರ್ಣವಾದ ಜ್ಞಾನ ಹೊಂದುವುದು
ಅತ್ಯಂತ ಮುಖ್ಯವಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ
ನಿರ್ದೇಶಕರಾದ ರಾಜೇಂದ್ರ ನಾಮದೇವ ಕದಂ ಹೇಳಿದರು.
ಬುಧವಾರದಂದು ಹರಿಹರದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ
ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು, ಕರ್ನಾಟಕ
ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಮತ್ತು ಸರ್ಕಾರಿ
ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ
ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮೂರು ದಿನಗಳ
ಉದ್ಯಮಶೀಲತಾ ತಿಳುವಳಿಕೆ ತರಬೇತಿ ಕಾರ್ಯಕ್ರಮದÀ
ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾರುಕಟ್ಟೆ ವ್ಯಾಪ್ತಿ, ಹಣಕಾಸಿನ ಸೌಲಭ್ಯಗಳು,
ಸಂಪನ್ಮೂಲಗಳ ಸರಿಯಾದ ಬಳಕೆ ಹಾಗೂ ಕಾಲಕ್ಕೆ ತಕ್ಕಂತೆ
ತಾಂತ್ರಿಕ ಉನ್ನತೀಕರಣಗೂಂಡಲ್ಲಿ ಮಾತ್ರ ಯಶಸ್ವಿ
ಉದ್ಯಮದಾರರಾಗಲು ಸಾಧ್ಯ. ಕೈಗಾರಿಕೆ ಮತ್ತು ವಾಣಿಜ್ಯ
ಇಲಾಖೆಯಲ್ಲಿನ ಯೋಜನೆಗಳ ಸದುಪಯೋಗ
ಪಡೆದುಕೊಂಡು ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಮೂಲಕ
ಯಶಸ್ವಿ ಉದ್ಯಮಿಗಳಾಗಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಲೀಡ್ ಬ್ಯಾಂಕ್ ಜಿಲ್ಲಾ ವಿಭಾಗೀಯ ಮಾರ್ಗದರ್ಶಿ ವ್ಯವಸ್ಥಾಪಕ ಜಿ.ಜಿ
ದೊಡ್ಡಮನಿ ಮಾತನಾಡಿ, ಬ್ಯಾಂಕಿಂಗ್ ವ್ಯವಸ್ಥೆಯ ನೀತಿ
ನಿಯಮಗಳು, ಅವಶ್ಯಕತೆಗೆ ಅನುಸಾರವಾಗಿ ಸಾಲ
ಪಡೆಯಬೇಕು, ಉತ್ತಮ ಯೋಜನಾ ವರದಿಗಳ ಮಾಹಿತಿ ಪಡೆದು
ಉದ್ಯಮದಲ್ಲಿ ತೊಡಗಿಸಿಕೊಳ್ಳಬೇಕು. ಉದ್ಯಮದಾರರಾಗುವ
ಹಂತದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ
ಅಂತಹ ಸಮಯದಲ್ಲಿ ಎದೆಗುಂದದೆ ಸವಾಲನ್ನು ಎದರಿಸಿ ಮುಂದೆ
ಹೋಗಬೇಕು ಎಂದರು.
ವೈಭವ ವೃತ್ತಿಪರ ತರಬೇತಿ ಸಂಸ್ಥೆಯ ವಲಯ
ಮುಖ್ಯಸ್ಥರಾದ ವಸಂತಕುಮಾರ ಕೆ.ಬಿ, ಸಿಡಾಕ್
ತರಬೇತುದಾರರಾದ ನಗ್ಮಾ ಭಾನು, ಬಸವರಾಜ ಜಿ.ಬಿ, ವಿನಯ ಜಿ.ಕೆÀ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಉಪನ್ಯಾಸಕ
ಮಂಜುನಾಥ ನರಸಗೊಂಡರ್, ಡಾ.ಮಂಜುನಾಥ, ಕುಮಾರಿ ರಾಧ
ಸೇರಿದಂತೆ ಇತರರು ಭಾಗವಹಿಸಿದ್ದರು.